Tuesday, July 22, 2025

Latest Posts

ಬಿಎಸ್ ವೈ ರಾಜಕೀಯ ಜೀವನ ಹೇಗಿತ್ತು..?

- Advertisement -

political news

ಬೆಂಗಳೂರು(ಫೆ.25): ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಸದನದಲ್ಲಿ 15 ನೇ ಕೊನೆಯ ವಿಧಾನಸಭೆಯ ಅಧಿವೇಶನದಲ್ಲಿ ತನ್ನ ರಾಜಕೀಯ ವೃತ್ತಿಗೆ  ವಿದಾಯ ಘೋಷಿಸಿದರು. ರಾಜಾಹುಲಿ ಎಂದೇ ಕರೆಸಿಕೊಳ್ಳುತ್ತಿದ್ದ ಬಿಜೆಪಿಯ ಬಲಿಷ್ಠ ನಾಯಕ  ಬಿ.ಎಸ್ ಯಡಿಯೂರಪ್ಪ ಅವರು ಸ್ಲೀಕರ್ ಎದುರು ಮನದಾಳದ ಮಾತುಗಳನ್ನು ಹಂಚಿಕೊಂಡರು, ಈ ವೇಳೆ ಒಂದು ಕ್ಷಣ ಭಾವುಕರಾಗಿ, ಮನಸ್ಸು ಹಗುರ ಮಾಡ್ಕೊಂಡ್ರು..ಅಷ್ಟಕ್ಕೂ ಬಿಎಸ್ ವೈ ರಾಜಕೀಯ ಹಾದಿ ಹೇಗಿತ್ತು ಅನ್ನೋದನ್ನು ತಿಳಿಯಲೇಬೇಕು.

ಎಸ್..ರಾಜಕೀಯ ಕ್ಷೇತ್ರದ ಅಂದ್ರೇನೆ ಹಾಗೆ, ಇದೊಂದು ಸ್ಪೆಷಲ್ ಕ್ಷೇತ್ರ ಅಲ್ಲ..ಇಲ್ಲಿ ಬೆಳೆದೋದಕ್ಕೆ ಚಾಣಾಕ್ಷತನ ಎಷ್ಟು ಮುಖ್ಯವೂ ನಿಯತ್ತು ಕೂಡ ಅಷ್ಟೇ ಮುಖ್ಯ, ಈ ನಿಟ್ಟಿನಲ್ಲಿ ರಾಜಾಹುಲಿ ಅಂತಲೇ ಕರೆಯಲ್ಪಡುವ ಬಿಎಸ್ ಯಡಿಯೂರಪ್ಪ ಅವರಿಗೆ ಚಾಣಾಕ್ಷಾ ಎಂಬ ಕ್ರೆಡಿಟ್ ಖಂಡಿತಾ ಸಿಗುತ್ತೆ,  ರಾಜಕೀಯದಲ್ಲಿ ತನ್ನ ದೂರದೃಷ್ಟಿಯ ಯೋಚನೆಯಿಂದ ಜನ ಮನಸ್ಸು ಗೆದ್ದ ನಾಯಕ ಇವರು..ಸತತ 40 ವರ್ಷದ ಶಾಸನ ಸಭೆಯ ನಂಟು ಬೆಳೆಸಿಕೊಂಡ ಈ ದಿಗ್ಗಜ ಆರ್ ಎಸ್ ಎಸ್ ನಿಂದ ಪ್ರಬಲರಾಗಿ, ರಾಜಕೀಯ ಕ್ಷೇತ್ರದಲ್ಲಿ ಉತ್ತುಂಗದ ಶಿಖರವನ್ನೇರಿನ ಮಾಸ್ ಲಿಡರ್ ಆಗಿ ಹೊರಹೊಮ್ಮಿದ್ದಾರೆ.

