Friday, July 11, 2025

Latest Posts

ಕರ್ನಾಟಕ ರಾಜ್ಯ ಕ್ರೀಡಾಕೂಟದ ರೈಪಲ್ ಶೂಟಿಂಗ್ ನಲ್ಲಿ, ರನ್ನರ್ ಅಪ್ ಚನ್ನವೀರಪ್ಪ ಗಾಮನಗಟ್ಟಿ!

- Advertisement -

03-12-2022 ಶನಿವಾರ ಸಂಜೆ 04:00 ಗಂಟೆಗೆ, ಜಯನಗರ, ಆರ್.ಎ. ಮುಂಡ್ಕುರ್, ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಅಕಾಡೆಮಿ ಬನ್ನೇರುಘಟ್ಟ ರಸ್ತೆ, ಬೆಂಗಳೂರು, ದಿನಾಂಕ: 27/11/2022 ರಿಂದ 03/12/2022ರ ವರಗೆ ಎಳು ದಿನಗಳಿಂದ ನಡೆದ ರಾಜ್ಯ ಮಟ್ಟದ ವೃತ್ತಿ ಸ್ಪರ್ಧೆ ಹಾಗೂ ಕ್ರೀಡಾಕೂಟವು ಮುಕ್ತಾಯಗೊಂಡಿತು.

ದಿನಾಂಕ: 01/12/2022 ರಂದು ಕರ್ನಾಟಕ ರಾಜ್ಯ ಗೃಹರಕ್ಷಕ ದಳ, ಪೌರ ರಕ್ಷಣೆ ಅಗ್ನಿಶಾಮಕ ಮತ್ತು ತುರ್ತು ಸೇವೆಗಳು, ಹಾಗೂ ರಾಜ್ಯ ವಿಪತ್ತು ಸ್ಪಂದನಾ ಪಡೆಗಳ ವೃತ್ತಿ ಸ್ಪರ್ಧೆ ಹಾಗೂ ಕ್ರೀಡಾಕೂಟವು, ಉದ್ಘಾಟನೆಗೊಂಡು, ಇಂದು 03/12/2022 ರಂದು ಕೊನೆಗೊಂಡಿತ್ತು.

ಬಿಜೆಪಿಗೆ ಸೇರ್ಪಡೆಗೊಂಡ ಡಾ.ಧನಂಜಯ್ ಸರ್ಜಿ ಮತ್ತು ಕೆ.ಎಸ್.ಪ್ರಶಾಂತ್..

ರಾಜ್ಯ ಮಟ್ಟದ ಕ್ರೀಡಾಕೂಟದ, ಗೃಹರಕ್ಷಕ ದಳದ ಪೂರ್ವ ವಲಯ ಶಿವಮೊಗ್ಗ ಜಿಲ್ಲೆಯಿಂದ ವೃತಿ ಸ್ಪರ್ಧೆ
ರೈಪಲ್ ಶೂಟಿಂಗ್ ನಲ್ಲಿ, ಭಾಗವಹಿಸಿದ ಚನ್ನವೀರಪ್ಪ ಗಾಮನಗಟ್ಟಿ ರವರು, ನೂರಕ್ಕೆ 94 ಅಂಕಗಳೊಂದಿಗೆ ಎರಡನೇ ಸ್ಥಾನ ಪಡೆದು, ರನ್ನರ್ ಆಗಿ ಮುಖ್ಯ ಅತಿಥಿಗಳಿಂದ ಕಫ್ ನ್ನು ಪಡೆದುಕೊಂಡರು.

ಸಮಾರೋಪ ಸಮಾರಂಭದ ಕಾರ್ಯಕ್ರಮದಲ್ಲಿ, ಮುಖ್ಯ ಅತಿಥಿಗಳಾಗಿ, ಮಾನ್ಯ ಶ್ರೀ ಎ.ಎಂ. ಪ್ರಸಾದ್, ಭಾ.ಪೊ.ಸೇ ನಿವೃತ್ತ ಪೊಲೀಸ್ ಮಹಾ ನಿರ್ದೇಶಕರು,ಗೃಹರಕ್ಷಕ ದಳ, ಪೌರ ರಕ್ಷಣೆ ಹಾಗೂ ಮಹಾ ನಿರ್ದೇಶಕರು, ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳು, ವಹಿಸಿದ್ದರು.

ಜನ ಸಂಕಲ್ಪ ಯಾತ್ರೆಗೆ ಅಭೂತಪೂರ್ವ ಬೆಂಬಲ ಸಿಕ್ಕಿದೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌

ಅಧ್ಯಕ್ಷತೆಯನ್ನು ಡಾ|| ಅಮರ್‌ ಕುಮಾರ್ ಪಾಂಡೆ, ಭಾ.ಪೊ.ಸೇ, ಪೊಲೀಸ್ ಮಹಾ ನಿರ್ದೆಶಕರು, ಮಹಾ ಸಮಾದೇಷ್ಟರು, ಗೃಹ ರಕ್ಷಕ ದಳ, ನಿರ್ದೇಶಕರು ಪೌರ ರಕ್ಷಣೆ, ಮಹಾ ನಿರ್ದೇಶಕರು, ಅಗ್ನಿಶಾಮಕ ಮತ್ತು ತುರ್ತು ಸೇವೆಗಳು ಹಾಗೂ ಮಹಾ ನಿರ್ದೆಶಕರು, ರಾಜ್ಯ ವಿಪತ್ತು ಸ್ಪಂದನಾ ಪಡೆ, ಕರ್ನಾಟಕ ರಾಜ್ಯ, ವಹಿಸಿದ್ದರು. ಕ್ರೀಡಾಪಟುಗಳಿಗೆ ಬಹುಮಾನ ವಿತರಿಸಿದರು.

ಕಾರ್ಯಕ್ರಮದಲ್ಲಿ ಡಿಐಜಿಪಿ ಶ್ರೀ ಕೆ.ಟಿ.ಬಾಲಕೃಷ್ಣ, ಡಿಸಿಜಿ ಮಾನ್ಯ ಶ್ರೀಮತಿ ರೇಣುಕಾ ಸುಕುಮಾರ್, ಹಾಗೂ ಆಕಾಡಮಿ ಕಮಾಂಡೆಂಟ್ ಸಮೀವುಲ್ಲಾ ಖಾನ್ ಹಾಗೂ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.

- Advertisement -

Latest Posts

Don't Miss