ಗ್ರಾಮೀಣ ಪ್ರದೇಶದ ಜನರನ್ನು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ತೊಡಗಿಸಿಕೊಳ್ಳಬೇಕು: ಡಾ.ಹೆಚ್.ಎಲ್.ನಾಗರಾಜ್

ಮಂಡ್ಯದ ನೆಲ ರೈತರ ನಾಡು, ಕನ್ನಡ ಭಾಷೆ ಹಾಗೂ ನಾಡಿನ ಸಂಸ್ಕೃತಿಯನ್ನು ಹೆಚ್ಚು ಬೆಳೆಸುವ ಸ್ಥಳವಾಗಿದೆ. ರೈತ ಸಂಸ್ಕೃತಿಯ ಸಮುದಾಯದಲ್ಲಿ ಸಾಹಿತ್ಯ ಸಮ್ಮೇಳನ ನಡೆಸುವುದರಿಂದ ಅದರ ವಿಶೇಷತೆಗಳೆ ಬೇರೆ ಇರುತ್ತದೆ. ಭಾಷೆ ಮತ್ತು ಸಂಸ್ಕೃತಿಯನ್ನು ಬೆಳೆಸಲು ಗ್ರಾಮೀಣ ಪ್ರದೇಶದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ವನ್ನು ಹಮ್ಮಿಕೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ:ಡಾ.ಹೆಚ್.ಎಲ್.ನಾಗರಾಜ್ ಅವರು ತಿಳಿಸಿದರು.

ಅವರು ಇಂದು ದುದ್ದ ಗ್ರಾಮದಲ್ಲಿ ನಡೆದ ಮಂಡ್ಯ ತಾಲ್ಲೂಕು 17ನೇಯ ಕನ್ನಡ ಸಾಹಿತ್ಯ ಸಮ್ಮೇಳನದ ಕಾರ್ಯಕ್ರಮ ಕುರಿತು ಮಾತನಾಡಿದರು. ಮಕ್ಕಳನ್ನು ಬಲವಂತವಾಗಿ ಆಂಗ್ಲ ಭಾಷೆಗೆ ಒತ್ತಾಯ ಮಾಡಿದರೆ ಮಕ್ಕಳು ಮಾನಸಿಕ ಬಲ ಕುಗ್ಗಿ ಹೋಗುವುದು, ಮಕ್ಕಳ ಆಲೋಚನಾ ಶಕ್ತಿ, ಸೃಜನಶೀಲತೆ ಕುಂದು ಹೋಗುವುದು. ಕನ್ನಡ ಭಾಷೆ ಯೊಂದಿಗೆ ಇಂಗ್ಲಿಷ್ ಕಲಿಸಲು ವ್ಯವಸ್ಥೆ ಮಾಡಿದೆ.ಕನ್ನಡ ಭಾಷೆಯ ಮಾಧ್ಯಮದಲ್ಲಿ ಓದಿಸಿದರೆ, ಕನ್ನಡ ಭಾಷೆಯನ್ನು ಪ್ರಧಾನವಾಗಿ ಬಳಸಿದರೆ ಭಾಷೆ ಮತ್ತು ಸಂಸ್ಕೃತಿಗಳ ಬಗ್ಗೆ ಗೌರವ ಬೆಳೆಯುವುದು ಮತ್ತು ಹೊಸ ಹೊಸ ಆಲೋಚನೆಗಳು ಸೃಜನಶೀಲತೆ ಬೆಳೆಯುವುದು ಎಂದರು.

ಕುಣಿಗಲ್ ನಲ್ಲಿ ಬಿಜೆಪಿಯಿಂದ ಜನ ಸಂಕಲ್ಪ ಯಾತ್ರೆ : ಸಿಎಂ ಬಸವರಾಜ ಬೊಮ್ಮಾಯಿ ಉದ್ಘಾಟನೆ

ನಾವು ಮಾತನಾಡುವಾಗ, ಕಲಿಯುವಾಗ, ಪತ್ರಿಕೆಗಳನ್ನು ಓದುವಾಗ, ಸಿನಿಮಾಗಳನ್ನು ನೋಡುವಾಗ, ನಾಟಕಗಳನ್ನು ನೋಡುವಾಗ ಭಾಷೆ ಬೆಳೆಯುತ್ತದೆ. ನಮ್ಮಲ್ಲಿ ಎಲ್ಲೆಲ್ಲಿ ಕನ್ನಡ ಭಾಷೆಯನ್ನು ಹೆಚ್ಚು ಹೆಚ್ಚು ಬಳಸಲು ಸಾಧ್ಯವಾಗುವುದು ಅಲ್ಲಿ ಕನ್ನಡವನ್ನು ಬಳಸಿದರೆ ಅದು ದೊಡ್ಡ ಮಟ್ಟದಲ್ಲಿ ಸಂಸ್ಕೃತಿಯನ್ನು ಸೃಷ್ಟಿ ಮಾಡುತ್ತದೆ ಎಂದರು.

ನಾವು ಕನ್ನಡಿಗರು ಕನ್ನಡ ಭಾಷೆಯನ್ನು ನಮ್ಮ ತಾಯಿಯ ರೀತಿ ಎಲ್ಲಿಯವರೆಗೆ ಪ್ರೀತಿಸುತ್ತೇವೆ ಅಲ್ಲಿಯವರೆಗೂ ಕನ್ನಡ ಭಾಷೆ ಮತ್ತು ಸಂಸ್ಕೃತಿಗೆ ಯಾರು ಕೂಡ ದಕ್ಕೆ ತರಲು ಸಾಧ್ಯವಿಲ್ಲ ಎಂದರು. ಸರ್ಕಾರಿ ಇಲಾಖೆಯ ಅಧಿಕಾರಿಗಳು ಇಂತಹ ಸಮ್ಮೇಳನದ ಅವಕಾಶವನ್ನು ಉಪಯೋಗಿಸಿಕೊಂಡು ಜನಗಳಿಗೆ ಸರ್ಕಾರದ ಸವಲತ್ತುಗಳನ್ನು ತಲುಪಿಸಬೇಕು ಎಂದರು.

ಚಿತ್ರದುರ್ಗದಲ್ಲಿ ಜನವರಿ 8 ರಂದು ದಲಿತ ಐಕ್ಯತಾ ಸಮಾವೇಶ : ಡಾ.ಜಿ.ಪರಮೇಶ್ವರ್​ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ

ಕಾರ್ಯಕ್ರಮದಲ್ಲಿ ಶಾಸಕ ಸಿ.ಎಸ್. ಪುಟ್ಟರಾಜು, ಸಾಹಿತಿಗಳು ಹಾಗೂ ಸಂಸ್ಕೃತಿ ಚಿಂತಕರು ಡಾ.ಲೀಲಾ ಅಪ್ಪಾಜಿ, ಮನ್ ಮುಲ್ ಅಧ್ಯಕ್ಷರಾದ ಬಿ.ಆರ್.ರಾಮಚಂದ್ರು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಸಿ.ಕೆ.ರವಿಕುಮಾರ ಚಾಮಲಾಪುರ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾದ ಎಂ.ವಿ.ಧರಣೇಂದ್ರಯ್ಯ, ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷರಾದ ಡಾ.ಹಿ.ಶಿ.ರಾಮಚಂದ್ರ, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಎಂ.ಆರ್.ಮಂಜು ಮುತ್ತೇಗೆರೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

About The Author