Friday, November 22, 2024

Latest Posts

ಟರ್ಕಿಗೆ ಭಾರತ ಕೊಟ್ಟ ನೆರವು ಎಷ್ಟು ಗೊತ್ತಾ…?

- Advertisement -

Turkey-syria-Earthquakes

ಬೆಂಗಳೂರು(ಫೆ.9): ಟರ್ಕಿ, ಸಿರಿಯಾ ದೇಶಗಳಲ್ಲಿ ಈಗಾಗಲೇ ನರಕ ಸದೃಶ ದೃಶ್ಯಗಳು ಒಂದಾದ ಮೇಲೊಂದು ಅಪ್ಪಳಿಸುತ್ತಲೇ ಇವೆ. ಜನರ ಪಾಡು ಹೇಳೋಕೆ, ನೋಡೋದಕ್ಕೆ ಅಸಾಧ್ಯ ಎಂಬ ಪರಿಸ್ಥಿತಿ ಉಂಟಾಗಿದೆ. ಇದರಿಂದ ವಿವಿಧ ದೇಶಗಳು ಟರ್ಕಿಯತ್ತ ಮುಖ ಮಾಡಿದ್ದು, ಭಾರತವೂ ನೆರವಿನ ಹಸ್ತ ಚಾಚಿದ್ದು, ಭೂಕಂಪಪೀಡಿತ ಟರ್ಕಿ ದೇಶಕ್ಕೆ ರಕ್ಷಣಾ ಕಾರ್ಯದಲ್ಲಿ ನೆರವಾಗಲು ಭಾರತದಿಂದ ಐದನೇ ವಿಮಾನ ಹಾರಿ ಹೋಗಲಿದೆ. ಇದರಲ್ಲಿ ಎನ್​ಡಿಆರ್​ಎಫ್ ತಜ್ಞರು, ಪರಿಹಾರ ಸಾಮಗ್ರಿ ಇತ್ಯಾದಿಯನ್ನು ಕಳುಹಿಸಿಕೊಡಲಾಗುತ್ತಿದೆ.

ಈಗಾಗಲೇ ಟರ್ಕಿ ದೇಶಕ್ಕೆ ಭಾರತ ನಾಲ್ಕು ಸಿ-17 ಮಿಲಿಟರಿ ವಿಮಾನಗಳ ಮೂಲಕ ರಕ್ಷಣಾ ಮತ್ತು ಪರಿಹಾರ ಸಾಮಗ್ರಿಗಳನ್ನು ಕಳುಹಿಸಿಕೊಟ್ಟಿದೆಇದರಲ್ಲಿ ಎನ್​ಡಿಎಆರ್​ಎಫ್​ನ ರಕ್ಷಣಾ ತಜ್ಞರುಶ್ವಾನ ದಳ ಮೊದಲಾದವು ಸೇರಿವೆಈಗ ಭಾರತದಿಂದ ಮತ್ತೊಂದು ಸಿ-17 ಫ್ಲೈಟ್ ಮೂಲಕ ಟರ್ಕಿಗೆ ಐದನೇ ಬ್ಯಾಚ್ ರವಾನೆಯಾಗಲಿದೆ

ಟರ್ಕಿಯಲ್ಲಿ  ಸುಮಾರು ಸಾವಿರ ಭಾರತೀಯ ನಾಗರಿಕರಿದ್ದು, ಇಸ್ತಾಂಬುಲ್​ನಲ್ಲಿ 850, ಅಂಕಾರದಲ್ಲಿ 250 ಮಂದಿ ಇದ್ದಾರೆಇನ್ನುಳಿದವರು ಬೇರೆ ಬೇರೆ ಕಡೆ ಚದುರಿ ಹೋಗಿದ್ದಾರೆಅವರ ಪೈಕಿ ಬೆಂಗಳೂರು ಮೂಲದ ಕಂಪನಿಯ ಉದ್ಯೋಗಿ ಕಳೆದ ಎರಡು ದಿನಗಳಿಂದ ನಾಪತ್ತೆಯಾಗಿದ್ದಾರೆಇನ್ನೂ ಹಲವರು ದೂರದ ಸ್ಥಳದಲ್ಲಿ ಸಿಲುಕಿಕೊಂಡಿದ್ದಾರಾದರೂ ಸದ್ಯ ಸುರಕ್ಷಿತವಾಗಿದ್ದಾರೆನ್ನಲಾಗಿದೆ

- Advertisement -

Latest Posts

Don't Miss