Tuesday, October 22, 2024

Latest Posts

ಜೀವನ ಪಾಠವನ್ನು ತಿಳಿಸುವ ಶ್ರೀಕೃಷ್ಣ ಉದ್ದವರ ಸಂಭಾಷಣೆ ..!

- Advertisement -

Devotional:

ಮಹಾ ಭಾರತದಲ್ಲಿ ಶ್ರೀ ಕೃಷ್ಣನನ್ನು ಮೀರಿಸುವ ಅದ್ಭುತವಾದ ಶಕ್ತಿ ಮತ್ತೊಂದಿಲ್ಲ ,ಮಹಾಭಾರತವನ್ನು ಓದಿದವರು ಹಾಗೂ ಕೇಳಿದವರಿಗೆ ಶ್ರೀ ಕೃಷ್ಣನ ಪಾತ್ರದ ಮೇಲೆ ಕೆಲವು ಅನುಮಾನಗಳು ಬರುವುದು ಸಹಜ ಅದರಲ್ಲಿ ಮುಖ್ಯವಾದದ್ದು ಶ್ರೀ ಕೃಷ್ಣ ಪಾಂಡವರನ್ನು ಅಷ್ಟೊಂದು ಬೆಂಬಲಿಸುತಿದ್ದರು ಅವರಿಗೇಕೆ ಅಷ್ಟೊಂದು ಕಷ್ಟಗಳು ಬಂತು ಎಂದು ,ದ್ರೌಪದಿಗೆ ಅಷ್ಟೊಂದು ಅವಮಾನ ನಡೆಯುತ್ತಿದ್ದರು ಕೊನೆಯಲ್ಲಿ
ಶ್ರೀಕೃಷ್ಣ ,ಬಂದು ಸಹಾಯ ಬಂದು ಸಹಾಯ ಮಾಡಲು ಕಾರಣವೇನು ಮೊದಲೇ ಏಕೆ ಬರಲಿಲ್ಲ ಹಾಗೂ ಧರ್ಮರಾಜನನ್ನು ಪಗಡೆಯಾಡದಂತೆ ಏತಕ್ಕಾಗಿ ತಡೆಯಲಿಲ್ಲ ,ನಿಮ್ಮೆಲ್ಲ ಇಂತಹ ಇನ್ನೂ ಎಷ್ಟೋ ಪ್ರಶ್ನೆಗಳಿಗೆ ಸ್ವತಹ ಕೃಷ್ಣರೇ ಉತ್ತರ ಕೊಟ್ಟಿದ್ದಾರೆ ಆ ಎಲ್ಲ ಪ್ರಶ್ನೆಗಳಿಗೆ ಯಾವ ರೀತಿ ಉತ್ತರ ಕೊಟ್ಟರು ಎಂದು ತಿಳಿದುಕೊಳ್ಳೋಣ .

ಉದ್ದವ ಕೃಷ್ಣನ ಸ್ನೇಹಿತ ಕೃಷ್ಣನಿಗೆ ಎಷ್ಟೋ ಸೇವೆಗಳನ್ನು ಮಾಡಿದವನು , ಆದರೆ ಆ ಸೇವೆಗಳಿಗೆ ಅವನು ಯಾವ ದಿನವೂ ಎಂಥಹ ಪ್ರತಿಫವು ಬಯಸಲಿಲ್ಲ ,ದ್ವಾಪರ ಯುಗದಲ್ಲಿ ಕೃಷ್ಣ ಪರಮಾತ್ಮ , ಅವರ ಅವತಾರ ಮುಗಿಸುವ ಮುಂಚೆ ಉದ್ದವನನ್ನು ಕರೆದು , ನನ್ನ ಈ ಅವತಾರದ ಸಮಯದಲ್ಲಿ ಎಷ್ಟೋ ಜನರು ನನ್ನಿಂದ ವರಗಳು ಬಹುಮಾನಗಳನ್ನು ಪಡೆದುಕೊಂಡಿದ್ದಾರೆ ಆದರೆ ನೀನು ಮಾತ್ರ ಯಾವ ವರವು ಬಯಸಲಿಲ್ಲ ಹಾಗಾಗಿ ನಿನಗೆ ಏನಾದರೂ ಕೊಡಬೇಕು ಎನ್ನುಸಿತ್ತಿದೆ ಯಾವ ವರ ಬೇಕು ಎಂದು ಪ್ರೀತಿಯಿಂದ ಕೇಳಿದನು. ಹಾಗ ಉದ್ದವ ಈ ರೀತಿ ಕೇಳಿದ , ನಿನ್ನ ಲೀಲೆಗಳನ್ನು ಅರ್ಥ ಮಾಡಿಕೊಳ್ಳುವುದು ನನ್ನಿಂದ ಸಾಧ್ಯವಾಗುತ್ತಿಲ್ಲ ನನಗೆ ಯಾವ ವರವು ಬೇಡ ಆದರೆ ನಾನು ನಿನ್ನನು ಒಂದು ಪ್ರಶ್ನೆ ಕೇಳಬೇಕು ಕೇಳಬಹುದೇ ಎಂದನು .

