ಡೊಳ್ಳು ಹೊಟ್ಟೆ ನೋಡಿ ನಕ್ಕ ಚಂದ್ರನಿಗೆ ಗಣೇಶನಿಂದ ಶಾಪ

moral story

ಒಮ್ಮೆ ಗಣೇಶ ಇಲಿಯ ಮೇಲೆ ಸಂಚಾರ ಮಾಡುತ್ತಾ ಚಂದ್ರಲೋಕ್ಕ ಬರುತ್ತಾನೆ. ಚಂದ್ರನೋ ಸರ್ವಾಂಗ ಸುಂದರ. ಅವನಿಗೆ ತನ್ನ ಸೌಂದರ್ಯದ ಮೇಲೆ ಅಪಾರ ಮಮತೆ, ಒಮ್ಮೆ ಗಣೇಶ ಅದೇ ಮಾರ್ಗವಾಗಿ ಇಲಿಯ ಮೇಲೆ ಬರುತ್ತಿರುವಾಗ ಕೆಳಗೆಬಿದ್ದು ಬಿಡುತ್ತಾನೆ ಬಿದ್ದಿದ್ದರ ಪರಿಣಾಮ ಅವನ ಡೊಳ್ಳು ಹೊಟ್ಟೆ ಒಡೆದುಹೋಗುತ್ತದೆ.ಇದನ್ನು ನೋಡಿದ ಚಂದ್ರ ಗಣಪನನ್ನು ಕಂಡು ಅಪಹಾಸ್ಯ ಮಾಡುತ್ತಾನೆ. ಜೋರಾಗಿ ನಗುತ್ತಾನೆ. ಗಣಪನಿಗೆ ಚಂದ್ರನ ನಗುವಿನಿಂದಾಗಿ ಅಪಮಾನವಾಗುತ್ತದೆ.ಇದರಿಂದ ಕೋಪಗೊಂಡ  ಗಣೇಶ ಚಂದ್ರನಿಗೆ ಹೀಗೆ ಶಾಪ ನೀಡುತ್ತಾನೆ. ‘ಎಲೈ ಚಂದ್ರ ನೀನು ಸೌಂದರ್ಯ ಮದದಿಂದ ಬೀಗುತ್ತಿದ್ದೀಯಾ. ಮೂರ್ಖ! ಅದಕ್ಕೆ ತಕ್ಕ ಫಲವನ್ನು ಅನುಭವಿಸು. ನಿನ್ನೆಲ್ಲಾಗರ್ವ, ಅಜ್ಞಾನಕ್ಕೆ ಕಾರಣವಾದ ಸೌ೦ದರ್ಯ ಕುಂದಿ ಹೋಗಲಿ, ಭಾದ್ರಪದ ಶುದ್ಧ ಚೌತಿಯಂದು ನಿನ್ನನ್ನು ನೋಡುವವರು ಅಪವಾದಕ್ಕೆ ಗುರಿಯಾಗಲಿ!’ ಎಂದು ಶಪಿಸುತ್ತಾನೆ. ಶಾಪಗ್ರಸ್ತನಾದ ಕೂಡಲೇ ಚಂದ್ರನ ಅಹಂಕಾರ ಇಳಿದು ಹೋಗುತ್ತದೆ. ಅವನಿಗೆ ತನ್ನ ತಪ್ಪಿನ ಅರಿವಾಗುತ್ತದೆ. ಗಣೇಶನ ಮುಂದೆ ಭಯ-ಭಕ್ತಿಗಳಿಂದ ಕೈಮುಗಿದು ನಿಂತು, ‘ಸ್ವಾಮಿ, ನನ್ನ ಅಜ್ಞಾನವನ್ನು ಕ್ಷಮಿಸಿಬಿಡು ನನಗೆ ಕೊಟ್ಟರಾಪವನ್ನು ಹಿಂತೆಗೆದುಕೊಂಡು ಉದ್ಧರಿಸು’ ಎಂದು ಬೇಡಿಕೊಳ್ಳುತ್ತಾನೆ.

ಗಣೇಶ ಚಂದ್ರನನ್ನು ಕ್ಷಮಿಸುತ್ತಾನೆ. ‘ಚೌತಿಯ ದಿನ ನಿನ್ನನ್ನು ನೋಡಿ ಮಿಥ್ಯಾಪವಾದಕ್ಕೆ ಗುರಿಯಾದವರು ಶುದ್ಧ ಬಿದಿಗೆಯ ದಿನ ನಿನ್ನ ದರ್ಶನ ಮಾಡಿದರೆ ಅಥವಾ ಸಮಂತಕ ಮಣಿಯ ಕಥೆಯನ್ನು ಕೇಳಿದರೆ ಅಂಥವರು ಅಪವಾದದಿ ಮುಕ್ತರಾಗಲಿ’ ಎಂದು ಹೇಳುತ್ತಾನೆ.

ದೇಹದಲ್ಲಿ ಕರೆಂಟ್ ಪಾಸ್ ಅನುಭವ ನಿಮಗಾಗಿದ್ಯಾ…?

ಹೆಚ್ಚಾದ ಬೀದಿ ನಾಯಿ ಹಾವಳಿ-ನಗರಸಭೆಯಲ್ಲಿ ಅಧಿಕಾರಿಗಳ ಕಚ್ಚಾಟ

ಬೆಂಗಳೂರು: ಹೆಚ್ ಡಿ ದೇವೇಗೌಡ ಆಸ್ಪತ್ರೆಗೆ ದಾಖಲು…!

 

About The Author