Thursday, December 4, 2025

Latest Posts

ಕಬ್ಬು ಸಾಗಣೆ ಮತ್ತು ತೂಕದಲ್ಲಿ ವ್ಯತ್ಯಾಸ ಕಂಡುಬಂದಲ್ಲಿ ಕಾರ್ಖಾನೆಗಳ ಮೇಲೆ ಕ್ರಮ : ಸಚಿವ ಶಂಕರ ಪಾಟೀಲ ಮುನೇನಕೊಪ್ಪ

- Advertisement -

ಬೆಳಗಾವಿ: ಕಬ್ಬಿನ ತೂಕದ ಬಗ್ಗೆ ದೂರು ನೀಡಿದ ನಂತರ ಮೊದಲು 21 ಸಕ್ಕರೆ ಕಾರ್ಖಾನೆಗಳ ಮೇಲೆ ದಾಳಿ ಮಾಡಿ ಅಂಕಿ-ಅಂಶಗಳನ್ನು ಪಡೆದುಕೊಳ್ಳಲಾಗಿದೆ. ಅದರಲ್ಲಿ ವ್ಯತ್ಯಾಸ ಕಂಡುಬಂದರೆ ಅಂತಹ ಕಾರ್ಖಾನೆಗಳ ವಿರುದ್ಧ ಸರಕಾರ ಕ್ರಮ ತೆಗೆದುಕೊಳ್ಳಲಿದೆ ಎಂದು ಕೈಮಗ್ಗ ಮತ್ತು ಜವಳಿ, ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ಸಚಿವರಾದ ಶಂಕರ ಪಾಟೀಲ ಮುನೇನಕೊಪ್ಪ ಹೇಳಿದರು.
ಕಬ್ಬು ಸಾಗಣೆ ಮತ್ತು ತೂಕದಲ್ಲಿ ವ್ಯತ್ಯಾಸ ಇದೆ ಎನ್ನುವ ದೂರು ಆಧರಿಸಿ ಸಕ್ಕರೆ ಕಾರ್ಖಾನೆಗಳ ಮೇಲೆ ದಾಳಿ ಮಾಡಲಾಗಿತ್ತು.

ಗಡಿ ವಿಚಾರದ ಕುರಿತು ರಾಜ್ಯದ ಹಿತ ಕಾಪಾಡುವ ನಿಲುವು ಅಚಲವಾಗಿದೆ : ಸಿಎಂ ಬಸವರಾಜ ಬೊಮ್ಮಾಯಿ

ಮಂಗಳವಾರ ನಡೆದ ವಿಧಾನ ಪರಿಷತ್ತಿನ ಪ್ರಶ್ನೋತ್ತರ ವೇಳೆ ಪರಿಷತ್ ಸದಸ್ಯರಾದ ಪ್ರಕಾಶ ಕೆ.ರಾಠೋಡ್ ಮತ್ತು ಪಿ.ಆರ್.ರಮೇಶ ಅವರ ಪ್ರಶ್ನೆಗೆ ಸಚಿವರು ಉತ್ತರಿಸಿದರು. ಸಕ್ಕರೆ ಕಾರ್ಖಾನೆಗಳು ವಿವಿಧ ಮೂಲಗಳಿಂದ ಉತ್ಪಾದಿಸುವ ಎಥನಾಲ್‌ಗೆ ಕೇಂದ್ರ ಸರ್ಕಾರವು ಲಾಭದಾಯಕ ಬೆಲೆ ನಿಗದಿಪಡಿಸಿದೆ. ಕೇಂದ್ರ ಸರ್ಕಾರದ ಎಫ್‌ಆರ್‌ಪಿ ದರದಲ್ಲಿ ರಾಜ್ಯದ ಸಕ್ಕರೆ ಕಾರ್ಖಾನೆಗಳು 2022-23ನೇ ಕಬ್ಬು ನುರಿಸುವ ಹಂಗಾಮಿಗೆ ಮೊದಲ ಕಂತಿನ ರೂಪದಲ್ಲಿ ಪಾವತಿಸಬೇಕಾದ ಕಾರ್ಖಾನೆವಾರು ನ್ಯಾಯ ಮತ್ತು ಲಾಭದಾಯಕ ಬೆಲೆಯನ್ನು ನಿಗದಿಗೊಳಿಸಿ 2022ರ ಅಕ್ಟೋಬರ್‌ನಲ್ಲಿ ಆದೇಶ ಹೊರಡಿಸಲಾಗಿದೆ ಎಂದು ತಿಳಿಸಿದರು.

‘ಭಾರತ್ ಜೋಡೋ’ ಯಾತ್ರೆ ಕೊರೊನಾ ಪ್ರೋಟೋಕಾಲ್ ಮುರಿಯುತ್ತಿದೆ, ನಿಯಮಗಳನ್ನು ಅನುಸರಿಸಿ ಅಥವಾ ಯಾತ್ರೆಯನ್ನು ಮುಂದೂಡಿ : ರಾಹುಲ್ ಗಾಂಧಿಗೆ ಆರೋಗ್ಯ ಸಚಿವ ಪತ್ರ

‘ಭಾರತ್ ಜೋಡೋ’ ಯಾತ್ರೆ ಕೊರೊನಾ ಪ್ರೋಟೋಕಾಲ್ ಮುರಿಯುತ್ತಿದೆ, ನಿಯಮಗಳನ್ನು ಅನುಸರಿಸಿ ಅಥವಾ ಯಾತ್ರೆಯನ್ನು ಮುಂದೂಡಿ : ರಾಹುಲ್ ಗಾಂಧಿಗೆ ಆರೋಗ್ಯ ಸಚಿವ ಪತ್ರ

- Advertisement -

Latest Posts

Don't Miss