Friday, October 18, 2024

Latest Posts

ಕರ್ನಾಟಕ ಟಿವಿ ಜನವರಿ ಸರ್ವೇ. ಕರಾವಳಿ ಕರ್ನಾಟಕದ 19 ಕ್ಷೇತ್ರಗಳಲ್ಲಿ ಯಾರಿಗೆ ಎಷ್ಟು ಸ್ಥಾನ.?

- Advertisement -

karnataka TV megha Survey:

ಬೆಂಗಳೂರು :

ಕರ್ನಾಟಕ ವಿಧಾನಸಭಾ ಚುನಾವಣೆಗೆ ಇನ್ನೇನು ಕೆಲವೇ ದಿನ ಬಾಕಿ ಇದೆ. ಮಾರ್ಚ್ ಮೊದಲ ವಾರದಲ್ಲೇ ಚುನಾವಣೆ ಘೋಷಣೆ ಆಗಬಹುದು. ಈ ನಡುವೆ, ಕರ್ನಾಟಕದ ನಂಬರ್ ಒನ್ ಡಿಜಿಟಲ್ ಮೀಡಿಯಾ, ಕರ್ನಾಟಕ ಟಿವಿ ಜನವರಿ ಸಮೀಕ್ಷೆಯನ್ನ ಪ್ರಸಾರ ಮಾಡಿದೆ. ಕಳೆದ 4 ತಿಂಗಳಿನಿಂದ ಪ್ರತಿ ತಿಂಗಳು, ಆಯಾ ತಿಂಗಳ ಟ್ರೆಂಡ್ ಕೊಡ್ತಿರೋ ಕರ್ನಾಟಕ ಟಿವಿ, ಜನವರಿಯಲ್ಲೂ ಸಮೀಕ್ಷೆಯನ್ನ ಪ್ರಸಾರ ಮಾಡಿದೆ.

ಸದ್ಯ ರಾಜ್ಯದಲ್ಲಿ ಈಗಲೂ ಅತಂತ್ರ ಫಲಿತಾಂಶ ಬರಲಿದೆ ಅನ್ನೋದು ಕರ್ನಾಟಕ ಟಿವಿಯ ಜನವರಿ ಟ್ರೆಂಡ್. ಈ ಕ್ಷಣಕ್ಕೆ ಜೆಡಿಎಸ್ ಪಕ್ಷ ಮಾತ್ರ 93 ಅಭ್ಯರ್ಥಿಗಳ ಪಟ್ಟಿಯನ್ನ ಘೋಷಣೆ ಮಾಡಿದೆ. ಹೀಗಾಗಿ, ಕೆಲವೊಂದು ಕ್ಷೇತ್ರಗಳಲ್ಲಿ ಜೆಡಿಎಸ್ ಮುನ್ನಡೆ ಕಾಯ್ದುಕೊಂಡಿದೆ. ಜೆಡಿಎಸ್ ಅಭ್ಯರ್ಥಿ ಫೈನಲ್ ಆಗಿರೋ ಬಹುತೇಕ ಕ್ಷೇತ್ರಗಳಲ್ಲಿ ಕಾಂಗ್ರೆಸ್, ಬಿಜೆಪಿಗೆ ಇನ್ನೂ ಅಭ್ಯರ್ಥಿಗಳ ಗೊಂದಲ ಇದೆ. ಕರ್ನಾಟಕ ಟಿವಿಯ ಜನವರಿ ಸರ್ವೇ ಪ್ರಕಾರ, 224 ಕ್ಷೇತ್ರಗಳ ಪೈಕಿ ಬಿಜೆಪಿ 99, ಕಾಂಗ್ರೆಸ್ 79, ಜೆಡಿಎಸ್ 41, ಆಮ್ ಆದ್ಮಿ ಪಕ್ಷ 2, ಕಲ್ಯಾಣ ರಾಜ್ಯ ಪ್ರಗತಿ ಪಕ್ಷ 1, ಪಕ್ಷೇತರರು 2 ಕ್ಷೇತ್ರಗಳಲ್ಲಿ ಮುನ್ನಡೆ ಪಡೆದುಕೊಂಡಿದ್ದಾರೆ.

ಕರ್ನಾಟಕ ಟಿವಿ ಜನವರಿ ಟ್ರೆಂಡ್

ಪಕ್ಷ

ಬಿಜೆಪಿ – 99
ಕಾಂಗ್ರೆಸ್ – 79
ಜೆಡಿಎಸ್ – 41
ಆಪ್​ – 02
ಕೆಆರ್​​ ಪಿಪಿ – 01
ಪಕ್ಷೇತರ – 02

ಕರಾವಳಿ ಕರ್ನಾಟಕದ 19 ಕ್ಷೇತ್ರಗಳಲ್ಲಿ ಯಾರಿಗೆ ಎಷ್ಟು ಸೀಟು.?

