Monday, December 23, 2024

Latest Posts

ಪ್ರಸನ್ನ ಕುಮಾರ್ ವಿರುದ್ಧ ಶಾಸಕ ವಾಸು ಅಭಿಮಾನಿಗಳ ಆಕ್ರೋಶ

- Advertisement -

ತುಮಕೂರು: ಗುಬ್ಬಿಯಲ್ಲಿ ವಾಸಣ್ಣ ಅಭಿಮಾನಿ ಕುರುಬರ ಸಮಾಜದಿಂದ ವಾಸಣ್ಣ ಅಭಿಮಾನಿ ಯತೀಶ್ ಅವರ ಗೃಹ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ಕರೆದಿದ್ದರು. ಗ್ರಾಮ ಪಂಚಾಯಿತಿ ಉಪಾಧ್ಯಕ್ಷಾ ಯತೀಶ್  ಮಾತನಾಡಿ ಚುನಾವಣೆ ಬಂದಾಗ ಕಾಣಿಸಿಕೊಳ್ಳುವ ಕಾಂಗ್ರೆಸ್ ಮುಖಂಡ ಪ್ರಸನ್ನ ಕುಮಾರ್ ಉಳಿದ ದಿನಗಳಲ್ಲಿ ಎಲ್ಲಿ ಹೋಗಿರುತ್ತಾರೆ? ಅಭಿವೃದ್ಧಿ ಕೆಲಸಗಳನ್ನು ನಿರಂತರವಾಗಿ ಮಾಡುತ್ತಿರುವ ಶಾಸಕ ಶ್ರೀನಿವಾಸ ಮೇಲೆ ಬೇಕಾಬಿಟ್ಟಿಯಾಗಿ ಮಾತನಾಡುವುದು ನಿಲ್ಲಿಸಿ ತಾಕತ್ತಿದ್ದಲ್ಲಿ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲಿ ಎಂದು ಸವಾಲ್ ಹಾಕಿದರು.

ಬೆಂಗಳೂರು ಗ್ರಮಾಂತರದಲ್ಲಿ ಇಂದಿನಿಂದ 5 ದಿನಗಳ ಕಾಲ ಜಿ-20 ಶೃಂಗಸಭೆ

ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಲಿಂಗರಾಜು ಮಾತನಾಡಿ  ಜಿಎಸ್ ಪ್ರಸನ್ನ ಕುಮಾರ್ ನಮ್ಮ ತಾಲೂಕಿನವರೇ ಅಲ್ಲ ಎಲ್ಲಿಂದಲೋ ಬಂದು ಬೇಕಾಬಿಟ್ಟಿಯಾಗಿ ಮಾತನಾಡುವುದನ್ನು ನಿಲ್ಲಿಸಬೇಕು. ನಮ್ಮ ಶಾಸಕರು ಎಲ್ಲ ಸಮುದಾಯಗಳನ್ನು ಒಟ್ಟಿಗೆ ತೆಗೆದುಕೊಂಡು ಹೋಗುತ್ತಿದ್ದು, 20 ವರ್ಷದ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ ಕಾಂಗ್ರೆಸ್ ಪಕ್ಷ ಈ ಬಾರಿ ಗೆಲ್ಲುವುದು ನಮ್ಮ ಶಾಸಕ ಎಸ್ ಆರ್ ಶ್ರೀನಿವಾಸ್ ಅವರಿಂದ. ಈ ಬಾರಿ ನಮ್ಮ ಶಾಸಕರನ್ನು ಕಾಂಗ್ರೆಸ್ ಗೆ ಕರೆತಂದು ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವುದು ನಮ್ಮ ಉದ್ದೇಶವಾಗಿದೆ ಈಗಾಗಲೇ ಡಿಕೆ ಶಿವಕುಮಾರ್ ಅವರು ಸಿದ್ದರಾಮಯ್ಯನವರು ಅವರೇ ಬರಬೇಕೆಂದು ನಿಶ್ಚಯಿಸಿರುವಾಗ ನೀವು ವಿರೋಧಿಸುವುದರಲ್ಲಿ ಅರ್ಥವಿಲ್ಲ ಎಂದು ತಿಳಿಸಿದರು.

ಹೆಸರು ಕಾಳು ಬಳಸಿ ನಿಮ್ಮ ತ್ವಚೆ ಮತ್ತು ಕೂದಲನ್ನ ಚೆಂದಗೊಳಿಸಿಕೊಳ್ಳಿ..

ಮುಖಂಡ ಲಕ್ಷ್ಮಿಕಾಂತ್ ಮಾತನಾಡಿ ನಿಮಗೆ ಅಂತಹ ತಾಕತ್ತು ಇದ್ದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ನೀವು ಗೆಲ್ಲಿ ಅದನ್ನು ಬಿಟ್ಟು ಪಕ್ಷದ ಸಂಘಟನೆ ಮಾಡಿರುವ ಮಾಡುತ್ತಿರುವ ನಮ್ಮ ಕಾರ್ಯಕರ್ತರ ಗಳ ಬಗ್ಗೆ ಶಾಸಕರ ಬಗ್ಗೆ ಮಾತನಾಡಿದರೆ ಸರಿಯಲ್ಲ ಎಂದು ಟೀಕಿಸಿದರು. ಇದೇ ಸಂದರ್ಭದಲ್ಲಿ ಮುಖಂಡರಾದ ಸಿದ್ದರಾಜು, ಬಿರೇಶ್, ಪ್ರವೀಣ್ ಗೌಡ, ಶಿವಲಿಂಗಯ್ಯ  ನಾಗಣ್ಣ, ರಮೇಶ್, ನಟರಾಜು ಸೇರಿದಂತೆ ಇನ್ನಿತರರು ಹಾಜರಿದ್ದರು.

ಮಸಾಲೆ ಪದಾರ್ಥಗಳನ್ನ ಅಡುಗೆಯಲ್ಲಿ ಬಳಸುವುದರಿಂದ ಆರೋಗ್ಯಕ್ಕಾಗಲಿದೆ ಅತ್ಯುನ್ನತ ಲಾಭ..

ಡಿ.16ರವರೆಗೂ ಕರ್ನಾಟಕದ ಹಲವೆಡೆ ಮಳೆಯಾಗುವ ಸಾಧ್ಯತೆ : ಹಳದಿ ಅಲರ್ಟ್ ಘೋಷಣೆ

- Advertisement -

Latest Posts

Don't Miss