Friday, December 13, 2024

Latest Posts

ಯಲಹಂಕದಲ್ಲಿ ಜೆಡಿಎಸ್ ಅಭ್ಯರ್ಥಿ “ಎಂ ಮುನಿಗೌಡ” ಪ್ರಚಾರ ಶುರು

- Advertisement -

ಯಲಹಂಕದಲ್ಲಿ ಜೆಡಿಎಸ್ ನಿಂದ ಪ್ರಚಾರ ಶುರು

ರಾಜ್ಯ ರಾಜಕೀಯದಲ್ಲಿ ಚುನಾವಣಾ ಪ್ರಚಾರದ ರಂಗು ದಿನದಿಂದ ದಿನಕ್ಕೂ  ಭರ್ಜರಿಯಾಗಿ  ಸಾಗುತ್ತಿದೆ.ಇನ್ನೇನು ಕೆಲವೇ ದಿನಗಳಲ್ಲಿ ಚುನಾವಣೆ ನಡೆಯಲಿದ್ದೂ ಈಗಾಗಲೆ ಜೆಡಿಎಸ್ ನಲ್ಲಿ ಆಕಾಂಕ್ಷಿಗಳೆಗೆ ಟಿಕೇಟ್ ಘೋಷಣೆ ಮಾಡಿ ಅಭ್ಯರ್ಥಿಗಳ ಹೆಸರನ್ನು  ಬಹಿರಂಗ ಪಡಿಸಿದ್ದಾರೆ.  ಇನ್ನು  ಬೆಂಗಳೂರಿನ ಪ್ರಮುಖ ಕ್ಷೇತ್ರವಾದ ಯಲಹಂಕದಲ್ಲಿಯೂ ಸಹ ಜೆಡಿಎಸ್ ಪಕ್ಷ ಅಭ್ಯರ್ಥಿಯನ್ನು ಘೋಷಿಸಿದೆ .ಅಭ್ಯರ್ಥಿ ಹೆಸರನ್ನು ಬಹಿರಂಗ ಪಡಿಸಿದ್ದೇ ತಡ ಪಕ್ಷದ ಪರವಾಗಿ ಪ್ರಚಾರ ಜೋರಾಗಿದೆ . ಎರಡು ತಿಂಗಳಲ್ಲಿ ಕರ್ನಾಟಕದಲ್ಲಿ ವಿದಾನಸಭಾ ಚುನಾವಣೆ ನಡೆಯಲಿದೆ .ಆದರೂ ಈವರೆಗೂ ರಾಷ್ಟ್ರಿಯ ಪಕ್ಷವಾದ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷ  ಯಾವುದೆ ಕ್ಷೇತ್ರದಲ್ಲಿ ಅಭ್ಯರ್ಥಿಯನ್ನು ಘೋಷಣೆ ಮಾಡಿಲ್ಲ. ಎಲ್ಲಾ ಪಕ್ಷದಲ್ಲಿಯೂ  ಹಲವಾರು ಆಕಾಂಕ್ಷಿಗಳು ಟಿಕೇಟ್ಗಾಗಿ ಕಾಯುತಿದ್ದರೂ ಇನ್ನು ಟಿಕೆಟ್ ಘೋಷಣೆ ಮಾಡದೆ ಮೀನಾಮೇಶ ಎಣಿಸುತ್ತಿವೆ. ಆದರೆ  ಪ್ರಾದೇಶಿಕ ಪಕ್ಷವಾದ  ಜನತಾದಳ ಕಳೆದ ೆರಡು ದಿನಗಳ ಹಿಂದೆಯೆ ಇಡಿ ರಾಜ್ಯದ್ಯಂತ ಟಿಕೆಟ್ ಘೋಷಿಸಿ  ಅಭ್ತರ್ಥಿಗಳ ಹೆಸರನ್ನು ಬಹಿರಂಗ ಪಡಿಸಿದೆ ಬಹಿರಂಗವಾಗಿರುವ ಬೆನ್ನಲ್ಲೆ ಬೆಂಗಳೂರಿನ ಯಲಹಂಕ ಕ್ಷೇತ್ರದಲ್ಲಿ ಜನತಾದಳ  ಪಕ್ಷದಿಂದ ಟಿಕೆಟ್ ಗಳಿಸಿಕೊಂಡಿರುವ ಅಚ್ಚುಮೆಚ್ಚಿನ ಜನನಾಯಕ, ಮಣ್ಣಿನ ಮಗ  ಎಂ ಮುನಿಗೌಡ  ಪ್ರಚಾರವನ್ನು ಕೈಗೊಳ್ಳಲು ಅಣಿಗೊಳಿಸಿಕೊಳ್ಳುತಿದ್ದಾರೆ.

