‘ರಸ್ತೆಯಲ್ಲಿ ಬಿದ್ದಿರುವ ಗುಂಡಿಗಳನ್ನು ಸರಿಪಡಿಸದೆ ಇದ್ದರೆ ಉಗ್ರ ಹೋರಾಟ ಮಾಡುತ್ತೇವೆ’

ಹಾಸನ: ಬೇಲೂರು ಸಕಲೇಸಪುರ ಮುಖ್ಯ ರಸ್ತೆಯು ತುಂಬಾ ಹದಗೆಟ್ಟಿದ್ದು ವಾಹನ ಸವಾರರು, ಸಾರ್ವಜನಿಕರು ಓಡಾಡಲು ತುಂಬಾ ಕಷ್ಟಕರವಾಗುತ್ತಿದ್ದು ಕೂಡಲೇ ಶಾಸಕರು ರಸ್ತೆಯಲ್ಲಿ ಬಿದ್ದಿರುವ ಗುಂಡಿಗಳನ್ನು ಸರಿಪಡಿಸದೆ ಇದ್ದಲಿ ಮುಂದೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಸನ್ಯಾಸಿಹಳ್ಳಿ ಅಧ್ಯಕ್ಷೆ ಪ್ರೇಮ ಹೇಳಿದರು.

ಜನ ಸಂಕಲ್ಪ ಯಾತ್ರೆಗೆ ಅಭೂತಪೂರ್ವ ಬೆಂಬಲ ಸಿಕ್ಕಿದೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌

ಬಿಕ್ಕೊಡು ರಸ್ತೆಯಲ್ಲಿರುವ ಸನ್ಯಾಸಿಹಳ್ಳಿ ಪಂಚಾಯತಿಯ ರಸ್ತೆಯಲ್ಲಿ ಬಿದ್ದಿರುವ ಗುಂಡಿಗಳ ಮದ್ಯೆ ವಾಹನಗಳನ್ನು ತಡೆದು ಪ್ರತಿಭಟನೆ ನಡೆಸಿ ನಂತರ ಮಾತನಾಡಿದ ಅವರು ಸುಮಾರು ಆರು ತಿಂಗಳಿನಿಂದ ಈ ಬಾಗದ ರಸ್ತೆ ಹಾಳಾಗಿದ್ದು ಶಾಸಕರು ಕೇವಲ ಮಣ್ಣನ್ನು ಹಾಕಿ ಕಣ್ಣೋರೆಸುವ ಕೆಲಸ ಮಾಡಿದ್ದರೆ ಅಲ್ಲದೆ ಈ ಬಾರಿ ಅತಿಯಾದ ಮಳೆಯಿಂದ ರಸ್ತೆಯಲ್ಲಾ ಹಾಳಾಗಿದೆ ಕೂಡಲೇ ಶಾಸಕರು ರಸ್ತೆಯನ್ನು ಸರಿಪಡಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಸರಿಪಡಿಸದೆ ಇದ್ದಲ್ಲಿ ಪ್ರತಿಭಟನೆ ಬೇರೆ ಸ್ವರೂಪ ಪಡೆಯುತ್ತದೆ ಎಂದು ಹೇಳಿದರು.

ಅಂಜನಾದ್ರಿಯಲ್ಲಿ ಇಂದು ಹನುಮ ಮಾಲೆ ವಿಸರ್ಜನೆ

ಸನ್ಯಾಸಿಹಳ್ಳಿ ಪಂಚಾಯತಿ ಮಾಜಿ ಅಧ್ಯಕ್ಷ ಶಿವೇಗೌಡ ಮಾತನಾಡಿ ಪ್ರತಿಯೊಂದು ಬಾಷಣದಲ್ಲಿ ಶಾಸಕರು ರಸ್ತೆಗೆ 150 ಕೋಟಿ ಅನುದಾನದ ತಂದಿದ್ದು ತಾಲೂಕಿನ ಎಲ್ಲಾ ರಸ್ತೆಗಳನ್ನು ಮಾಡಲಾಗಿದೆ ಎಂದು ಹೇಳುತ್ತಾರೆ, ಆದರೆ ಇವರು ಮಾಡಿರುವುದು ಅವರ ಊರಿನ ರಸ್ತೆ ಸರಿಪಡಿಕೊಂಡಿರಬಹುದು ಕೇವಲ ಬಾಷಣಕ್ಕೆ ಸೀಮಿತರಾಗಿರುವ ಶಾಸಕರಿಂದ ಯಾವುದೇ ಅಭಿರುದ್ಧಿ ಕೆಲಸ ನಡೆದಿಲ್ಲ, ಬೇಲೂರು, ಸಕಲೇಸಪುರ ರಸ್ತೆ ತುಂಬಾ ಗುಂಡಿ ಬಿದ್ದಿದ್ದು ತಕ್ಷಣ ಇತ್ತ ಗಮನ ಹರಿಸಿ ಸರಿಪಡಿಸದೆ ಇದ್ದಲ್ಲಿ ಮುಂದೆ ನಡೆಯುವ ಚುನಾವಣೆಯಲ್ಲಿ ಈ ಗ್ರಾಮದ ಜನರು ತಕ್ಕ ಪಾಠ ಕಲಿಸಲ್ಲಿದ್ದಾರೆ ಎಂದು ಹೇಳಿದರು.

ಪ್ರತಿಭಟನೆಯಲ್ಲಿ ಮೋಹನ್ ಕುಮಾರ್, ಪುಟ್ಟಸ್ವಾಮಿ, ನಂದೀಶ್ ಮಲ್ಲೇಶ್ ರಾಮು ಕೇಶವಮೂರ್ತಿ, ಇತರರು ಇದ್ದರು.

About The Author