ಬೆಂಗಳೂರು ರಸ್ತೆಗೆ ಅಪ್ಪು ಹೆಸರು; ಅಶ್ವಿನಿ ಪುನೀತ್ ರಾಜ್‌ಕುಮಾರ್

ನಾಯಂಡಹಳ್ಳಿ ಜಂಕ್ಷನ್ನಿಂದ ವೆಗಾಸಿಟಿ ಮಾಲ್ ಜಂಕ್ಷನ್ವರೆಗಿನ 12 ಕಿ.ಮೀ. ಹೊರ ವರ್ತುಲ ರಸ್ತೆಯನ್ನು ಅಪ್ಪು ಗೌರವಾರ್ಥ ‘ಡಾ|| ಪುನೀತ್ ರಾಜ್‌ಕುಮಾರ್ ರಸ್ತೆ’ಯನ್ನು ಲೋಕಾರ್ಪಣೆ ಮಾಡಿದಕ್ಕಾಗಿ ನಮ್ಮ ಹೃತ್ಪೂರ್ವಕ ಕೃತಜ್ಞತೆಗಳು.

ರಸ್ತೆ ಪಕ್ಕದಲ್ಲಿ ಅಪ್ಪು ಭಾವಚಿತ್ರ ಹಾಕಿ ‘ಡಾ||ಪುನೀತ್ ರಾಜ್‌ಕುಮಾರ್ ರಸ್ತೆ’ ಎಂದು ಬರೆದಿರುವ ಗ್ರಾಫಿಕ್ಸ್ ಫೋಟೋವನ್ನು ಅಶ್ವಿನಿ ಪುನೀತ್ ಅವರು ಪೋಸ್ಟ್ ಮಾಡಿದ್ದಾರೆ. ಜೊತೆಗೆ ‘ಕರ್ನಾಟಕ ಸರ್ಕಾರಕ್ಕೆ ನಮ್ಮ ಹೃತ್ಪೂರ್ವಕ ಕೃತಜ್ಞತೆಗಳು’ ಎಂದು ಅವರು ಹೇಳಿದ್ದಾರೆ.