ಹಾಗ ಉದ್ಭವ ಹೀಗೆ ಕೇಳಿದನು ,ಕುರುಕ್ಷೇತ್ರದಲ್ಲಿ ನೀವು ಪೋಷಿಸಿದಂತಹ ಪಾತ್ರವು ,ನೀವು ತೆಗೆದುಕೊಂಡ ನಿರ್ಧಾರಗಳು ,ನೀವು ಮಾಡಿದ ಕೆಲಸಗಳು ನನಗೆ ಅರ್ಥವಾಗಲಿಲ್ಲ ನನ್ನ ಸಂದೇಹಗಳನ್ನು ಬಗೆಹರಿಸಿ ನನ್ನನು ಅನುಗ್ರಹಿಸಿ ಎಂದು ಬೇಡಿದ ,ಅದಕ್ಕೆ ಶ್ರೀಕೃಷ್ಣ ಉದ್ದವ ಅಂದು ಯುದ್ಧ ಭೂಮಿಯಲ್ಲಿ ಅರ್ಜುನನಿಗೆ ಗೀತೆ ಬೋದಿಸಿದೆ ಇಂದು ನಿನಗೆ ಉದ್ದವ ಗೀತೆ ಬೋದಿಸುವೆ ,ನನ್ನನ್ನು ಏನು ಕೇಳಬೇಕು ಎಂದುಕೊಂಡಿದೆಯೋ ಅದನ್ನು ಸಂಕೋಚ ಪಡದೆ ಕೇಳು ಎಂದರು . ಹಾಗ ಉದ್ದವ ಒಂದೊದಾಗಿ ಪ್ರಶ್ನೆಗಳನ್ನು ಕೇಳಲು ಶುರುಮಾಡಿದ.

