ಬೆಳಗಾವಿ: ಪಂಚಮಸಾಲಿ ಸಮುದಾಯವನ್ನು 2ಎ ಮೀಸಲಾತಿ ಪಟ್ಟಿಗೆ ಸೇರಿಸಬೇಕು ಎಂಬ ಹೋರಾಟದಲ್ಲಿಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಒಂದು ವಾರ ಕಾಲಾವಕಾಶ ಪಡೆದಿದ್ದು, ಡಿ.29ಕ್ಕೆ ಘೋಷಣೆ ಮಾಡುವುದಾಗಿ ತಮ್ಮ ತಾಯಿಯ ಮೇಲೆ ಆಣೆ ಮಾಡಿದ್ದಾರೆ ಎಂದು ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ. ಗುರುವಾರ ಮೀಸಲಾತಿಗಾಗಿ ಆಗ್ರಹಿಸಿ ನಡೆದ ಪಾದಯಾತ್ರೆಯ ನಡುವೆ ಆಯೋಜಿಸಿದ್ದ ಪಂಚ ಶಕ್ತಿ ವಿರಾಟ ಮಹಾಸಮಾವೇಶದಲ್ಲಿ ಮಾತನಾಡಿದ ಅವರು, ತಮಗೆ ಮೀಸಲಾತಿ ಸೀಗುವ ಭರವಸೆ ಇಟ್ಟಿದ್ದರು. ಆದರೆ ಸಿಎಂ ಸಮುದಾಯದ ಮುಖಂಡರ ಜೊತೆ ಸಭೆ ನಡಿಸಿ ಡಿಸೆಂಬರ್ 29ಕ್ಕೆ ತಿಳಿಸುತ್ತೇನೆ ಎಂದು ಹೇಳಿದ್ದಾರೆ ಎಂದರು.
ಉಕ್ರೇನ್‌ನಲ್ಲಿ ಯುದ್ಧ ಕೊನೆಗೊಳಿಸುವ ಗುರಿಯನ್ನು ರಷ್ಯಾ ಹೊಂದಿದೆ : ವ್ಲಾಡಿಮಿರ್ ಪುಟಿನ್
ಬಸವರಾಜ್ ಬೊಮ್ಮಾಯಿಯವರು ಅವರ ತಾಯಿಯ ಮೇಲೆ ಅನೆ ಮಾಡಿದ್ದಾರೆ.ಈಗಾಗಲೇ ಆಯೋಗ ವರದಿಯನ್ನ ನಮ್ಮ ಸರ್ಕಾರ ಒಪ್ಪಿಕೊಂಡಿದೆ. ತಜ್ಞರ ಜೊತೆ ಚರ್ಚೆ ಮಾಡಿ ಬರುವ ಡಿಸೆಂಬರ್ 29 ರಂದು ಮೀಸಲಾತಿ ಘೋಷಣೆ ಮಾಡಿ ಸಿಹಿ ಸುದ್ದಿ ನೀಡುತ್ತೇನೆಂದು ಬೊಮ್ಮಾಯಿ ಅವರು ಹೇಳದ್ದಾರೆ ಎಂದು ತಿಳಿಸಿದರು. ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ ಹೆಗಡೆ ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ. ಪಂಚಮಸಾಲಿಗಳು ಹಿಂದುಳಿದವರು ಎಂದು ವರದಿಯಲ್ಲಿ ಉಲ್ಲೇಖಿಸಿದ್ದಾರೆ. ಸದ್ಯ ಆಯೋಗದ ವರದಿ ಸರ್ಕಾರ ಒಪ್ಪಿಕೊಂಡಿದೆ. ಡಿಸೆಂಬರ್ 29ಕ್ಕೆ ಮೀಸಲಾತಿ ಘೋಷಣೆ ಮಾಡುವುದಾಗಿ ಮಾತು ಕೊಟ್ಟಿದ್ದಾರೆ ಎಂದು ಹೇಳಿದರು.
ಮಕ್ಕಳು ಸಂಸ್ಕಾರವಂತರಾಗಬೇಕೆಂದರೆ ನೀವು ಯಾವ ರೀತಿ ನಡೆದುಕೊಳ್ಳಬೇಕು..?
ಯಾರ ತಪ್ಪಿಗೆ ದ್ರೌಪದಿಗೆ ಐವರು ಪತಿಯನ್ನು ಪಡೆಯಬೇಕಾಯಿತು ಗೊತ್ತಾ..? ಭಾಗ 2