Saturday, December 21, 2024

Latest Posts

ನಿಮ್ಮ ಆಟಿಕೆ ಇಲ್ಲಿದೆ ಮಾಹಿ, ರಿಯಲಿ ಮಿಸ್ ಯೂ..!

- Advertisement -

ಟೀಮ್ ಇಂಡಿಯಾ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ, ಗಡಿ ಕಾಯುವ ಕಾಯಕದಲ್ಲಿ ಬ್ಯುಸಿಯಾಗಿದ್ದಾರೆ. ಇತ್ತ ಮನೆಯಲ್ಲಿ ಪತ್ನಿ ಸಾಕ್ಷಿ, ರಿಯಲಿ ಮಿಸ್ ಯೂ ಮಾಹಿ… ನಿಮ್ಮ ಆಟಿಕೆ ಇಲ್ಲಿದೆ ಅಂತ ಹೇಳಿದ್ದಾರೆ. ಅಷ್ಟಕ್ಕೂ ಸಾಕ್ಷಿ ಹೀಗೆ ಹೇಳಿದ್ಯಾಕೆ..? ಆಟಿಕೆಗಳನ್ನು ಕೈಯಲ್ಲಿ ಇಟ್ಟುಕೊಂಡು ಆಟವಾಡೊದಕ್ಕೆ ಧೋನಿ ಏನೂ ಸಣ್ಣ ಮಗುನಾ ಅಂತ, ನಿಮ್ಮಲ್ಲಿ ಪ್ರಶ್ನೆ ಮೂಡಬಹುದು.

ಯಸ್… ಧೋನಿ ಏನೂ ಸಣ್ಣ ಮಗುವಲ್ಲ, ಆದ್ರೆ ಅವರ ಮನಸ್ಸು ಸಣ್ಣ ಮಗುವಿನ ಹಾಗೆ ಅನ್ನೋದು ಸಾಕ್ಷಿಗೆ ಗೊತ್ತು. ಸದ್ಯ ಧೋನಿ ಕಾಶ್ಮೀರದಲ್ಲಿ ದೇಶ ಸೇವೆ ಸಲ್ಲಿಸುತ್ತಿದ್ದಾರೆ. ಇದೇ ವೇಳೆ ಧೋನಿ ಇಷ್ಟಪಟ್ಟ ಕಾರು, ಧೋನಿ ಮನೆ ಸೇರಿದೆ. ಸದ್ಯ ಕಾರಿನ ಚಿತ್ರವನ್ನ ಕ್ಲಿಕ್ಕಿಸಿರುವ ಸಾಕ್ಷಿ, ಕೆಂಪು ಬಣ್ಣದ ಕಾರಿನ ಚಿತ್ರವನ್ನ ಇನ್ ಸ್ಟಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದು, “ಅಂತಿಮವಾಗಿ ನಿಮ್ಮ ಆಟಿಕೆ ಇಲ್ಲಿದೆ ಮಾಹಿ, ರಿಯಲಿ ಮಿಸ್ ಯೂ..! ” ಅಂತ ಬರೆದು ಕೊಂಡಿದ್ದಾರೆ.

ಟೀಮ್ ಇಂಡಿಯಾ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿಗೆ, ಬೈಕ್ ಮತ್ತು ಕಾರುಗಳ ಕ್ರೇಜ್ ಸಿಕ್ಕಾಪಟ್ಟೆ ಇದೆ. ಹೀಗಾಗಲೇ ಧೋನಿ ಬಳಿ, ಸಾಕಷ್ಟು ಬೈಕ್ ಮತ್ತು ಕಾರುಗಳ ಕಲೆಕ್ಷನ್ ಇದ್ದು ಈ ಪಟ್ಟಿಗೆ ಈಗ ಮತ್ತೊಂದು ಕಾರು ಸೇರ್ಪಡೆಯಾಗಿದೆ. ಸದ್ಯ “ಜೀಪ್ ಗ್ರ್ಯಾಂಡ್ ಚೆರೋಕೀ” ಧೋನಿ ಮನೆ ಸೇರಿದ್ದು, ಧೋನಿಯ ಸ್ವಭಾವ ಅರಿತಿರುವ ಸಾಕ್ಷಿ, ಈ ರೀತಿ ಪೋಸ್ಟ್ ಮಾಡಿದ್ದಾರೆ.

https://www.instagram.com/p/B08c3ftnGUz/
- Advertisement -

Latest Posts

Don't Miss