ಪಾಂಡವರು ನಿಮ್ಮ ಪ್ರಾಣ ಸ್ನೇಹಿತರೆ ತಾನೇ , ಅವರು ನಿಮ್ಮನ್ನು ಕುರಡಾಗಿ ನಂಬಿದರು ನೀವು ಅವರ ವರ್ತಮಾನ ,ಭವಿಷ್ಯತ್ತು ಎಲ್ಲವನ್ನು ತಿಳಿದವರು ಹಾಗಿರುವಾಗ ಅವರ ಕೈಯಲ್ಲಿ ಪಗಡೆ ಏತಕ್ಕೆ ಆಡಿಸಿದಿರಿ, ಒಬ್ಬ ಒಳ್ಳೆಯ ಸ್ನೇಹಿತ ಅಂತಹ ಕೆಟ್ಟವ್ಯಸನಗಳನ್ನು ಎಲ್ಲಾದರೂ ಪ್ರೋತ್ಸಾಹಿಸುತ್ತಾನಾ. ಕನಿಷ್ಠ ಆ ಆಟದಲ್ಲಾದರೂ ಅವರನ್ನು ಗೆಲ್ಲಿಸಿ ಕೌರವರಿಗೆ ಬುದ್ದಿ ಹೇಳಬಹುದಿತ್ತು ಆದರೆ ನೀವು ಅದನ್ನು ಮಾಡಲಿಲ್ಲ ಇದರಿಂದ ಧರ್ಮರಾಜ ಅವರ ಆಸ್ತಿ ಎಲ್ಲ ಕಳೆದುಕೊಂಡು ಬೀದಿಗೆ ಬರಬೇಕಾಯಿತು ಕೊನೆಗೆ ಅವರ ತಮ್ಮಂದಿರನ್ನು ಸಹ ಪಣಕ್ಕೆ ಇಟ್ಟು ಸೋಲಬೇಕಾಯಿತು ಆಗಲು ನೀವು ಅವರನ್ನು ತಡೆಯಲಿಲ್ಲ, ಕೌರವರು ಅವರ ದುರ್ಬುದ್ಧಿಯಿಂದ ದ್ರೌಪಾದಿಯನ್ನು ಗೆದ್ದರು ಆಗ ಕೂಡ ನೀವು ನಿಮ್ಮ ಮಾಯೆಯಿಂದ ಪಾಂಡವರನ್ನು ಗೆಲಿಸಲಿಲ್ಲ ,ಕೊನೆ ಕ್ಷಣದಲ್ಲಿ ಆಕೆಯ ಗೌರವಕ್ಕೆ ಕೊರತೆ ಉಂಟಾದಾಗ ಅನುಗ್ರಹಿಸಿದಿರಿ , ಸಮಯಕ್ಕೆ ಸಹಾಯ ಮಾಡಿದ ಆಪತ್ಬಂದವ ಎಂದು ಒಳ್ಳೆಯ ಹೆಸರು ಕೂಡ ಗಳಿಸಿಕೊಂಡಿರಿ, ಆದರೆ ನೀವು ಮೊದಲೇ ಆ ಕೆಲಸ ಮಾಡಿದರೆ , ಆಕೆಗೆ ತುಂಬು ಸಭೆಯಲ್ಲಿ ಅಷ್ಟೊಂದು ಅವಮಾನ ನಡೆಯುತ್ತಿರಲಿಲ್ಲ ಸಮಯಕ್ಕೆ ಸಹಾಯ ಮಾಡಿದವನೇ ತಾನೇ ಒಳ್ಳೆಯ ಸ್ನೇಹಿತ ಆದರೆ ನೀವು ಮಾಡಿದ್ದೇನು ದೇವಾ ಎಂದು ಉದ್ದವಾ ಶ್ರೀಕೃಷ್ಣನ ಬಳಿ ದುಖ್ಖದಿಂದ ಕೇಳಿದ. ನಿಜಕ್ಕೆ ಈ ಸಂದೇಹಗಳು ಮಹಾಭಾರತ ತಿಳಿದವರಿಗೆ ಎಲ್ಲರಿಗೂ ಬರುತ್ತದೆ ಆದ್ದರಿಂದ ಶ್ರೀಕೃಷ್ಣ ನಮ್ಮೆಲರಿಗೂ ಅರ್ಥವಾಗುವಂತೆ ಉದ್ದವನ ಮೂಲಕ ಅದರ ಅಂತರ್ಯವೇನೆಂದು ಹೀಗೆ ವಿವರಿಸಿದ್ದಾರೆ .

