Chanakya Neeti: ಮನುಷ್ಯ ಕೆಲವು ಬಾರಿ ಉದಾಸೀನತೆಯಿಂದ ಮಾಡುವ ಕೆಲಸವನ್ನು ಮುಂದೂಡುತ್ತಿರುತ್ತಾನೆ. ಬಳಿಕ ಸಮಯ ಮೀರಿ ಹೋಗಿ ಪಶ್ಚಾತಾಪ ಪಡುತ್ತಾನೆ. ಹಾಗಾಗಿಯೇ ಚಾಣಕ್ಯರು ಕೆಲವು ಕೆಲಸಗಳನ್ನು ಸರಿಯಾದ ಸಮಯಕ್ಕೆ ಮಾಡಬೇಕು ಎನ್ನುತ್ತಾರೆ. ಹಾಗಾದ್ರೆ ಆ ಕೆಲಸಗಳು ಯಾವುದು ಅಂತಾ ತಿಳಿಯೋಣ ಬನ್ನಿ.
ಮದುವೆ: ಮಕ್ಕಳ ಮದುವೆ ಅದರಲ್ಲೂ ಕನ್ಯಾದಾನವನ್ನು ಸರಿಯಾದ ಸಮಯಕ್ಕೆ ಮಾಡಬೇಕು ಅಂತಾರೆ ಚಾಣಕ್ಯರು. ಕನ್ಯಾದಾನಕ್ಕೆ ಎಷ್ಟು ಮಹತ್ವವಿದೆ ಎಂದು ಎಲ್ಲರಿಗೂ ತಿಳಿದಿದೆ. ಅದು 1 ಪುಣ್ಯಕಾರ್ಯ. ಹಾಗಾಗಿ ಜೀವನದಲ್ಲಿ 1 ಬಾರಿಯಾದರೂ ಕನ್ಯಾದಾನ ಮಾಡಬೇಕು. ಅದು ಸರಿಯಾದ ಸಮಯಕ್ಕಾಗಬೇಕು ಎಂದಿದ್ದಾರೆ ಚಾಣಕ್ಯರು.
ನಿರ್ಧಾರ ತೆಗೆದುಕ“ಳ್ಳುವ ಅರ್ಹತೆ: ಮನೆಯ ಯಜಮಾನ, ರಾಜ ಅಥವಾ ಯಾವುದೇ ಹಿರಿಯನಾಗಲಿ, ಪದೇ ಪದೇ ನಿರ್ಧಾರವನ್ನು ಬದಲಿಸಬಾರದು. ಅಂಥ ರಾಜನಿಗೆ, ಯಜಮಾನನಿಗೆ ಎಂದಿಗೂ ಗೌರವ ಸಿಗುವುದಿಲ್ಲ. ಸರಿಯಾದ ಸಮಯಕ್ಕೆ ಸರಿಯಾದ ನಿರ್ಧಾರ ತೆಗೆದುಕ“ಳ್ಳುವುದು ಕೂಡ ಮುಖ್ಯ ಅಂತಾರೆ ಚಾಣಕ್ಯರು.
ಸಹಾಯ: ನೀವು ಯಾರಿಗಾದರೂ ಏನಾದರೂ ಮಾತು ನೀಡಿದ್ದರೆ, ಅಥವಾ ಸಹಾಯ ಮಾಡುತ್ತೇನೆ ಎಂದು ಹೇಳಿದ್ದರೆ ಅದನ್ನು ಸಮಯಕ್ಕೆ ಸರಿಯಾಗಿ ಮಾಡಿ. ಸಮಯ ಮೀರಿದ ಬಳಿಕ ಮಾಡಿದ ಸಹಾಯಕ್ಕೆ ಎಂದಿಗೂ ಬೆಲೆ ಇರುವುದಿಲ್ಲ. ಅದು ಉಪಯೋಗವೂ ಆಗುವುದಿಲ್ಲ. ಹಾಗಾಗಿ ಸಮಯಕ್ಕೆ ಸರಿಯಾಗಿ ಸಹಾಯ ಮಾಡಿ ಅಂತಾರೆ ಚಾಣಕ್ಯರು.
ಬುದ್ಧಿ ಹೇಳಿ ತಿದ್ದುವ ಕೆಲಸ: ನಮ್ಮ ಮಕ್ಕಳು ಏನಾದರೂ ತಪ್ಪು ಮಾಡಿದರೆ, ಅವರಿಗೆ ನಾವು ಸರಿಯಾದ ಸಮಯಕ್ಕೆ ಬುದ್ಧಿ ಹೇಳಿ ತಪ್ಪು ತಿದ್ದುವ ಕೆಲಸ ಮಾಡಬೇಕು. ಶಿಸ್ತು ಕಲಿಸಬೇಕು. ವಯಸ್ಸು ಮೀರಿದ ಬಳಿಕ ನೀವೇನೇ ಹೇಳಿದರೂ ಅವರು ಕೇಳುವುದಿಲ್ಲ. ಹಾಗಾಗಿ ಗಿಡ ಮರವಾಗಿ ಬೆಳೆಯುವ ಮುನ್ನ ಅದಕ್ಕೆ ಸರಿಯಾದ ಪೋಷಣೆ ನೀಡುವುದು ಅತ್ಯಗತ್ಯ.