ಹಾಗಾಗಿ ಇಂದು ಪ್ರಚಾರದ ಪ್ರಥಮ ದಿನವಾಗಿದ್ದರಿಂದ  ರಾಜನಕುಂಟೆಯ  ಆದಗಾನಹಳ್ಳಿಯಲ್ಲಿರುವ ಕಭಾಳಮ್ಮ ದೇವಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವ  ಆರತಿ ಮಾಡಿಸುವುದರ ಮೂಲಕ ಮನೆ ಮನೆ ಭೇಟಿ ಪ್ರಚಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ವೇಳೆ  ಜಡಿಎಸ್ ನಿಂದ ಅಭ್ಯರ್ಥಿಯಾಗಿ ಘೋಷಣೆಯಾಗಿರುವ  ಎಂ ಮುನಿಗೌಡ ದಂಪತಿ ಆಗಮಿಸುತಿದ್ದಂತೆ ಹಲಗೆ  ವಾದ್ಯ ಮೇಳದವರು ಬ್ಯಾಂಡ್ ಭಾರಿಸುವ  ಮೂಲಕ  ಅಬ್ಯರ್ಥಿಗಳನ್ನು ದೇವಸ್ಥಾನಕ್ಕೆ ಕರೆತಂದರು ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು .ನಂತರ ಅರ್ಚಕರು ದೇವಿಗೆ ಆರತಿ ಬೆಳಗಿ ಮಂಗಳಾರತಿ ಮಾಡಿದರು ನಂತರ ದೇವಿಗೆ ಪಾದಕ್ಕೆ ಹಾಋವನ್ನು ಸಮರ್ಪಿಸಿ  ಎಂ ಮುನಿಗೌಡ ಮತ್ತು ಅವರ ಪತ್ನಿಗೆ ಹಾರ ಹಾಕಿ ಆಶಿರ್ವಾದ ಮಾಡಿದರು ಈ ವೇಳೆ  ವಿಧಾನಪರಿಷತ್ ಸದಸ್ಯರಾದ ಶರವಣ ಜೊತೆಗೂಡಿದರು. ಹಾಗೂ ಇನ್ನು ಕೆಲವು ಜೆಡಿಎಸ್ ನಾಯಕರು   ಜನರ ಮನೆಗಳಿಗೆ ತೆರಳಿದರು ತೆರಳುವ ದಾರಿ ಮದ್ಯದಲ್ಲಿ  ಕ್ಷೇತ್ರದ ಜನ  ”ಎಂ ಮುನಿಗೌಡರಿಗೆ”   ಬೃಹದಾಕಾರವಾದ ಹಾರ ಹಾಕಿ ಸನ್ಮಾನಿಸಿದರು. ನಂತರ ವಿಧಾನಪರಿಷತ್ ಸದಸ್ಯರಾಗಿರುವ ಶರವಣರವರು ಮಾತನಾಡಿ ಆಡಳಿತ ಸರ್ಕಾರದ  ಬ್ರಷ್ಟಾಚಾರದ ಬಗ್ಗೆ ವಿರೋಧ ವ್ಯಕ್ತಪಡಿಸಿದರು. ಹಾಗೂ ಜನರನ್ನು ಉದ್ದೇಶಿಸಿ ಮಾತನಾಡಿದ ಶರವಣ ಕಳೆದ ಮೂರು ಬಾರಿ ಬಿಜೆಪಿಗೆ ಮತ ಹಾಕಿ ಗೆಲ್ಲಿಸಿದ್ದಾರೆ. ಮೂರು ಭಾರಿ ಗೆಲುವು ಸಾಧಿಸಿದ್ದರೂ ಇಲ್ಲಿಯವರೆಗೂ ಯಾವುದೇ ಅಭಿವೃದ್ದಿ ಆಗಿಲ್ಲ.ಅದಕ್ಕಾಗಿ ನಿವೆಲ್ಲ ಮನಸ್ಸು ಮಾಡಿ ಇ ಬಾರಿ ಜೆಡಿಎಸ್  ಪಕ್ಷಕ್ಕೆ ಮತ ನೀಡಿ ಮುನಿಗೌಡರನ್ನು ಹಾರಿಸಿ ತರಬೇಕೆಂದು ಮತದಾರರಲ್ಲಿ ವಿನಂತಿ ಮಾಡಿದರು.