ಉದ್ದವಾ.. ಪ್ರಕೃತಿ ಧರ್ಮದ ಪ್ರಕಾರ ಎಲ್ಲ ಸಮಯದಲ್ಲಿ ಸರಿಯಾದ ನಿರ್ಧಾರ ಯಾರು ತೆಗೆದುಕೊಳ್ಳುತ್ತಾರೋ ಅವರೇ ಗೆಲುವಿಗೆ ಅರ್ಹರಾಗುತ್ತಾರೆ. ದುರ್ಯೋಧನನಿಗೇ ಪಗಡೆ ಆಟದಲ್ಲಿ ಪ್ರಾವೀನ್ಯೆತೆ ಇಲ್ಲದಿದ್ದರೂ ಮಹಾನ್ ಸಂಪತಿಗೆ ವಾರಸುದಾರ ಹಾಗಾಗಿ ಅವನ ಅರ್ಹತೆಯ ಪ್ರಕಾರ ಆಸ್ತಿಯನ್ನು ಪಣಕ್ಕಿಟ್ಟ ಅವನಿಗೆ ಪಗಡೆಯಾಟದಲ್ಲಿ ಪ್ರವೀನ್ಯೆತೆ ಇಲ್ಲದೆ ಇರುವುದರಿಂದ ಬುದ್ದಿವಂತಿಕೆಯಿಂದ ಮೊದಲೇ ಯೋಚಿಸಿ ಅವನ ಮಾವ ಶಕುನಿಯ ಕೈಯಲ್ಲಿ ಪಗಡೆಯಾಡಿಸಿದ ,ಆದರೆ ಧರ್ಮರಾಜ ಕೂಡ ಅದೇರೀತಿ ನನ್ನ ಕೈಯಿಂದ ಪಗಡೆ ಆಡಿಸಬಹುದಿತ್ತು ಅಥವಾ ನನ್ನ ಸಹಾಯ ಕೇಳಬಹುದಿತ್ತು ಆದರೆ ಅವನು ಅದು ಏನು ಮಾಡಲಿಲ್ಲ , ಒಂದುವೇಳೆ ಶಕುನಿಯೊಂದಿಗೆ ಅಂದು ನಾನೆ ಪಗಡೆಯಾಡಿದರೆ  ಆಟ ಯಾರು ಗೆಲ್ಲುತ್ತಿದ್ದರು..? ನನ್ನೊಂದಿಗೆ ಗೆಲ್ಲಲು ಶಕುನಿಗೆ ಸಾದ್ಯವಾಗುತ್ತಿತ್ತಾ..? ನಿನೇಹೇಳು ಎಂದನು. ಆಸಮಯದಲ್ಲಿ ಧರ್ಮರಾಜ ಅಜ್ಞಾನದಿಂದ    ಮತ್ತೊಂದು ಅಪರಾದ ಮಾಡಿದ್ದಾನೆ, ಅದೇನೆಂದರೆ ನಾನು ಮಾಡಿಕೊಂಡ ಕರ್ಮದಿಂದ ಈ ಆಟದಲ್ಲಿ ನಾನು ಸಿಕ್ಕಿಕೊಂಡೆ , ಕೃಷ್ಣನಿಗೆ ಈ ವಿಷಯ ತಿಳಿಯಬಾರದು ಎಂಥಹ ಪರಿಸ್ಥಿಯಲ್ಲೂ ಅವರು ಇಲ್ಲಿಗೆ ಬರಬಾರದು ಎಂದು ಮೊದಲೇ ಪ್ರಾರ್ಥಿಸಿದ. ಇದರಿಂದ ನಾನು ಏನು ಮಾಡಲು ಸಾಧ್ಯವಾಗದೆ ಅವನ ಕರೆಗಾಗಿ ಕೈ ಕಟ್ಟಿಕೊಂಡು ಎದುರು ನೋಡುತ್ತಾ ಕುಳಿತುಕೊಳ್ಳ ಬೇಕಾಯಿತು ,ಧರ್ಮರಾಜನೇನೋ ಆ ರೀತಿ ಬುದ್ದಿ ಹೇಡಿ ಕೆಲಸ ಮಾಡಿದ , ಆದರೆ ಬಿಮ, ಅರ್ಜುನ , ನಕುಲ ,ಸಹದೇವರು ಕೂಡಾ ಸೋಲುವಾಗ ಅವರ ಕರ್ಮಾ ಅಂದುಕೊಂಡರೆ ವಿನಃ , ಯಾರೊಬ್ಬರೂ ನನ್ನಾ ಸಹಾಯ ಕೇಳಲಿಲ್ಲ .

ಅದೇ ರೀತಿ ದ್ರೌಪದಿಯೂ ಕೂಡ ದುಃಶಾಸನ ಆಕೆಯನ್ನು ಸಭೆಗೆ ಎಳೆತಂದಾಗಲೂ ನನ್ನನ್ನು ಪ್ರಾರ್ಥಿಸದೆ ತುಂಬು ಸಭೆಯಲ್ಲಿ ನ್ಯಾಯ ಕೊಡಿಸಿ ಎಂದು ಎಲ್ಲರನ್ನು ಕೇಳಿಕೊಂಡಳು , ಕೊನೆಗೆ ಅವಳ ಎಲ್ಲ ಪ್ರಯತ್ನಗಳು ವಿಫಲವಾದ ಮೇಲೆ ,ಸಂಪೂರ್ಣ ಶರಣಾಗತಿಯಿಂದ ನನ್ನನ್ನು ಶರಣು ಬೇಡಿದಳು ಆಗ ನಾನು ಕೂಡಲೇ ಪ್ರತ್ಯಕ್ಷ ಗೊಂಡು ದ್ರೌಪಾದಿಯನ್ನು ರಕ್ಷಿಸಿದೆ ಎಂದು ಶ್ರೀಕೃಷ್ಣ ಉತ್ತರಿಸಿದರು .ಕೃಷ್ಣನ ಮಾತುಗಳಿಗೆ ಉದ್ದವಾ ಭಕ್ತಿಯಿಂದ ಕೈ ಮುಗಿದು ,ಮತ್ತೆ ಈ ರೀತಿ ಕೇಳಿದ , ಶ್ರೀಕೃಷ್ಣ ಹಾಗಾದರೆ ನಮ್ಮ ಸಾಮಾನ್ಯರ ಗತಿಯೇನು..? ನಾವು ಮಾಡುವ ಕರ್ಮಗಳಲ್ಲೂ ಕೂಡ ನಾವು ಬೇಡಿದರೆ ಮಾತ್ರ ನೀವು ಬಂದು ಸಹಾಯ ಮಾಡಿತ್ತೀರಾ , ನಾವು ಕೆಟ್ಟ ಕೆಲಸಗಳನ್ನು ಮಾಡುವ ಮೊದಲೇ ನೀವು ತಡೆಯುವುದಿಲ್ಲವೇ, ಕೆಟ್ಟ ಕೆಲಸ ಮಾಡುವುದಕ್ಕೂ ಮೊದಲೇ ನೀವು ಅದನ್ನು ತಡೆದರೆ ಆ ಕೆಲಸ ನಡೆಯುವುದಿಲ್ಲ ಅಲ್ಲವೇ ಎಂದು ಕೇಳಿದ .

