ಕರ್ನಾಟಕ ಟಿವಿ : ಸಿಎಂ ಆದ ಬಳಿಕ ಇದೇ ಮೊದಲ ಬಾರಿಗೆ ಯಡಿಯೂರಪ್ಪ ಬೆಂಗಳೂರು ನಗರ ಪ್ರದಕ್ಷಿಣೆ ಮಾಡಿದ್ದಾರೆ. ನಂತರ ಮಾತನಾಡಿದ ಯಡಿಯೂರಪ್ಪ ಸಾಧ್ಯವಾದರೆ ಇನ್ನು 15 ದಿನಕ್ಕೊಮ್ಮೆ ಬೆಂಗಳೂರು ನಗರ ಪರಿವೀಕ್ಷಣೆ ಮಾಡೋದಾಗಿ ಸಿಎಂ ಹೇಳಿದ್ರು. ನಾನು ಇಂದು ಸಾರ್ವಜನಿಕ ಅಭಿಪ್ರಾಯ ಕೇಳುವ ಪ್ರಯತ್ನ ಮಾಡಿದ್ದೇನೆ. ಸಾರ್ವಜನಿಕರಿಗೆ ತೊಂದರೆಯಾಗಬಾರದು ಅಂತ ಭಾನುವಾರ ನಗರ ವೀಕ್ಷಣೆ ಮಾಡಿದ್ದೇನೆ ಅಂತ ಸಿಎಂ ಹೇಳಿದ್ರು.
2020 ವೇಳೆಗೆ ಎಲೆಕ್ಟ್ರಾನಿಕ್ ಸಿಟಿಗೆ ಮೆಟ್ರೋ ಕಾಮಗಾರಿ ಪೂರ್ಣ
ಇನ್ನು ಬನ್ನೇರುಘಟ್ಟ ಮೇಟ್ರೋ ಮೇಲ್ಸೇತುವ ಪರಿಶೀಲನೆ ಮಾಡಿದ್ದೇನೆ. 2020ರ ವೇಳೆಗೆ ಎಲೆಕ್ಟ್ರಾನಿಕ್ ಸಿಟಿಗೆ ಮೆಟ್ರೋ ಕಾಮಗಾರಿ ಪೂರ್ಣ ಗೊಳಿಸುವ ಗುರಿ ಹೊಂದಲಾಗಿದೆ. ಹೀಗಾಗಿ ಕಾಮಗಾರಿ ವೇಗ ಹೆಚ್ಚಿಸುವಂತೆ ತಾಕೀತು ಮಾಡಿದ್ದೇನೆ ಅಂತ ಸಿಎಂ ಹೇಳಿದ್ರು.
ಟ್ರಾಫಿಕ್ ಜಾಮ್ ಗೆ ಪರ್ಮನೆಂಟ್ ಪರಿಹಾರ
ಇನ್ನು ನಗರದ ಟ್ರಾಫಿಕ್ ಸಮಸ್ಯೆ ಪರಿಹಾರ ಕಂಡುಕೊಳ್ಳುವುದಾಗಿ ಹೇಳಿದ ಸಿಎಂ ಹೆಬ್ಬಳ ಮೇಲ್ಸೇತುವೆಗೆ 5 ಲೇನ್ ಅಳವಡಿಕೆ ಕುರಿತಂತೆ ವರದಿ ಪಡೆದು ಕ್ರಮಕೈಗೊಳ್ಳುವುದಾಗಿ ತಿಳಿಸಿದ್ರು. ಕೆ.ಆರ್ ಪುರಂ, ಸಿಲ್ಕ್ ಬೋರ್ಡ್ ಟ್ರಾಫಿಕ್ ಜಾಮ್ ನಿಂದ ಕಂಪನಿಗಳೀಗೆ ಲಾಸ್ ಆಗ್ತಿದೆ ಹೀಗಾಗಿ ಆದಷ್ಟು ಬೇಗ ಕಾಮಗಾರಿ ಮುಗಿಸುವಂತೆ ಸೂಚನೆ ನೀಡಿರುವುದಾಗಿ ಸಿಎಂ ಹೇಳಿದ್ರು.
ಸಿಎಂ ಜೊತೆ ಡಿಸಿಎಂ ಅಶ್ವಥ್ ನಾರಾಯಣ್, ಆರ್ ಅಶೊಕ್ ಭಾಗಿ
ಇನ್ನು ಸಿಎಂ ಜೊತೆ ಡಿಸಿಎಂ ಬಂದ್ರೆ ಆರ್. ಅಶೋಕ್ ಬರೋದು ಡೌಟ್ ಅಂತ ಹೇಳಲಾಗ್ತಿತ್ತು.. ಆದ್ರೆ ಮುನಿಸು ಮರೆತ ಅಶೋಕ್ ಸಿಎಂ ಸಿಟಿ ರೌಂಡ್ಸ್ ನಲ್ಲಿ ಭಾಗಿಯಾದ್ರು.