Saturday, October 5, 2024

Latest Posts

ಡಿಕೆಶಿ ಬಂಧನದಿಂದ ಇಡೀ ಕರ್ನಾಟಕಕ್ಕೆ ಸಂತೋಷ – ರವಿಬೆಳಗೆರೆ

- Advertisement -

ಕರ್ನಾಟಕ ಟಿವಿ : ಡಿಕೆಶಿ ಜೈಲಿಗೆ ಹೋದ ನಂತರ  ಒಂದಷ್ಟು ಜನ ಬೇಜಾರಾಗಿದ್ರೆ, ಮತ್ತಷ್ಟು ಜನ ಒಳಗೊಳಗೆ ಖುಷಿ ಪಡ್ತಿದ್ದಾರೆ.. ಇನ್ನು ಕೆಲವರು ಬಹಿರಂಗವಾಗಿ ಉಪ್ಪುತಿಂದವರು ನೀರು ಕುಡಿಲೇ ಬೇಕು, ಡಿಕೆಶಿ ಇಷ್ಟೆಲ್ಲಾ ಹೇಗೆ ಸಂಪಾದನೆ ಮಾಡಿದ್ರು.. ಡಿಕೆಶಿ ಕಣ್ಣೀರು ಹಾಕಿದ್ದು ಸಿಂಪತಿಗಾಗಿ. ಹೀಗೆ ಡಿಕೆ ಶಿವಕುಮಾರ್ ಅವರನ್ನ ತರಾವರಿ ತರಾಟೆಗೆ ತೆಗೆದುಕೊಳ್ತಿದ್ದಾರೆ.. ಈಗ ಈ ಸಾಲಿಗೆ ಪತ್ರಕರ್ತ ರವಿ ಬೆಳಗೆರೆ ಸೇರಿದ್ದಾರೆ.. ಡಿಕೆ ಶಿವಕುಮಾರ್ ಹಳೇ ಇತಿಹಾಸವನ್ನ ಒಂದೊಂದಾಗಿಯೇ ರವಿ ಬೆಳಗೆರೆ ಬಿಚ್ಚಿಟ್ಟಿದ್ದಾರೆ..

ಅಂದು ರವಿಬೆಳಗೆರೆ ಜೈಲಿಗೆ ಹಾಕಲು ಡಿಕೆಶಿ ಆದೇಶ ಆದೇಶ ಮಾಡಿದ್ರಂತೆ..!

