Chanakya Neeti: ಸಂಬಂಧ ಬೆಳೆಸುವ ಮುನ್ನ ಈ 3 ವಿಷಯಗಳನ್ನು ನೆನಪಿರಿಸಿ

Chanakya Neeti: ಚಾಣಕ್ಯರು ನಮಗೆ ಹಲವು ವಿಷಯಗಳ ಬಗ್ಗೆ ತಮ್ಮ ಚಾಣಕ್ಯ ನೀತಿಯಲ್ಲಿ ವಿವರಿಸಿದ್ದಾರೆ. ಜೀವನ, ಸಂಬಂಧ, ವಿವಾಹ, ಆರ್ಥಿಕತೆ, ಹಣ ಸಂಪಾದನೆ, ಸ್ನೇಹ ಹೀಗೆ ಜೀವನಕ್ಕೆ ಸಂಬಂಧಿಸಿದ ಎಲ್ಲಾ ವಿಷಯಗಳ ಬಗ್ಗೆ ಹೇಳಿದ್ದಾರೆ. ಅದೇ ರೀತಿ ಸಂಬಂಧ ಬೆಳೆಸುವಾಗ ನಾವು ಏನನ್ನು ಗಮನಿಸಬೇಕು ಎಂದು ತಿಳಿಸಿದ್ದಾರೆ. ಆ ಬಗ್ಗೆ ತಿಳಿಯೋಣ ಬನ್ನಿ.

ಸಹಾಯದ ಮನೋಭಾವ: ಸಂಬಂಧ ಬೆಳೆಸುವ ವ್ಯಕ್ತಿಗೆ ಸಹಾಯದ ಮನೋಭಾವ ಇದೆಯಾ ಇಲ್ಲವಾ ಅನ್ನುವುದನ್ನು ನೀವು ಗಮನಿಸಬೇಕು. ಕೆಲವರು ಮೆಚ್ಚಿಸುವುದಕ್ಕಾಗಿ ಸಹಾಯ ಮಾಡುವ ನಾಟಕವೂ ಮಾಡಬಹದು. ಹಾಗಾಗಿ ಅದು ನಾಟಕವೋ, ಸತ್ಯವೋ ಎಂದು ತಿಳಿಯುವುದು ನಿಮ್ಮ ಜವಾಬ್ದಾರಿ.

ಉತ್ತಮ ನಡುವಳಿಕೆ: ಮನುಷ್ಯನ ಉತ್ತಮ ನಡುವಳಿಕೆ ಗಮನಿಸುವುದು ತುಂಬಾ ಮುಖ್ಯ. ಆ ನಡುವಳಿಕೆಯೇ ನಿಮ್ಮ ಭವಿಷ್ಯವನ್ನು ಸೂಚಿಸುತ್ತದೆ. ಹಾಗಾಗ ಅವರು ಯಾರ ಜತೆ ಯಾವ ರೀತಿ ಇರುತ್ತಾರೆ ಅನ್ನೋದನ್ನ ಗಮನಿಸುವುದು ತುಂಬಾ ಮುಖ್ಯ.

ಮಾತನಾಡುವ ರೀತಿ: ನೀವು ಯಾವ ಜತೆ ಸಂಬಂಧ ಬೆಳೆಸಲು ಹೋಗುತ್ತಿದ್ದೀರೋ, ಆ ವ್ಯಕ್ತಿ ಯಾವ ರೀತಿ ಮಾತನಾಡುತ್ತಾರೆ ಅಂತಾ ಗಮನಿಸುವುದು ತುಂಬಾ ಮುಖ್ಯ. ಅವರು ಆಡುವ ಮಾತು ಹೇಗಿದೆ..? ಬೇರೆಯವರ ಬಗ್ಗೆ ಯಾವ ರೀತಿ ಮಾತನಾಡುತ್ತಾರೆ..? ಚಾಡಿ ಹೇಳುವ ಗುಣವಿದೆಯಾ..? ಯಾರನ್ನಾದರೂ ಹೀಯಾಳಿಸುವ ಗುಣವಿದೆಯಾ ಹೀಗೆ ಇದೆಲ್ಲವನ್ನೂ ಗಮನಿಸಬೇಕಾಗುತ್ತದೆ ಅಂತಾರೆ ಚಾಣಕ್ಯರು.

About The Author