ವಿಮಾನ ನಿಲ್ದಾಣದಲ್ಲಿ ಸಿದ್ದಾರ್ಥ್​ ಮತ್ತು ಕಿಯಾರಾ ಜೋಡಿ

ಸಿದ್ದಾರ್ಥ್​ ಮತ್ತು ಕಿಯಾರಾ ಅಡ್ವಾಣಿಗೆ ಅಭಿನಂದನೆ ತಿಳಿಸುತ್ತಿದ್ದಾರೆ. ಮದುವೆಯ ಫೋಟೋಗಳು ವೈರಲ್​ ಆಗಿವೆ.

ಬಾಲಿವುಡ್​ನ ಕೆಲವೇ ಮಂದಿಗೆ ಮಾತ್ರ ವಿವಾಹವನ್ನು ಕಣ್ತುಂಬಿಕೊಳ್ಳುವ ಅವಕಾಶ ಸಿಕ್ಕಿತು. ಮದುವೆ ಕಾರ್ಯಗಳು ಪೂರ್ಣಗೊಂಡ ಬಳಿಕ ಸಿದ್ದಾರ್ಥ್​ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ಅವರು ಮುಂಬೈಗೆ ಹೊರಟಿದ್ದಾರೆ.

ಈ ವೇಳೆ ಅವರು ಜೈಸಲ್ಮೇರ್ ​ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾರೆ. ಮದುವೆ ನಂತರ ಮೊದಲ ಬಾರಿಗೆ ಜೋಡಿಯಾಗಿ ಬಂದ ಸಿದ್ದಾರ್ಥ್​ ಮತ್ತು ಕಿಯಾರಾ ಅಡ್ವಾಣಿ ಅವರ ಫೋಟೋ ಕ್ಲಿಕ್ಕಿಸಲು ಪಾಪರಾಜಿಗಳು ಮುಗಿಬಿದ್ದರು

About The Author