ಯಾರೇ ಆಗಲಿ ನಿವೃತ್ತಿ ಆಗ್ತೀವಿ ಅಂದ್ರೆ ಖಂಡಿತವಾಗಲೂ ಆ ಒಂದು ನೋವು ಕಣ್ಣೀರು ತರಿಸುತ್ತೆ, ಇದೀಗ ಬಿಎಸ್ ವೈ ಅವರೂ ಕೂಡ ವಿದಾಯದ ಸಮಯದಲ್ಲಿ ಕಣ್ಣೀರಿಟ್ಟಿದ್ದಾರೆ, ಬಿಜೆಪಿಯ ಒಬ್ಬ ಪ್ರಬಲ ನಾಯಕರಾಗಿ ಮುಂದುವರೆದ ಕೀರ್ತಿ ಇವರಿಗಿದೆ. ವಿದಾಯದ ವೇಳೆ ತಮ್ಮ ರಾಜಕೀಯದ ಆರಂಭ ದಿನಗಳಿಂದ ಪಕ್ಷ ಕಟ್ಟಿಕೊಂಡು ಬಂದ ರೀತಿ ಇಂದಿನವರೆಗಿನ ರಾಜಕೀಯ ಜೀವನವನ್ನು ಮೆಲುಕು ಹಾಕಿದರು.

ಇದು ನನ್ನ ಕೊನೆಯ ಅಧಿವೇಶನ. ಮುಂದಿನ ಚುನಾವಣೆಯಲ್ಲಿ ನಾನು ಸ್ಪರ್ಧೆ ಮಾಡುವ ಮಾತೇ ಇಲ್ಲ. ರಾಜ್ಯದಲ್ಲಿ ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಪ್ರಯತ್ನ ಮಾಡುತ್ತೇನೆ. ರಾಜ್ಯಾದ್ಯಂತ ಪ್ರವಾಸ ಮಾಡಿ ಪಕ್ಷವನ್ನು ಅಧಿಕಾರಕ್ಕೆ ತರುತ್ತೇನೆ. ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಸದನಕ್ಕೆ ಆಯ್ಕೆಯಾಗಿ ಬರಬೇಕು. ಅದಕ್ಕೆ ಪುರುಷ ಸದಸ್ಯರು ಹೆಚ್ಚಿನ ಪ್ರೋತ್ಸಾಹ ನೀಡಬೇಕು ಹೀಗೆ ಸದನದಲ್ಲಿ ಭಾವುಕ ಮಾತುಗಳನ್ನಾಡಿದರು.

ನಾಲ್ಕು ಬಾರಿ ಮುಖ್ಯಮಂತ್ರಿಯಾಗಿ ಆಯ್ಕೆ!

2019ರ ಜುಲೈ 26ರಂದು ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ 2021ರ ಜುಲೈ 26ರಂದು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಒಟ್ಟು 4 ಬಾರಿ ಯಡಿಯೂರಪ್ಪ ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ಕರ್ನಾಟಕ ರಾಜಕೀಯ ರಂಗದಲ್ಲಿ ಬಿಜೆಪಿ ಮುನ್ನೆಲೆಗೆ ಬರಲು ಬಿ.ಎಸ್. ಯಡಿಯೂರಪ್ಪನವರ ಪಾತ್ರ ಅತಿ ಮಹತ್ವದ್ದಾಗಿದೆ. ಬಿ. ಎಸ್. ಯಡಿಯೂರಪ್ಪ 2014ರ ಲೋಕಸಭೆ ಚುನಾವಣೆಯಲ್ಲಿ ಶಿವಮೊಗ್ಗ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದರು. 3 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲವು ಸಾಧಿಸಿದರು. ಯಡಿಯೂರಪ್ಪ 4 ಬಾರಿ ರಾಜ್ಯದ ಮುಖ್ಯಮಂತ್ರಿಯಾದರೂ 5 ವರ್ಷದ ಪೂರ್ಣಾವಧಿ ಪೂರ್ಣಗೊಳಿಸಲಿಲ್ಲ.

15ನೇ ವಿಧಾನಸಭೆಯ ಕೊನೆಯ ಅಧಿವೇಶನದಲ್ಲಿ ಬಿಎಸ್ ವೈ ಭಾವುಕ ಭಾಷಣ…!

- Advertisement -

Latest Posts

Don't Miss