Sunday, December 22, 2024

Latest Posts

ಅಂಬೇಡ್ಕರ್ ಪರಿನಿರ್ವಾಣ ದಿನದ ಕಾರ್ಯಕ್ರಮದಲ್ಲಿ ಗದ್ಗದಿತರಾದ ಶಾಸಕ ಹೆಚ್.ಕೆ. ಕುಮಾರಸ್ವಾಮಿ

- Advertisement -

ಹಾಸನ: ಅಂಬೇಡ್ಕರ್ ಪರಿನಿರ್ವಾಣ ದಿನದ ಕಾರ್ಯಕ್ರಮದಲ್ಲಿ ಶಾಸಕರು ಗದ್ಗದಿತರಾದರು. ಹಾಸನ ನಗರದ ಜಿಲ್ಲಾಧಿಕಾರಿ ಕಚೇರಿ ಆವಣರದಲ್ಲಿ ಅಂಬೇಡ್ಕರ್ ಪರಿನಿರ್ವಾಣ ಕಾರ್ಯಕ್ರಮ ನಡೆಯತು. ಕಾರ್ಯಕ್ರಮದಲ್ಲಿ ಆಲೂರು , ಸಕಲೇಶಪುರ ಶಾಸಕ ಹೆಚ್.ಕೆ. ಕುಮಾರಸ್ವಾಮಿಯವರು  ಕಣ್ಣೀರು ಹಾಕಿದರು. ಕಾರ್ಯಕ್ರಮದಲ್ಲಿ ಭಾಷಣ ಮಾಡುವ ವೇಳೆ ದುಃಖಿತರಾದ ಕುಮಾರಸ್ವಾಮಿ ಅಂಬೇಡ್ಕರ್ ರವರು ಪುನಃ ಪುನಃ ಜ್ಞಾಪಕಕ್ಕೆ ಬರುತ್ತಾರೆ. ಅವರ ಆಶಯಗಳು ಇನ್ನೂ ಈಡೇರಿಲ್ಲ, ಜನಪ್ರತಿನಿಧಿಯಾಗಿ ನಾವೆಲ್ಲರೂ ಕೂಡಾ ನೋಡುತ್ತಾ ಇದ್ದೇವೆ. ಎಲ್ಲೋ ಒಂದು ಕಡೆ ಅವರ ಆಶಯಗಳಿಗೆ ಅಣಕ ಮಾಡುವಂತಹ ಘಟನೆಗಳು ಇನ್ನೂ ಕೂಡಾ ನಡೆಯುತ್ತಿವೆ. ಅವರು ಕೊಟ್ಟಂತಹ ಸಮಾಜವಾದಿ, ಜಾತ್ಯಾತೀತತೆ, ಪ್ರಜಾಪ್ರಭುತ್ವದ ಸಂವಿಧಾನ ಸಹೋದರತ್ವವನ್ನ ಸಮಾನತೆಯನ್ನು ಹೇಳುವಂತಹ ಸಂವಿಧಾನವನ್ನು ಇನ್ನೂ ಕೂಡಾ ಪೂರ್ಣವಾಗಿ ಜಾರಿ ಮಾಡಿಲ್ಲ ಎಂಬುದನ್ನು ನಾವೆಲ್ಲರೂ ಕೂಡಾ ಒಪ್ಪಲೇಬೇಕು ಎಂದು ಕಣ್ಣೀರು ಹಾಕಿದರು.

ಚನ್ನರಾಯಪಟ್ಟಣದಲ್ಲಿ ಡಾಕ್ಟರ್ ಬಿ.ಆರ್.ಅಂಬೇಡ್ಕರ್ ಅವರ 66ನೇ ಪರಿನಿಬ್ಬಾಣ ಕಾರ್ಯಕ್ರಮ

ಅವರು ಹಾಕಿಕೊಟ್ಟಂತಹ ಹೋರಾಟ ಮಾರ್ಗ ಇನ್ನೂ ಕೂಡಾ ಪ್ರಾರಂಭಿಕ ಹಂತದಲ್ಲಿಯೇ ಇದೆಯೆಂಬ  ಭಾವನೆ ಮೂಡುತ್ತಿದೆ. ಇದಕ್ಕೆ ನಾವೆಲ್ಲರೂ ಬದ್ಧರಾಗಿದ್ದೇವೆ, ಅಧಿಕಾರ ಒಂದು ಕಡೆ, ಹೋರಾಟ ಒಂದು ಕಡೆಯಾಗಿದೆ. ಅಧಿಕಾರದಿಂದ ಎಲ್ಲವನ್ನೂ ಕೂಡಾ ಸಾಧಿಸಲು ಸಾಧ್ಯವಿಲ್ಲ, ಹೋರಾಟದಿಂದ ಮಾತ್ರ ಅವರನ್ನು ಅನುಸರಿಸಲು ಸಾಧ್ಯ ಎಂಬುದನ್ನ ನಮಗೆ ತೋರಿಸಿಕೊಟ್ಟಿದ್ದಾರೆ ಎಂದು ಶಾಸಕರು ಹೇಳಿದರು.

ಕುಡಿಯುವ ನೀರಿನ ಬಾವಿಯಲ್ಲಿ ಡಿಸೇಲ್ ಯುಕ್ತ ನೀರು, ಆತಂಕದಲ್ಲಿರುವ ಜನರು

ಡಿ.17 ರಂದು ಎನ್ಎಸ್ ಯುಐ ವತಿಯಿಂದ ಕರ್ನಾಟಕ ರಾಜ್ಯಾದ್ಯಂತ ಕಾಲೇಜುಗಳ ಬಂದ್ ಮತ್ತು ಪ್ರತಿಭಟನೆಗೆ ಕರೆ

- Advertisement -

Latest Posts

Don't Miss