Tuesday, December 24, 2024

Latest Posts

ಮೆಟ್ರೋದಲ್ಲಿ ಓಡಾಡುವ ಮುನ್ನ ಈ ವಿಷಯ ತಿಳಿದುಕೊಳ್ಳಿ..?!

- Advertisement -

Metro News :

ಮೆಟ್ರೋದಲ್ಲಿ ನೀವು ಯಾವ ವಸ್ತು  ಗಳನ್ನು ತೆಗೆದುಕೊಳ್ಳಬಹುದು ಅಥವಾ ಯಾವ ವಸ್ತುಗಳನ್ನು ತೆಗೆದುಕೊಂಡು ಹೋಗುವುದು ನಿಷೇಧ ಎಂಬುದನ್ನು ತಿಳಿದಿರಬೇಕು. ನಿಷೇಧಿತ ವಸ್ತುಗಳನ್ನು ನೀವು ತೆಗೆದುಕೊಂಡು ಹೋದ್ರೆ ದಂಡ ಪಾವತಿಸಬೇಕಾಗಬಹುದು ಅಥವಾ ಜೈಲು  ಶಿಕ್ಷೆ ಅನುಭವಿಸಬೇಕಾಗುತ್ತದೆ. ನಾವಿಂದು ಮೆಟ್ರೋದಲ್ಲಿ ಯಾವ ವಸ್ತು ತೆಗೆದುಕೊಂಡು ಹೋಗೋದು ನಿಷಿದ್ಧ ಎಂಬುದನ್ನು ನಿಮಗೆ ಹೇಳ್ತೆವೆ.

ಮೆಟ್ರೋದಲ್ಲಿ ಮದ್ಯಸಾಗಣೆ ನಿಷಿದ್ಧ : ಮೆಟ್ರೋದಲ್ಲಿ ಮದ್ಯದ ಬಾಟಲ್ ಸಾಗಿಸಲು ಅವಕಾಶವಿದ್ಯೆ ಎನ್ನುವ ನಿಮ್ಮ ಪ್ರಶ್ನೆಗೆ ಉತ್ತರ ಇಲ್ಲ. ಸೀಲ್ಡ್ ಬಾಟಲಿಯನ್ನು ಕೂಡ ನೀವು ತೆಗೆದುಕೊಂಡು ಹೋಗುವ ಹಾಗಿಲ್ಲ. ಮೆಟ್ರೋ ಪ್ರಯಾಣದ ವೇಳೆ ಚೆಕ್ಕಿಂಗ್ ನಡೆಯುತ್ತದೆ. ಅದ್ರಲ್ಲಿ ಲಗೇಜ್ ಅನ್ನು ಸ್ಕ್ಯಾನ್ ಮಾಡಲಾಗುತ್ತದೆ. ಈ ವೇಳೆ ಭದ್ರತಾ ಸಿಬ್ಬಂದಿ ಮದ್ಯದ ಬಾಟಲಿ ಜೊತೆ ನಿಮ್ಮ ಪ್ರಯಾಣವನ್ನು ತಡೆಯುತ್ತಾರೆ.

ಮೆಟ್ರೋದಲ್ಲಿ ಸಾಕು ಪ್ರಾಣಿಯ ಪ್ರಯಾಣ : ಅನೇಕರು ತಮ್ಮ ಜೊತೆ ಸಾಕು ಪ್ರಾಣಿಯನ್ನು ಎಲ್ಲ ಕಡೆ ಕರೆದುಕೊಂಡು ಹೋಗ್ತಾರೆ. ಆದ್ರೆ ನಿಮ್ಮ ನೆಚ್ಚಿನ ಬೆಕ್ಕು, ನಾಯಿ ಅಥವಾ ಪಕ್ಷಿಗಳಿಗೆ ಮೆಟ್ರೋದಲ್ಲಿ ಪ್ರಯಾಣಿಸುವ ಭಾಗ್ಯವಿಲ್ಲ. ಸಾಕು ಪ್ರಾಣಿಗಳನ್ನು ಮೆಟ್ರೋದಲ್ಲಿ ಸಾಗಿಸುವುದನ್ನು ನಿಷೇಧಿಸಲಾಗಿದೆ. ಸಾಕು ಪ್ರಾಣಿ ಜೊತೆ ನೀವು ಹೊರಟಿದ್ದರೆ ಮೆಟ್ರೋ ಪ್ಲಾನ್ ಬಿಟ್ಟು, ಕಾರು, ಆಟೋ ಆಯ್ಕೆ ಮಾಡಿಕೊಳ್ಳುವುದು ಒಳ್ಳೆಯದು.

