Friday, December 13, 2024

Latest Posts

ಮಂಗಳವಾರ ರಾಜ್ಯಕ್ಕೆ ರೆಬೆಲ್ಸ್ ವಾಪಸ್- ವನವಾಸಕ್ಕೆ ಮಂಗಳ ಹಾಡಲು ತೀರ್ಮಾನ

- Advertisement -

ಬೆಂಗಳೂರು: ಸಮ್ಮಿಶ್ರ ಸರ್ಕಾರದ ವಿರುದ್ಧ ಅಸಮಾಧಾನದಿಂದಾಗಿ ರಾಜೀನಾಮೆ ನೀಡಿ ರಾಜ್ಯವನ್ನೇ ಬಿಟ್ಚು ಮುಂಬೈ ಸೇರಿರುವ ಕಾಂಗ್ರೆಸ್-ಜೆಡಿಎಸ್ ನ ಅತೃಪ್ತ ಶಾಸಕರು ರಾಜ್ಯಕ್ಕೆ ಮರಳಲು ನಿರ್ಧರಿಸಿದ್ದು, ತಾವು ಏನೆಲ್ಲಾ ಕಾರಣಗಳಿಗೆ ರಾಜೀನಾಮೆ ನೀಡಿದ್ರು ಅನ್ನೋದನ್ನು ಬಹಿರಂಗಪಡಿಸಲಿದ್ದಾರೆ.

ರಾಜೀನಾಮೆ ನೀಡಿ ಸಮ್ಮಿಶ್ರ ಸರ್ಕಾರವನ್ನು ಉರುಳಿಸಲು ಕಾರಣರಾಗಿದ್ದ ಅತೃಪ್ತ ಶಾಸಕರು, ಬಿಎಸ್ವೈ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬೆನ್ನಲ್ಲೇ ಇದೀಗ ರಾಜ್ಯಕ್ಕೆ ವಾಪಸ್ಸಾಗುವ ತೀರ್ಮಾನಕ್ಕೆ ಬಂದಿದ್ದಾರೆ. ಕಳೆದೊಂದು ತಿಂಗಳಿನಿಂದ ರಾಜ್ಯದಲ್ಲಿ ನಡೆಯುತ್ತಿದ್ದ ರಾಜಕೀಯ ಬೃಹನ್ನಾಟಕಕ್ಕೆ ಮುನ್ನುಡಿ ಬರೆದಿದ್ದ ಅತೃಪ್ತ ಶಾಸಕರು ಮಂಗಳವಾರ ರಾಜ್ಯಕ್ಕೆ ಬರಲಿದ್ದು, ತಾವು ಯಾವ ಕಾರಣಗಳಿಗೆ ರಾಜೀನಾಮೆ ನೀಡಿ ಹೊರ ನೆಡದೆವು ಅನ್ನೋ ವಿಚಾರವನ್ನು ಪ್ರಸ್ತುತಪಡಿಸಲಿದ್ದಾರೆ.

ಇನ್ನು ಸರ್ಕಾರ ಪತನವಾದ ಕೂಡಲೇ ರಾಜ್ಯಕ್ಕೆ ಬರೋದಾಗಿ ತಿಳಿಸಿದ್ದ ರೆಬೆಲ್ಸ್ ಇದೀಗ ಬಿಜೆಪಿ ಸರ್ಕಾರ ರಚನೆಯಾಗುವ ಧೈರ್ಯದ ಮೇಲೆ ಮರಳುವ ತೀರ್ಮಾನ ತೆಗೆದುಕೊಂಡಿದ್ದಾರೆ. ಸೋಮವಾರ ಬಹುಮತ ಯಾಚಿಸಲಿರುವ ಸಿಎಂ ಯಡ್ಯೂರಪ್ಪ, ನೂರಕ್ಕೆ ನೂರರಷ್ಟು ಗೆಲುವು ನಮ್ಮದೇ ಅಂತ ಭರವಸೆ ವ್ಯಕ್ತಪಡಿಸಿರೋದ್ರಿಂದ ಮುಂಬೈನಲ್ಲಿರುವ ರೆಬೆಲ್ಸ್ ನಿರಾಳರಾಗಿದ್ದಾರೆ.

ಇನ್ನು ಸ್ಪೀಕರ್ ಎದುರು ರಾಜೀನಾಮೆ ಕುರಿತಾಗಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದಾಗ ದೋಸ್ತಿ ನಾಯಕರಿಂದ ನಮಗೆ ರಕ್ಷಣೆ ಬೇಕೆಂದು ಕೋರಿದ್ದ ಅತೃಪ್ತರು, ಇದೀಗ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಾದ್ರೆ ದೋಸ್ತಿಗಳ ಅಬ್ಬರ ನಡೆಯೋದಿಲ್ಲ ಅಂತ ಲೆಕ್ಕಾಚಾರ ಹಾಕಿ ಈ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ. ಈ ಮೂಲಕ ತಿಂಗಳಿಂದ ಮನೆ-ಮಠ, ಕುಟುಂಬವನ್ನು ತೊರೆದು ಮುಂಬೈನಲ್ಲಿರುವ ಅತೃಪ್ತರು ತಮ್ಮ ವನವಾಸಕ್ಕೆ ಅಂತ್ಯ ಹಾಡಲಿದ್ದಾರೆ.

- Advertisement -

Latest Posts

Don't Miss