ಹಾಗ ಶ್ರೀಕೃಷ್ಣ ಹೀಗೆ ಹೇಳಿದನು ಉದ್ದವ , ಮನುಷ್ಯನ ಜೀವನ ಅವನ ಕರ್ಮಾದ ಮುಖಂತರವೇ ನಡೆಯುತ್ತದೆ ನಾನು ಅವರ ಕರ್ಮಗಳನ್ನು ನಿರ್ವತಿಸುವುದಿಲ್ಲ , ಅವುಗಳಲ್ಲಿ ನಾನು ಬಾಗಿ ಆಗುವುದಿಲ್ಲ, ಕೇವಲ ಎಲ್ಲವನ್ನು ಒಬ್ಬ ಸಾಕ್ಷಿಯಂತೆ ಗಮನಿಸುತ್ತಿರುತ್ತೇನೆ , ಅದೇ ಭಗವಂತನ ಧರ್ಮ ಎಂದು ಹೇಳಿದರು. ಹಾಗ ಉದ್ದವ , ಶ್ರೀಕೃಷ್ಣ ನಾವು ತಪ್ಪು ದಾರಿ ತುಳಿದು ಪಾಪಗಳನ್ನು ಮೂಟೆಕಟ್ಟಿಕೊಳ್ಳುತ್ತಿದ್ದರೆ , ನೀವು ಕೇವಲ ಸಾಕ್ಷಿಯಂತೆ ಗಮನಿಸುತ್ತಿರಾ ನಮನ್ನು ತಡೆಯುವುದಿಲ್ಲವೇ ಇದೆಂತಹ ಧರ್ಮ ಎಂದು ಕೇಳಿದ .

ಅದಕ್ಕೆ ಕೃಷ್ಣ ಉದ್ದವ ನಿನ್ನ ಮಾತುಗಳನ್ನು ನೀನು ಸರಿಯಾಗಿ ಗಮನಿಸು ಹಾಗ ನಿನಗೆ ಅರ್ಥವಾಗುತ್ತದೆ. ಭಗವಂತ ಯಾವಾಗಲು ನಿನೊಂದಿಗೆ ನಿನ್ನೊಳಗೆ ಇದ್ದಾನೆ , ನಿನ್ನ ಹತ್ತಿರವೇ ದೇವರಿದ್ದು ಎಲ್ಲವನ್ನು ಗಮನಿಸುತಿದ್ದಾನೆ ಎಂದು ನೀನು ಗುರುತಿಸಿದಾಗ ನೀನು ತಪ್ಪುಗಳು ಯಾವ ರೀತಿ ಮಾಡಲು ಸಾಧ್ಯ ಹೇಳು ?ಈ ಸತ್ಯ ಮರೆತಾಗ ಮಾತ್ರವೇ ಮನುಷ್ಯ ತಪ್ಪುದಾರಿ ತುಳಿಯುತ್ತಾನೆ ಕಷ್ಟಗಳಿಗೆ ಸಿಲುಕುತ್ತಾನೆ .ಧರ್ಮರಾಜ ಅವನ ಪಗಡೆ ಆಟದ ಬಗ್ಗೆ ನನಗೆ ತಿಳಿದಿಲ್ಲ ಎಂದು ಕೊಂಡದ್ದೇ ಅವನ ಮಾಡಿದಂತಹ ಮೊದಲನೇ ತಪ್ಪು , ನಾನು ಯಾವಾಗಲು ಅವನ ಬೆಂಬಲ ವಾಗಿರುವುದು ಅವನು ಗುರುತಿಸಿದರೆ ಆಟವು ಪಾಂಡವರಿಗೆ ಅನುಗುಣವಾಗಿ ಸಾಗುತ್ತಿತ್ತು ಎಂದು ಉದ್ದವರಿಗೆ ವಿವರಿಸಿ ಹೇಳಿದರು ಶ್ರೀಕೃಷ್ಣ.

