“ಸುದೀಪ್ ರಾಜಕೀಯಕ್ಕೆ ಬನ್ನಿ ಎಂದು ಬಲವಂತ ಮಾಡುವುದಿಲ್ಲ”: ಡಿಕೆಶಿ

Political News:

ಕೆಲ ದಿನಗಳ ಹಿಂದೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಸುದೀಪ್ ಅವರನ್ನು ಭೇಟಿ ಮಾಡಿದ್ದು ಚರ್ಚೆಗೆ ಕಾರಣವಾಗಿತ್ತು.ಈ ಸಂಬಂಧ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಡಿ.ಕೆ ಶಿವಕುಮಾರ್, ಸುದೀಪ್ ಅವರು ಸಿನಿಮಾ ಕ್ಷೇತ್ರದಲ್ಲಿ ತಮ್ಮದೇ ಆದ ಸಾಧನೆ ಮಾಡಿದ್ದಾರೆ, ಸಾಮಾಜಿಕ ಕ್ಷೇತ್ರದಲ್ಲೂ ಸಾಧನೆ ಮಾಡಿದ್ದಾರೆ, ಆದರೆ ಅವರಿಗೆ ಪಾಲಿಟಿಕ್ಸ್ ಏನು ಪರಿಸ್ಥಿತಿ ಏನು ಎಂಬ ಬಗ್ಗೆ ಅರಿವಿಲ್ಲ ಎಂದಿದ್ದಾರೆ. ಇತ್ತೀಚೆಗೆ ಸುದೀಪ್ ಅವರನ್ನು ಭೇಟಿ ಮಾಡಿದ್ದೆ, ಕೆಲ ಕಾರ್ಯಕ್ರಮಗಳ ಇನ್ವಿಟೇಷನ್ ನೀಡಬೇಕಿತ್ತು, ಕೆಲ ವಿಷಯಗಳ ಬಗ್ಗೆ ಚರ್ಚೆ ಮಾಡಿದ್ದೇವೆ. ಈ ವೇಳೆ ನಾನು ನನ್ನ 35 ವರ್ಷಗಳ ರಾಜಕೀಯ ಅನುಭವದ ಜ್ಞಾನ ಭಂಡಾರವನ್ನು ಹಂಚಿಕೊಂಡಿದ್ದೇನೆ, ಅವರನ್ನು ಬಲವಂತ ಮಾಡುವಂತದ್ದು ಏನು ಇಲ್ಲ, ಕೆಲವು ಪ್ರಶ್ನೆಗಳನ್ನು ಕೇಳಿದ್ದೇವೆ ಎಂದಿದ್ದಾರೆ. ನಟ ಸುದೀಪ್ ನನ್ನ ಸ್ನೇಹಿತ. ಮನೆಗೆ ಬಂದಾಗ ರಾಜ್ಯ ರಾಜಕಾರಣದ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದೇನೆ. ಅವರು ಕೇಳಿದ ಪ್ರಶ್ನೆಗಳಿಗೆ ನನ್ನ ರಾಜಕೀಯ ಅನುಭವದ ಆಧಾರದ ಮೇಲೆ ಉತ್ತರ‌ ನೀಡಿದ್ದೇನೆ. ಅವರನ್ನು ರಾಜಕೀಯಕ್ಕೆ ಬನ್ನಿ ಎಂದು ಬಲವಂತ ಮಾಡುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದರು.

“ರಾಮನಗರದಲ್ಲಿ ರಾಮಮಂದಿರಾ ಕಟ್ಟಲು  ಕರ್ನಾಟಕ ವಿಧಾನಸಭೆ ಚುನಾವಣೆ  ಸಂದರ್ಭದಲ್ಲಿ ಬಿಜೆಪಿಗೆ ನೆನಪಾಗಿದೆ”: HDK

ಮಹಾ ಶಿವರಾತ್ರಿ ಉತ್ಸವಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಭಾಗಿ..!

ಗುರು ತಿಪ್ಪೇರುದ್ರ ಸ್ವಾಮಿ ಜಾತ್ರೋತ್ಸವ ಹಿನ್ನಲೆ; ಪೂರ್ವಸಿದ್ಧತೆ

About The Author