ಮೆಟ್ರೋದಲ್ಲಿ ಸೈಕಲ್ ನಂತ ವಾಹನ ತೆಗೆದುಕೊಂಡು ಹೋಗ್ಬಹುದು? : ಈ ಪ್ರಶ್ನೆಗೆ ಉತ್ತರ ನೋ. ನೀವು ಸೈಕಲ್ ನಂತಹ ಯಾವುದೇ ವಾಹನವನ್ನು ಮೆಟ್ರೋದಲ್ಲಿ ತೆಗೆದುಕೊಂಡು ಹೋಗುವಂತಿಲ್ಲ. ಆದ್ರೆ ಮಕ್ಕಳ ಆಟಿಕೆ ಸೈಕಲ್ ತೆಗೆದುಕೊಂಡು ಹೋಗ್ಬಹುದು. ಅದ್ರ ತೂಕ ಕಡಿಮೆಯಿರಬೇಕು. ಎಲ್ಲ ಮೆಟ್ರೋ ನಿಲ್ದಾಣದಲ್ಲಿ ವಾಹನ ನಿಲುಗಡೆಗೆ ಅವಕಾಶವಿದೆ. ನೀವು ವಾಹನವನ್ನು ಅಲ್ಲಿ ನಿಲ್ಲಿಸಿ ಮೆಟ್ರೋದಲ್ಲಿ ಪ್ರಯಾಣ ಬೆಳೆಸಬಹುದು.

ಮೆಟ್ರೋದಲ್ಲಿ ರೀಲ್ ನಿಷಿದ್ಧ : ರೀಲ್ಸ್ ಈಗ ಹೆಚ್ಚು ಪ್ರಸಿದ್ಧಿ ಪಡೆದಿದೆ. ಜನರು ಎಲ್ಲೆಂದರಲ್ಲಿ ರೀಲ್ಸ್ ಮಾಡಲು ಶುರು ಮಾಡ್ತಾರೆ. ಆದ್ರೆ ಮೆಟ್ರೋದಲ್ಲಿ ರೀಲ್ಸ್ ಅಥವಾ ಯಾವುದೇ ಕಿರು ವಿಡಿಯೋ ಮಾಡಲು ಅನುಮತಿಯಿಲ್ಲ. ಕೆಲ ದಿನಗಳ ಹಿಂದೆ ದೆಹಲಿ ಮೆಟ್ರೋ ಈ ಬಗ್ಗೆ ಸೂಚನೆ ನೀಡಿದೆ. ಒಂದ್ವೇಳೆ ರೀಲ್ಸ್ ಮಾಡಿ ಸಿಕ್ಕಿಬಿದ್ರೆ ದಂಡ ವಿಧಿಸಲಾಗುತ್ತದೆ.

ಆಡಿಯೋ ಬಾಂಬ್ ಸಿಡಿಸಿದ ಸಿಡಿ ಸಾಹುಕಾರ್..!

ಹೆಬ್ಬಾಳ ಕ್ಷೇತ್ರದ ಕಾಂಗ್ರೆಸ್​ ಶಾಸಕ ಭೈರತಿ ಸುರೇಶ್ LED TV ಹಂಚೋದ್ರಲ್ಲಿ ಬ್ಯುಸಿ..!

ಡಿ.ಕೆ.ಶಿ ವಿರುದ್ಧ ರಮೇಶ್ ಜಾರಕಿಹೊಳಿ ಆರೋಪ..?! ಮತ್ತೆ ಬುಗಿಲೆದ್ದ ಸಿಡಿ ಕೇಸ್..!

- Advertisement -

Latest Posts

Don't Miss