ಅವರು ಬೋಧಿಸಿದ ಗೀತೆಯನ್ನು ಕೇಳಿ ಉದ್ದವಾ ಎಷ್ಟೋ ಸಂತೋಷಿಸಿ ಅವರ ಸಂದೇಹಗಳನ್ನು ಬಗೆಹರಿಸಿದ್ದಕ್ಕಾಗಿ ಕೃತಜ್ಞತೆ ಸೂಚಿಸಿದರು , ಪೂಜೆಗಳು ಪ್ರಾರ್ಥನೆಗಳು ಎಲ್ಲವೂಕೂಡಾ ಭಗವಂತನ ಸಹಾಯ ಬೇಡಲು ಮಾಡುವಂತಹ ಕೆಲಸಗಳು , ಆದರೆ ಸಂಪೂರ್ಣವಾದ ನಂಬಿಕೆ ವಿಶ್ವಾಸ ಕೂಡ ಅದಕ್ಕೆ ಜೊತೆಯಾದರೆ ಎಲ್ಲರಲ್ಲಿಯೂ ದೇವರೇ ಕಾಣಿಸುತ್ತಾನೆ .

ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಬೋದಿಸಿರುವುದು ಇದೆ , ಯುದ್ಧದಲ್ಲಿ ಅರ್ಜುನನಿಗೆ ಶ್ರೀಕೃಷ ರಥಸಾರತಿಯಾಗಿ ಕರ್ತವ್ಯಗಳನ್ನೂ ಬೋಧಿಸಿದರೆ ಹೊರತು, ಅವನ ಬದಲು ಸ್ವತಹ ಯುದ್ಧ ಮಾಡಲಿಲ್ಲ .ಅದೇ ರೀತಿ ನಮ್ಮೊಳಗಿರುವ ದೇವರನ್ನು ಗುರುತಿಸಿ , ಅವರನ್ನು ನಮ್ಮ ಜೀವನದ ಸಾರತಿಯನ್ನಾಗಿ ಮಾಡಿಕೊಂಡರೆ ನಮಗೂಕೂಡ ಅರ್ಜುನನಂತೆ ತಪ್ಪದೆ ಎಲ್ಲದರಲ್ಲೂ ಗೆಲುವು ಸಿಗುತ್ತದೆ , ನಮ್ಮ ಒಳಿತು ಕೆಟ್ಟದನ್ನು ಭಗವಂತ ನೋಡಿಕೊಳ್ಳುತ್ತಾನೆಂದು ನಂಬಬೇಕು ಆ ನಂಬಿಕೆಯೇ ನಮ್ಮನು ಎಲ್ಲ ಸಮಯದಲ್ಲೂ ಕಾಪಾಡುತ್ತದೆ .

ಈ ನದಿಗಳು ನಮ್ಮ ದೇಶದಲ್ಲಿ ಆಧ್ಯಾತ್ಮಿಕತೆಯ ಸ್ಥಳವಾಗಿದೆ..ಅತ್ಯಂತ 10 ಪವಿತ್ರ ನದಿಗಳು ನಿಮಗಾಗಿ..!

ನೀವು ಮನೆಯಲ್ಲಿ ಆರ್ಥಿಕ ಮತ್ತು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದೀರಾ..ಕರ್ಪೂರದಿಂದ ಪರಿಹಾರವನ್ನು ಪ್ರಯತ್ನಿಸಿ..!

ಶಿವನನ್ನು ಪೂಜಿಸುವಾಗ ಈ ಐದು ತಪ್ಪುಗಳನ್ನು ಮಾಡಬೇಡಿ..!

 

 

- Advertisement -

Latest Posts

Don't Miss