Thursday, April 24, 2025

Latest Posts

ತೆರಿಗೆ ಕಟ್ಟುವವರಿಗೆ ಕಾಂಗ್ರೇಸ್ ನ ಉಚಿತ ವಿದ್ಯುತ್, ರೂ ೨೦೦೦ ಇಲ್ಲ

- Advertisement -

politicak news

ಭಾರತ ಜೋಡೋ ಯಾತ್ರ ಮೂಲಕ ದೇಶವನ್ನೇ ಸಂಚಾರ ಮಾಡಿ ಜನರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ ಕಾಂಗ್ರೇಸ್ ಪಕ್ಷ . ಅದೇ ರೀತಿ ಕರ್ನಾಟಕದ ಕೆಪಿಸಿಸಿ ಅಧ್ಯಕ್ಷರು ಡಿಕೆ ಶಿವಕುಮಾರ್ ಅವರು ವಿಬಿನ್ನ ರೀತಿಯಲ್ಲಿ ಪ್ರಣಾಳಿಕೆ ಸಿದ್ದಗೊಳಿಸುವುದರ ಮೂಲಕ ವಿವಿಧ ರೀತಿಯಲ್ಲಿ ಸಮಾವೇಶವನ್ನು ಕೈಗೊಂಡು ಪ್ರಣಾಳಿಕೆಯಲ್ಲಿ ಹೊರಡಿಸಿರುವವ ಯೋಜನೆಗಳನ್ನು ಪ್ರಚಾರ ಮಾಡುತ್ತಿದೆ. ಕೆಲವು ದಿನಗಳ ಹಿಂದೆ ರಾಜ್ಯಕ್ಕೆ
ಆಗಮಿಸಿರುವ ಪ್ರಿಯಾಂಕಾ ಗಾಂಧಿಯವರ ನೇತೃತ್ವದಲ್ಲಿ ಗೃಹಲಕ್ಷಿ ಯೋಜನೆ ಹೆಸರಿನಲ್ಲಿ ಮನೆಯ ಒಡತಿಗೆ ಪ್ರತಿ ತಿಂಗಳು ೨೦೦೦ ರೂ ನೀಡಲಾಗುವುದು, ಅದೇ ರೀತಿ ಹಣದುಬ್ಬರದಿಂದ ಕತ್ತಲಾಗಿರುವ ರಾಜ್ಯಕ್ಕೆ ಬೆಳಕನ್ನು ನೀಡಲು ಪ್ರತಿ ಮನೆಗೆ ಪ್ರತಿ ತಿಂಗಳಿಗೆ ೨೦೦ ಯುನೀಟ್ ವಿದ್ಯುತ್ತನ್ನು ಉಚಿತವಾಗಿ ನೀಡಲಾಗುವುದು ಎಂದಿದ್ದರು . ಆದರೆ ಈ ಗೃಹಲಕ್ಷ ಯೋಜನೆಗೆ ವಿರುದ್ದವಾಗಿ ಬಿಜೆಪಿ ಪಕ್ಷದವರು ತಿರುಗೇಟು ನೀಡಿದ್ದರು . ಹಾಗಾಗಿ ಕಾಂಗ್ರೇಸ್ ಎಚ್ಚೆತ್ತುಕೊಂಡು ತೆರಿಗೆ ಕಟ್ಟವುದಕ್ಕೆ ಯಾರು ಅಶಕ್ತರು ಇದ್ದಾರೋ ಅವರಿಗೆ ಮಾತ್ರ ಈ ಯೋಜನೆ ಜಾರಿಯಗಲಿದೆ. ಆದಾಯ ತೆರಿಗೆ ಕಟ್ಟುವವರನ್ನು ಹೊರತುಪಡಿಸಿ, ಯಾವುದೇ ಜಾತಿ ಧರ್ಮದ ಭೇದವಿಲ್ಲದೆ ಎಲ್ಲರಿಗೂ ಈ ಯೋಜನೆ ಜಾರಿಯಾಗಲಿದೆ ಎಂದು ಕಾಂಗ್ರೇಸ್ ನಾಯಕ ಬಿ ಕೆ ಹರಿಪ್ರಸಾದ್ ಸ್ಪಷ್ಟಪಡಿಸಿದ್ದಾರೆ.

ಬೀದಿ ಬದಿ ವ್ಯಾಪರಿಗಳಿಗೆ ನಿಗಮ

ಕೆಲಸಗಾರರನ್ನು ತೆಗೆದು ಹಾಕಿದ ಸ್ವಿಗ್ಗಿ

ವಿಜಯಪುರಕ್ಕೆ ಜೆ ಪಿ ನಡ್ಡಾ ಬೇಟಿ

 

- Advertisement -

Latest Posts

Don't Miss