- Advertisement -
ಕರ್ನಾಟಕ ಟಿವಿ : ಆಳ್ವಾಸ್ ಶಿಕ್ಣಣ ಪ್ರತಿಷ್ಠಾನ ವತಿಯಿಂದ ನಡೆಯಬೇಕಿದ್ದ ಆಳ್ವಾಸ್ ವಿರಾಸತ್ ನುಡಿಸಿರಿ ರದ್ದಗೊಂಡಿದೆ. ನವೆಂಬರ್ 14ರಿಂದ 17ರ ವರೆಗೆ ನಡೀಬೇಕಿದ್ದ ಆಳ್ವಾಸ್ ವಿರಾಸತ್ ನುಡಿಸಿರಿ ನಡೆಸಲು ತೀರ್ಮಾನಿಸಿತ್ತು. ಆದ್ರೆ ರಾಜ್ಯ ನೆರೆ ಹಾವಳಿಯಿಂದ ತತ್ತರಿಸಿ ಸಂಕಷ್ಟಕ್ಕೆ ಒಳಗಾಗಿರುವುದರಿಂದ ಕಾರ್ಯಕ್ರಮ ರದ್ದು ಮಾಡಲಾಗಿದೆ. ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಉತ್ತರ ಕರ್ನಾಟಕ ಭಾಗದಿಂದ ಸಾಹಿತ್ಯ ಪ್ರೇಮಿಗಳು ಆಗಮಿಸ್ತಿದ್ರು. ಈಗ ಉ ಕರ್ನಾಟಕ ಪ್ರವಾಹದಿಂದ ತತ್ತರಿಸಿರುವಾಗ ಸಂಭ್ರಮ ಆಚರಿಸೋದು ಸರಿಯಲ್ಲ. ಈ ಹಿನ್ನೆಲೆಯಲ್ಲಿ ಈ ಬಾರಿ ದೊಡ್ಡ ಮೊತ್ತವನ್ನ ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡಲಾಗುವುದು. ವಿರಾಸತ್-ನುಡಿಸಿರಿ ಕಾರ್ಯಕ್ರಮವನ್ನ ಮುಂದಿನ ವರ್ಷ ಆಚರಿಸಲಾಗುವುದು ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ್ ಆಳ್ವಾ ಹೇಳಿಕೆ ನೀಡಿದ್ದಾರೆ
- Advertisement -