ಹಾಸನ: ಇತ್ತಿಚಿಗೆ ಶ್ರೀನಗರದಲ್ಲಿ ಕ್ಷೇತ್ರದ ಶಾಸಕರಾದ ಪ್ರೀತಂ ಗೌಡ ಅವರು ಸ್ಥಳೀಯ ಆಡು ಭಾಷೆಯಲ್ಲಿ ಮಾತನಾಡಿದ್ದು, ಕೆಲಸ ಮಾಡಿ ಕೂಲಿ ಕೇಳಿದ್ದಾರೆ ಅಷ್ಟೆ. ಅದಬಿಟ್ಟು ಬೆದರಿಕೆ ಹಾಕಿದ್ದಾರೆ ಎನ್ನುವ ವಿರೋಧಿಗಳ ಮಾತು ಸತ್ಯಕ್ಕೆ ದೂರವಾಗಿದೆ ಎಂದು ಬಿಜೆಪಿ ನಗರ ಮಂಡಲ ಅಧ್ಯಕ್ಷರಾದ ವೇಣುಗೋಪಾಲ್ ಹೇಳಿಕೆ ನೀಡಿ ಸಮರ್ಥಿಸಿಕೊಂಡರು.
ದೊಡ್ಡಗೌಡರ ಕುಟುಂಬದ ವಿರುದ್ಧ ವಾಗ್ದಾಳಿ ನಡೆಸಿದ ಶಾಸಕ ಪ್ರೀತಂಗೌಡ
ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಮಾತನಾಡುತ್ತಾ, ನಗರದ ಶ್ರೀನಗರ ಅಲ್ಪಸಂಖ್ಯಾತರ ವಾರ್ಡ್ನಲ್ಲಿ ಇತ್ತೀಚೆಗೆ ಶಾಸಕ ಪ್ರೀತಂಗೌಡ ಧಮ್ಕಿ ಹಾಕಿ ಮತ ಕೇಳಿದ್ದಾರೆ. ಆರೋಪ ಶಾಸಕರ ವಿರೋಧಿಗಳು ಮಾಡಿರುವ ದುಷ್ಕೃತ್ಯವಾಗಿದೆ. ಶ್ರೀನಗರ ನಿವಾಸಿಗಳೊಂದಿಗೆ ಆತ್ಮೀಯವಾಗಿ ಮಾತನಾಡುವ ವೇಳೆ, ತಾನು ಮಾಡುವ ಅಭಿವೃದ್ದಿ ಕೆಲಸಕ್ಕೆ ಕೂಲಿ ರೂಪದಲ್ಲಿ ಮತ ನೀಡಿ ಎಂದು ಕೇಳಿದ್ದಾರೆ. ಇದನ್ನು ಕೆಲ ಮಾಧ್ಯಮಗಳಲ್ಲಿ ತಪ್ಪಾಗಿ ಬಿಂಬಿಸಲಾಗಿದೆ.
ಶಾಸಕ ಪ್ರೀತಂ ಗೌಡ ಶ್ರೀನಗರ ನಿವಾಸಿಗಳೊಂದಿಗೆ ಆತ್ಮೀಯ ಒಡನಾಟಹೊಂದಿದ್ದು ಜಾತ್ಯತೀತವಾಗಿ ಸಮಗ್ರ ಅಭಿವೃದ್ಧಿಗೆ ಮುಂದಾಗಿದ್ದಾರೆ ಎಂದರು. ಶಾಸಕರು ಮಾತನಾಡಿರುವ ವಿಡಿಯೋವನ್ನು ವೈರಲ್ ಮಾಡಿ ಅವರ ಮೇಲೆ ತಪ್ಪು ಅಭಿಪ್ರಾಯ ಬರುವಂತೆ ಮಾಡಲಾಗಿದ್ದು, ಶ್ರೀನಗರ ಕಾಲೋನಿಯಲ್ಲಿ ನಜನರಿಂದ ಬಿಜೆಪಿಗೆ ಮತ ಬಾರದೆ ಇದ್ದರು ಶಾಸಕ ಪ್ರೀತಂ ಗೌಡ ಅವರು ಶ್ರೀನಗರದಲ್ಲಿ ಅನೇಕ ಅಭಿವೃದ್ದಿ ಕೆಲಸಗಳನ್ನು ಮಾಡಿದ್ದಾರೆ.
ಹಾಸನದ ಶ್ರೀನಗರಕ್ಕೆ ರಾತ್ರಿ ಶಾಸಕ ಪ್ರೀತಂಗೌಡ ಭೇಟಿ
ಇದುವರೆಗೂ ಜಿಲ್ಲೆಯಲ್ಲಿ ಆಡಳಿತ ನಡೆಸಿರುವ ಜೆಡಿಎಸ್ ಶಾಸಕರು ಹಾಸನ ಕ್ಷೇತ್ರವನ್ನು ಸಮಗ್ರ ಅಭಿವೃದ್ದಿ ಮಾಡುವಲ್ಲಿ ವಿಫಲರಾಗಿದ್ದು, ಇದೀಗ ಶಾಸಕ ಪ್ರೀತಂಗೌಡ ಸಮಗ್ರ ಅಭಿವೃದ್ಧಿಗೆ ಮುಂದಾಗಿದ್ದಾರೆ, ಅವರ ಅಭಿವೃದ್ದಿಯನ್ನು ಸಹಿಸದೆ ಕೆಲವರು ಅವರ ಬಗ್ಗೆ ಅಪಪ್ರಚಾರ ಮಾಡುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು. ಜಾತ್ಯತೀತವಾಗಿ ಎಲ್ಲರನ್ನೂ ಸಮಾನವಾಗಿ ಪರಿಗಣಿಸಿ ಹಾಸನ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಪ್ರೀತಂ ಗೌಡರು ಮುಂದಾಗಿದ್ದು, ಅವರ ಹೇಳಿಕೆಯನ್ನು ತಪ್ಪು ಅರ್ಥವಾಗಿ ಕಲ್ಪಿಸುವುದು ಬೇಡ ಎಂದು ಕೋರಿದರು.
ಪತ್ರಿಕಾಗೋಷ್ಠಿಯಲ್ಲಿ ನಗರಸಭಾ ಅಧ್ಯಕ್ಷ ಆರ್. ಮೋಹನ್, ವಕ್ಫ್ ಮಂಡಳಿ ಉಪಾಧ್ಯಕ್ಷ ಪರ್ವಿಸ್ ಪಾಷಾ, ಹೆಚ್.ಎಂ. ಸುರೇಶ್ಕುಮಾರ್, ಪ್ರಸನ್ನ ಕುಮಾರ್, ಶೋಬಾನ್ ಬಾಬು ಇತರರು ಉಪಸ್ಥಿತರಿದ್ರು.