ತಮಿಳು ನಟ ಧನುಷ್ ಸಿನಿಮಾ ಫ್ರೀ ಎಂಟ್ರಿ..!!

ತಮಿಳಿನಲ್ಲಿ ‘ವಾತಿ’ ಎಂಬ ಶೀರ್ಷಿಕೆಯೊಂದಿಗೆ ಬಿಡುಗಡೆಗೊಂಡಿದ್ದು, ತೆಲುಗಿನಲ್ಲಿ ‘ಸಾರ್’ ಎಂಬ ಶೀರ್ಷಿಕೆಯೊಂದಿಗೆ ಬಿಡುಗಡೆಯಾಗಿದೆ. ಟ್ರೇಲರ್ ಮತ್ತು ಟೀಸರ್ನಿಂದ ಕ್ರೇಜ್ ಕ್ರಿಯೇಟ್ ಮಾಡಿದ್ದ ಸಿನಿಮಾ ರಿಲೀಸ್ ಆದ ಮೊದಲ ದಿನವೇ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.

ಸಿನಿಮಾ ಪ್ರಮೋಷನ್ ಹಿನ್ನೆಲೆ ತೆಲುಗು ರಾಜ್ಯಗಳ ಸರ್ಕಾರಿ ಶಾಲೆ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಈ ಸಿನಿಮಾವನ್ನು ಉಚಿತವಾಗಿ ತೋರಿಸಲು ಚಿತ್ರತಂಡ ಮುಂದಾಗಿದೆ. ಈ ಉಚಿತ ಶೋಗಳು ಕೆಲವು ಆಯ್ದ ಪ್ರದೇಶಗಳಲ್ಲಿ ಇರಲಿದೆ.

ಸಿನಿಮಾ ಮೊದಲ ದಿನವೇ ಎಪಿ ತೆಲಂಗಾಣದಲ್ಲಿ ಒಟ್ಟು 5.5 ಕೋಟಿ ಬ್ಯುಸಿನೆಸ್ ಮಾಡಿದೆ. ಹೀಗಾಗಿ ಈ ಸಿನಿಮಾ ಹಿಟ್ ಆಗಬೇಕಾದರೆ 6 ಕೋಟಿ ಶೇರ್ ಬೇಕು. ತಮಿಳಿನಲ್ಲಿ 35 ಕೋಟಿ ವರೆಗೂ ವ್ಯಾಪಾರ ಮಾಡಿದೆ ಎನ್ನಲಾಗ್ತಿದೆ.

ದೇಶದಲ್ಲಿ ಶಿಕ್ಷಣ ಎನ್ನುವುದು ಲಾಭದಾಯಕವಲ್ಲದ ಸೇವೆ ಎಂಬ ಕಥೆಯನ್ನು ಆಧರಿಸಿದೆ. ಗುಣಮಟ್ಟದ ಶಿಕ್ಷಣ ಬೇಕಾದರೆ ಹಣ ಖರ್ಚು ಮಾಡಬೇಕು. ಹಣ ಇರುವವನು ಡಿಗ್ರಿ ಖರೀದಿಸುತ್ತಾರೆ. ಹಣ ಕಡಿಮೆ ಇರುವವನು ಸಾಲ ಮಾಡಿದರೂ ಸಿಗಲ್ಲ.1990ರ ದಶಕದಲ್ಲಿ ದೇಶದಲ್ಲಿ ಉದಾರೀಕರಣಗೊಂಡ ಆರ್ಥಿಕ ನೀತಿಗಳಿಂದಾಗಿ ಶಿಕ್ಷಣ ವ್ಯವಸ್ಥೆಯಲ್ಲಿ ಖಾಸಗಿ ಏಕಸ್ವಾಮ್ಯ ಹೆಚ್ಚಾಯಿತು.

About The Author