ಕರ್ನಾಟಕ ಟಿವಿ : ಸಿಎಂ ಯಡಿಯೂರಪ್ಪ ಇಂದು ಕನ್ನಂಬಾಡಿ ಜಲಾಶಯಕ್ಕೆ ಬಾಗಿಮ ಅರ್ಪಿಸಿದರು. ನಂತರ ಮಾತನಾಡಿದ ಸಿಎಂ ಕಾವೇರಿ ಮಾತೆಗೆ ಬಾಗಿನ ಅರ್ಪಿಸಿದ್ದೇನೆ. 1 ತಿಂಗಳ ಹಿಂದೆ ಈ ರಾಜ್ಯದ ಯಾವುದೇ ಜಲಾಶಯ ತುಂಬಿಲ್ಲ. ಮುಂದೆ ಈ ನಾಡಿನ ಭವಿಷ್ಯ ಏನು ಎಂದು ಚಿಂತೆ ಮಾಡ್ತಿದ್ದೇವು. ಪ್ರತಿ ದಿನ ಮಂಡ್ಯ ಜಿಲ್ಲೆಯ ಡಿಸಿಗೆ ಕರೆಮಾಡಿ ಜಲಾಶಯದ ಒಳಹರಿವಿನ ಪ್ರಮಾಣದ ಬಗ್ಗೆ ಮಾಹಿತಿ ಪಡೆಯುತ್ತಿದ್ದೆ. ಆದ್ರೆ ವರುಣದೇವನ ಕೃಪೆಯಿಂದ ಕೇವಲ 4-5ದಿನಗಳಲ್ಲಿ ಕೆಆರ್‌ಎಸ್ ತುಂಬಿದೆ. ಈ ಭಾಗದ ಎಲ್ಲಾ ಕೆರೆಗಳಿಗೆ ನೀರು ತುಂಬಿಸುವ ಕೆಲಸ ಭರದಿಂದ ಸಾಗಿದೆ. ಕೆರೆಗಳಲ್ಲಿ ನೀರು ಸಂಗ್ರಹದಿಂದ ಅಂತರ್ಜಲ ಕುಸಿಯುವುದು ತಪ್ಪಲಿದೆ ಅಂತ ಹೇಳಿದ್ರು.
ಕೆಆರ್‌ಎಸ್ ಅಭಿವೃದ್ಧಿಗೆ ನಾನು ಶ್ರಮಿಸಲಿದ್ದೇನೆ
ದೇಶವಿದೇಶಗಳಿಂದ ಬರುವ ಪ್ರವಾಸಿಗರಿಗೆ ಆಕರ್ಷಣೀಯ ಸ್ಥಳವಾಗಿ ಕೆಆರ್‌ಎಸ್ ಅಣೆಕಟ್ಟೆಯನ್ನು ರೂಪಿಸಲಿದ್ದೇನೆ. ಈ ಬಗ್ಗೆ ಮಂಡ್ಯ ಜಿಲ್ಲಾಧಿಕಾರಿಗಳಿಗೆ ಎಸ್ಟಿಮೇಟ್ ಕಳುಹಿಸಿಕೊಡಲು ಸೂಚಿಸಿದ್ದೇನೆ. ಕೆಆರ್‌ಎಸ್ ಗ್ರಾಮವನ್ನು ಕಂದಾಯ ಗ್ರಾಮ ಎಂದು ಘೋಷಣೆ ಮಾಡಿ ಇಲ್ಲಿನ ಗ್ರಾಮಸ್ಥರಿಗೆ ಹಕ್ಕು ಪತ್ರ ಕೊಡಲು ಜಿಲ್ಲಾಧಿಕಾರಿಗೆ ಸೂಚಿಸಿದ್ದೇನೆ ಅಂತ ಸಿಎಂ ಹೇಳಿದ್ರು.
ಬಾಲ್ಯ ನೆನೆದ ಬೂಕನಕೆರೆ ಯಡಿಯೂರಪ್ಪ
ಕನ್ನಂಬಾಡಿ ಗ್ರಾಮದಲ್ಲಿ ನನ್ನ ತಾತ ಇದ್ದರು, ಬೂಕನಕೆರೆಯಲ್ಲಿ ನನ್ನ ತಂದೆ ಇದ್ದರು, ದಸರಾ ನೋಡಲು ನಾನು ಇಲ್ಲಗೆ ಬರುತ್ತಿದೆ. ಈಗ ಈ ಭಾಗವನ್ನ ಅಭಿವೃದ್ಧಿ ಪಡಿಸುವ ಸೌಭಾಗ್ಯ ನನ್ನದಾಗಿದೆ ಅಂತ ಸಿಎಂ ಹರ್ಷ ವ್ಯಕ್ತಪಡಿಸಿದ್ರು.