ಸಿಯೋಲ್: ಇಂದು ಬೆಳಗ್ಗೆ ಉತ್ತರದ ಪೂರ್ವದ ಸಮುದ್ರದ ಗಡಿಯಲ್ಲಿ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಹಾರಿಸಲಾಗಿದ್ದು, ಇವು ಗಡಿಗೆ ಬಂದು ಅಪ್ಪಳಿಸಿವೆ ಎಂದು ದಕ್ಷಿಣ ಕೊರಿಯಾದ ಸೇನೆ ತಿಳಿಸಿದೆ. ಗಡಿ ಶಾಂತಿ ಒಪ್ಪಂದವನ್ನು ಉತ್ತರ ಕೊರಿಯಾ ಪದೆ ಪದೆ ಮೀರುತ್ತಿದೆ. ಇತ್ತೀಚಿಗೆ 5 ಡ್ರೋನ್ಗಳು ದಕ್ಷಿಣ ಕೊರಿಯಾದ ಗಡಿ ಪ್ರದೇಶದಲ್ಲಿ ಹಾರಾಟ ನಡೆಸಿದ್ದವು. ಇದೀಗ ಕ್ಷಿಪಣಿಗಳನ್ನು ಹಾರಿಸಿರುವ ನಿರಂಕುಶಾಧಿಕಾರಿ ಕಿಮ್ ಜಾಂಗ್ ಉನ್ ಸರ್ಕಾರ ಮತ್ತೆ ಗಡಿ ಶಾಂತಿಯನ್ನು ಕದಡಿದೆ ಎಂದು ದಕ್ಷಿಣ ಕೊರಿಯಾ ಹೇಳಿದೆ.
ಕೃಷ್ಣಾ ಜಲಾನಯನ ಪ್ರದೇಶದ ರೈತರಿಗೆ ಬಿಜೆಪಿ ಸರ್ಕಾರ ದ್ರೋಹ ಮಾಡುತ್ತಿದೆ : ಸಿದ್ದರಾಮಯ್ಯ
ಉತ್ತರ ಕೊರಿಯಾ ತನ್ನ ಶಸ್ತ್ರಾಗಾರವನ್ನು ಆಧುನೀಕರಣಗೊಳಿಸಲು ಮತ್ತು ಅಮೆರಿಕದ ಜೊತೆಗಿನ ಹೊಸ ಒಪ್ಪಂದವನ್ನು ಮಾಡಿಕೊಳ್ಳಲು ಈ ಪರೀಕ್ಷೆಗಳನ್ನು ನಡೆಸುತ್ತಿದೆ ಎಂದು ತಜ್ಞರು ಹೇಳಿದ್ದಾರೆ. ಭವಿಷ್ಯದಲ್ಲಿ ಆಧುನಿಕ ಶಸ್ತ್ರಾಸ್ತ್ರಗಳನ್ನು ಹೊಂದುವ ಕಾರಣಕ್ಕಾಗಿ ಅದು ಹೀಗೆ ಮಾಡುತ್ತಿದೆ ಎಂದು ಹೇಳಿದ್ದಾರೆ. 2017ರಿಂದ ಕೊರಿಯಾ ರಾಷ್ಟ್ರಗಳ ಮಧ್ಯೆ ಶಾಂತಿ ಸ್ಥಾಪಿಸಿಕೊಂಡು ಬರಲು ಒಪ್ಪಂದ ಮಾಡಿಕೊಳ್ಳಲಾಗಿದೆ. ಆದರೀಗ ಉತ್ತರ ಕೊರಿಯಾ ಹುಚ್ಚಾಟ ನಡೆಸುತ್ತಿದೆ. ಈ ಹಿಂದೆಯೂ ಉತ್ತರ ಕೊರಿಯಾದ ಕ್ಷಿಪಣಿಗಳು ದಕ್ಷಿಣ ಕೊರಿಯಾದ ಗಡಿ ಬಳಿ ಸ್ಫೋಟಿಸಿದ್ದವು. ಡಿಸೆಂಬರ್ 26 ರಂದು ವಾಯುಪ್ರದೇಶವನ್ನು ಉಲ್ಲಂಘಿಸಿ ಬಂದ ಉತ್ತರ ಕೊರಿಯಾದ 5 ಡ್ರೋನ್ಗಳನ್ನು ದಕ್ಷಿಣ ಕೊರಿಯಾದ ಸೇನೆ ಪತ್ತೆ ಮಾಡಿತ್ತು.
ತಾಯಿ ಕಳೆದಕೊಂಡ ನೋವಿನಲ್ಲೂ ಪಂತ್ ತಾಯಿಗೆ ಕರೆ ಮಾಡಿ ಆರೋಗ್ಯ ವಿಚಾರಿಸಿದ ಮೋದಿ