ನಂತರ ಪ್ರಚಾರದ ಪ್ರಥಮ ದಿನವಾದ ಇಂದು  ಕ್ಷೇತ್ರದ ಕೆಲವು ಮನೆಗಳಿಗೆ ಭೆಟಿ ನೀಡಿ  ಕರಪತ್ರವನ್ನು ನೀಡಿ ಜೆಡಿಎಸ್ ಹೊರಡಿಸಿರುವ ಪಂಚರತ್ನಗಳ ಬಗ್ಗೆ ಜನರಿಗೆ  ತಿಳಿಸಿ ಕೈ ಮುಗಿಯುವ ಮೂಖಾಂತರ  ಮತಯಾಚಿಸಿದರು.ರಾಜ್ಯ ಚುನಾವಣೆಗೆ ಇನ್ನ ಕೆಲವೆ ದಿನಗಳು ಬಾಕಿ ಉಳಿದಿದ್ದು ಇಗಾಗಲೆ ರಾಜ್ಯದ ಪ್ರತಿ ಕ್ಷೇತ್ರದಲ್ಲಿ ಯಾ ಜೆಡಿಎಸ್ ನಿಂದ ಟಿಕೆಟ್ ಪಡೆದ ಅಭ್ಯರ್ಥಿಗಳು ಪ್ರಚಾರಕ್ಕೆ ಸಿದ್ದತೆ ಮಾಡಿಕೊಳ್ಳುತಿದ್ದಾರೆ, ಆದರೆ ಇನ್ನ ುಳಿದ ಪಕ್ಷಗಳು ಯಾವುದೇ  ರೀತಿಯಾಗಿ  ಟಿಕೆಟ್ ಟಿಕೆಟ್ ಆಕಾಂಕ್ಷಿಗಳಿಗೆ  ಟಿಕೆಟ್ ಘೋಷಣೆ ಮಾಡದೆ ಮುಂದೂಡುತಿದ್ದಾರೆ. ಉಂಇದ ಪಕ್ಷಗಳು ಇನ್ನ ಸ್ವಲ್ಪ ದಿನಗಳಲ್ಲಿ ಟಿಕೆಟ್ ಘೋಷಣೆ ಮ಻ಡುವ ಕುರಿತು ಚರ್ಚೆ ಮಾಡುತಿದ್ದಾರೆ .  ಟಿಕೆಟ್ ಘೋಷಣೆ ನಂತರ ಎಲ್ಲಾ ಪಕ್ಷಗಳು ಅಭ್ಯರ್ಥಿಗಳು ಚುನಾವಣ ಪ್ರಚಾರದಲ್ಲಿ  ಯಾವ ರೀತಿ ಜನರಿಗ್ಎ ಮೋಡಿ ಮಾಡಲಿದ್ದಾರೆ. ಮತದಾರ ದೇವರುಗಳು ಇ ಬಾರ ಿಯಾವ ಪಕ್ಷಕ್ಕೆ ಆಶಿರ್ವವಾದ ಮಾಡಲಿದ್ದಾರೆ. ಯಾವ ಪಕ್ಷ ಗೆದ್ದು ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂಬುದನ್ನು ಮುಂದಿನ ದಿನಗಳಲ್ಲಿ ಕಾದು ನೋಡಬೇಕಿದೆ.

ದೇವರ ರೂಪದ ಪುನಿತ್ ಅವರ ಹೆಸರಲ್ಲಿ ಅಭಿಮಾನಿಗಳಿಂದ ಮಾಲಧಾರಣೆ

ಈ 7 ಕೆಲಸಗಳು ನಿಮ್ಮ ಗೌರವಕ್ಕೆ ಧಕ್ಕೆ ತರುತ್ತದೆ.. ಭಾಗ 2

ಜಾವೆದ್ ಅಖ್ತರ್ ರನ್ನು ಹೊಗಳಿದ ಕಂಗನಾ ರಣಾವತ್

- Advertisement -

Latest Posts

Don't Miss