ಹುಟ್ಟುಹಬ್ಬದ ದಿನವೇ ಎಸ್. ಕೆ ಭಗವಾನ್ ಕೊನೆಯುಸಿರೆಳೆದಿರುವುದು ವಿಪರ್ಯಾಸ.
ವಯೋಸಹಜ ಕಾಯಿಲೆಯಿಂದ ಕೊನೆಯುಸಿರೆಳೆದಿದ್ದಾರೆ. ತೀವ್ರ ಅನಾರೋಗ್ಯಕ್ಕೀಡಾಗಿದ್ದ ಭಗವಾನ್ ಅವರನ್ನು ಕೆಲ ದಿನಗಳಿಂದ ಜಯದೇವ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು.

ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಬೆಳಗಿನ ಜಾನ ನಿಧನರಾಗಿದ್ದಾರೆ.ಭಗವಾನ್ ಪಾರ್ಥೀವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿ ಮಾತನಾಡಿದ್ದ ಶಿವಣ್ಣ “ಅವರು ನಮ್ಮ ತಂದೆ ಸಮಾನರಾಗಿದ್ದರು. ನಮ್ಮ ಕುಟುಂಬದ ಜೊತೆ ಬಹಳ ಆತ್ಮೀಯ ಒಡನಾಟ ಇತ್ತು. ನಮ್ಮ ಕುಟುಂಬದ ಜೊತೆಗಿನ ಅವರ ಅನುಬಂಧ ಅಪರೂಪದ್ದು. ದೊರೆ- ಭಗವಾನ್ ಅವಳಿ ಸಹೋದರಂತೆ ಇದ್ದರು. ನಮ್ಮ ಫ್ಯಾಮಿಲಿ ಅಲ್ಲಿ ಅವ್ರು ಕೂಡ ಒಬ್ಬರು.