ಕರಾವಳಿ ಕರ್ನಾಟಕ ಭಾಗದಲ್ಲಿ ಮೂರು ಜಿಲ್ಲೆಯ 19 ಕ್ಷೇತ್ರಗಳ ಸೇರುತ್ವೆ. ಬಿಜೆಪಿಗರಿಗೆ ಭದ್ರಕೋಟೆ. ಹಿಂದುತ್ವ ಅಜೆಂಡಾದ ಪ್ರಮುಖ ಕ್ಷೇತ್ರಗಳು ಈ ಭಾಗಕ್ಕೆ ಬರುತ್ವೆ. ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಕರಾವಳಿ ಭಾಗದ ಜಿಲ್ಲೆಗಳು. ಹಿಂದುತ್ವ ಅಜೆಂಡಾ ಒಂದೇ ಬಿಜೆಪಿಗೆ ಇಲ್ಲಿ ಆಗ್ತಿರೋ ಪ್ಲಸ್ ಪಾಯಿಂಟ್. ಜೆಡಿಎಸ್​​ ಗೆ ಇಲ್ಲ ಠೇವಣಿ ಬರಲ್ಲ. ಸದ್ಯಕ್ಕೆ ಜೆಡಿಎಸ್​​ ಗೆ ಅಭ್ಯರ್ಥಿಗಳೇ ಇಲ್ಲ. ಕಾಂಗ್ರೆಸ್ ವರ್ಸಸ್ ಬಿಜೆಪಿ ಪೈಪೋಟಿ ಜೋರಾಗಿದೆ. ಆದ್ರೂ, ಕಾಂಗ್ರೆಸ್ ಇನ್ನೂ ಟೇಕ್ ಅಪ್ ಆಗಬೇಕು. ಕರಾವಳಿಯ 19 ಕ್ಷೇತ್ರಗಳ ಪೈಕಿ, ಬಿಜೆಪಿ 14 , ಕಾಂಗ್ರೆಸ್ 5 ಕ್ಷೇತ್ರಗಳಲ್ಲಿ ಮುನ್ನಡೆ ಪಡೆದುಕೊಂಡಿದೆ.

ಕರಾವಳಿ ಕರ್ನಾಟಕ (19)
ಕರ್ನಾಟಕ ಟಿವಿ ಜನವರಿ ಟ್ರೆಂಡ್

ಬಿಜೆಪಿ – 14
ಕಾಂಗ್ರೆಸ್ – 05
ಜೆಡಿಎಸ್ – 00

ಕರಾವಳಿ ಕರ್ನಾಟಕದ ಮೂರು ಜಿಲ್ಲೆ, 19 ಕ್ಷೇತ್ರಗಳ ವಿವರ ನೋಡೋದಾದ್ರೆ..

ಕರಾವಳಿ ಕರ್ನಾಟಕ (19)
ಜಿಲ್ಲೆ ಬಿಜೆಪಿ ಕಾಂಗ್ರೆಸ್
ದಕ್ಷಿಣ ಕನ್ನಡ (8) – 06 02
ಉಡುಪಿ (5) – 04 01
ಉತ್ತರ ಕನ್ನಡ (6) – 04 02

ಕರಾವಳಿ ಕರ್ನಾಟಕ ಭಾಗದಲ್ಲಿ ಬಿಜೆಪಿ ಪರ ಅಲೆ ಇದ್ದು, ಕಾಂಗ್ರೆಸ್ ತೀವ್ರ ಪೈಪೋಟಿ ನಡೆಸ್ತಿದೆ. ಹಿಂದುತ್ವ ಅಜೆಂಡಾ ಕರಾವಳಿ ಭಾಗದಲ್ಲಿ ಬಿಜೆಪಿಗೆ ಮತಗಳನ್ನ ತಂದುಕೊಡುವಲ್ಲಿ ಯಶಸ್ವಿಯಾಗ್ತಿದೆ. ಆದ್ರೆ, ಪಕ್ಷಗಳ ಅಭ್ಯರ್ಥಿಗಳ ಪಟ್ಟಿ ಫೈನಲ್ ಆದ್ಮೇಲೆ, ಸಾಕಷ್ಟು ಬದಲಾವಣೆ ನಿರೀಕ್ಷೆ ಮಾಡಬಹುದು. ಕರ್ನಾಟಕ ಟಿವಿ ಮತ್ತೆ ಫೆಬ್ರವರಿಗೂ ಟ್ರೆಂಡ್ ನೀಡಲಿದೆ. ಅಷ್ಟೊತ್ತಿಗಾಗಲೇ ಕಾಂಗ್ರೆಸ್ ತನ್ನ ಮೊದಲ ಪಟ್ಟಿ ಪ್ರಕಟ ಮಾಡಲಿದೆ. ಹೀಗಾಗಿ, ಫೆಬ್ರವರಿ ಟ್ರೆಂಡ್ ಸಾಕಷ್ಟು ಕುತೂಹಲವನ್ನ ಮೂಡಿಸಿದೆ.

ಕರ್ನಾಟಕ ಟಿವಿ, ಬೆಂಗಳೂರು..

ಕರ್ನಾಟಕ ಟಿವಿ ಜನವರಿ ಸರ್ವೇ. ಮಧ್ಯ ಕರ್ನಾಟಕದ 25 ಕ್ಷೇತ್ರಗಳಲ್ಲಿ ಯಾರಿಗೆ ಎಷ್ಟು ಸ್ಥಾನ.?

ಕರ್ನಾಟಕ ಟಿವಿ ಜನವರಿ ಸರ್ವೇ. ಕಲ್ಯಾಣ ಕರ್ನಾಟಕದ 41 ಕ್ಷೇತ್ರಗಳಲ್ಲಿ ಯಾರಿಗೆ ಎಷ್ಟು ಸ್ಥಾನ.?

- Advertisement -

Latest Posts

Don't Miss