Political News
ಬೆಂಗಳೂರು(ಫೆ.11): ಕರ್ನಾಟಕದ ರಾಜಾಹುಲಿ ಅಂದ ತಕ್ಷಣ ನಮಗೆಲ್ಲಾ ನೆನಪು ಬರೋದು ರಾಜಕೀಯ ವ್ಯಕ್ತಿಗಳಲ್ಲಿ ಬಿಎಸ್ ಯಡಿಯೂಪ್ಪ. ಫೆಬ್ರವರಿ 27ರಂದು 80ರ ವಸಂತಕ್ಕೆ ಕಾಲಿಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಅಭಿಮಾನಿಗಳು, ಕಾರ್ಯಕರ್ತರು ಅದ್ಧೂರಿಯಾಗಿ ಜನ್ಮದಿನವನ್ನು ಆಚರಿಸಲು ನಿರ್ಧರಿಸಿದ್ದಾರೆ.
ಯಡಿಯೂರಪ್ಪ ಅವರು ಪಕ್ಷವನ್ನು ತಳ ಹಂತದಿಂದ ಕಟ್ಟಿ ಬೆಳೆಸುವ ಜೊತೆಗೆ 4 ಬಾರಿ ಮುಖ್ಯಮಂತ್ರಿಯಾಗಿ ರೈತರ ಜತೆಗೆ ನಾಲ್ಕು ಬಾರಿ ಮುಖ್ಯಮಂತ್ರಿಯಾಗಿ ರೈತರ ಜತೆಗೆ ಎಲ್ಲಾ ಜಾತಿ ವರ್ಗಗಳ ಶ್ರೇಯೋಭಿವೃದ್ಧಿಗೆ ಶ್ರಮಿಸಿದ್ದಾರೆ. ಹೀಗಾಗಿ ಅವರ ಜನ್ಮದಿನ ಅಂಗವಾಗಿ ಟ್ರ್ಯಾಕ್ಟರ್ ವಿತರಣಾ ಕಾರ್ಯಕ್ರಮ ಆಯೋಜಿಸಲಾಗಿದೆ.
ಈ ಹಿಂದೆ ಕೊರೋನಾ ಇದ್ದ ಕಾರಣದಿಂದಾಗಿ ಸರಳವಾಗಿ ಬರ್ತ್ ಡೇ ಆಚರಿಸಿಕೊಂಡಿದ್ದ ಇವರು ಈ ವರ್ಷ ತಮ್ಮ ಹುಟ್ಟು ಹಬ್ಬ ಆಚರಣೆ ಪ್ರಯುಕ್ತ ಡಿಫರೆಂಟ್ ಆಗಿ ಹುಟ್ಟುಹಬ್ಬ ಆಚರಿಸಲು ನಿರ್ಧರಿಸಿ, ಸಾಮಾಜಿಕ ಕಾರ್ಯದತ್ತ ಮುಖಮಾಡಿದ್ದಾರೆ. ಚಾಮರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ರಿಯಾಯಿತಿ ದರದಲ್ಲಿ ಟ್ರ್ಯಾಕ್ಟರ್ ಕೊಡಲು ಮುಂದಾಗಿದ್ದು, ಸದ್ಯ ಯಾವುದೇ ಮುಂಗಡ ಹಣ ಕಟ್ಟದೆ ಟ್ರ್ಯಾಕ್ಟರ್ ವಿತರಿಸಲಾಗುತ್ತಿದೆ. ಮೊದಲು ಬಂದ 80 ರೈತರಿಗೆ ಆದ್ಯತೆ ಮೇರೆಗೆ ಟ್ರ್ಯಾಕ್ಟರ್ ವಿತರಣೆ ಮಾಡಲಾಗುತ್ತಿದೆ. ಈ ಹಿಂದೆ ಕೂಡ ಅಧ್ಯಕ್ಷ ಎಂ.ರುದ್ರೇಶ್ ಅವರು ರ ಜನ್ಮದಿನದ ಅಂಗವಾಗಿ ರೈತರಿಗೆ ಟ್ರ್ಯಾಕ್ಟರ್ ವಿತರಿಸಿದ್ದರು.