ಹಲವು ವರ್ಷಗಳ ಹಿಂದೆ ಪತ್ರಕರ್ತ ರವಿಬೆಳಗೆರೆ ಮೇಲೆ ಹರಪನಹಳ್ಳಿಯಲ್ಲಿ ಡಕಾಯಿತರು ದಾಳಿ ಮಾಡ್ತಾರೆ.. ಈ ವೇಳೆ ಓರ್ವ ಡಕಾಯಿತನಿಗೆ ರವಿಬೆಳಗೆರೆ ತನ್ನ ಬಳಿ ಇದ್ದ ರಿವಾಲ್ವರ್ ನಿಂದ ಶೂಟ್ ಮಾಡ್ತಾರೆ… ನಂತರ, ರವಿ ಬೆಳಗೆರೆ ಡಕಾಯಿತರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಕಂಪ್ಲೇಂಟ್ ಬರೆಯುವಾಗ ಮಿನಿಸ್ಟರ್ ಕಾಲ್ ಮಾಡ್ತಾರೆ. ಎಸ್ಪಿ ಸುನೀಲ್ ಅಗರ್ವಾಲ್ ಗೆ ರವಿಬೆಳಗೆರೆ ಸ್ಟೇಷನ್ ನಲ್ಲಿ ಇದ್ದಾಗಲೇ ಕರೆ ಮಾಡಿ ರವಿ ಬೆಳೆಗೆರೆ ಮೇಲೆ ಕೇಸ್ ಹಾಕಲು ಡಿಕೆಶಿ ಸೂಚನೆ ಕೊಡ್ತಾರೆ. ಆದ್ರೆ, ಎಸ್ಪಿ ಸರ್ ಆಗೋದಿಲ್ಲ, ರವಿಬೆಳಗೆರೆಯೇ ದೂರುದಾರರು ಹೀಗಾಗಿ ಕೇಸ್ ಹಾಕಲುಸಾಧ್ಯವಿಲ್ಲ ಅಂತ ಹೇಳ್ತಾರೆ.. ಆದ್ರೆ, ನನಗೆ ಅವೆಲ್ಲಾ ಗೊತ್ತಿಲ್ಲ ರವಿಬೆಳಗೆರೆ ಮೇಲೆ ಕೇಸ್ ಹಾಕಿ ಜೈಲಿಗೆ ಹಾಕಿ ಅಂತ ಡಿಕೆ ಶಿವಕುಮಾರ್ ಎಸ್ಪಿಗೆ ಆದೇಶ ಮಾಡ್ತಾರೆ.. ನಂತರ ಡಿಕೆಶಿ ಸೂಚನೆಯಂತೆ ಉಲ್ಟಾ ಕೇಸ್ ಆದರೂ ಕೋರ್ಟ್ ಮಾತ್ರ ಡಕಾಯಿತರಿಗೆ 8 ವರ್ಷ ಶಿಕ್ಷೆಯನ್ನ ವಿಧಿಸಿಸುತ್ತೆ. ಹೀಗಂತ ಸ್ವತಃ ರವಿ ಬೆಳೆಗೆರೆ ಹಿಂದೆ ಆಗಿದ್ದನ್ನ ಬಹಿರಂಗ ಪಡಿಸಿದ್ದಾರೆ..  

ಬಹಳಷ್ಟು ಜನರಿಗೆ ತಂದೆ ಎಡೆ ಇಡದಂತೆ ಡಿಕೆಶಿ ಮಾಡಿದ್ದಾರೆ..!

ಇನ್ನೂ ಇಡಿ ಕಚೇರಿ ಮುಂದೆ ಡಿಕೆಶಿ ಕಣ್ಣೀರು ಹಾಕಿದ ಬಗ್ಗೆ ರವಿ ಬೆಳಗೆರೆ ಲೇವಡಿ ಮಾಡಿದ್ದಾರೆ.. ಈ ಡಿಕೆ ಶಿವಕುಮಾರ್ ಎಷ್ಟೋ ಜನರಿಗೆ ಅವರ ತಂದೆಯ ಎಡೆ ಇಡದಂತೆ ಮಾಡಿದ್ದಾರೆ.. ಈಗ ಸುಮ್ಮನೆ ಕಣ್ಣಿರು ಹಾಕಿ ಡ್ರಾಮಾ ಮಾಡ್ತಿದ್ದಾರೆ ಅಂತ ಲೇವಡಿ ಮಾಡಿದ್ದಾರೆ. ಹಾಗೆಯೇ ಡಿಕೆಶಿ ಮಾಡಿದ್ದನ್ನ ಅನುಭವಿಸಬೇಕು ಅಂತ ಟೀಕಿಸಿದ್ದಾರೆ..

ಡಿಕೆಶಿ ಏನ್ ಮಹಾತ್ಮಾಗಾಂಧಿಯಲ್ಲ, ಭಗತ್ ಸಿಂಗ್ ಅಲ್ಲ ಜೈಲಿಗೆ ಹೋಗಲಿ..!

ನೀವೇನೂ ಮಾಡದೆ ನಿಮ್ಮನ್ನ ನ್ಯಾಯಾಲಯ ಆರೋಪಿ ಅಂತ ಕರೀತಾರಾ..? ನೀವೇನು ಮಾಡದೆ ನಿಮ್ಮ ಇಡಿ ಬಂಧಿಸಿಲ್ಲ.. ನೀವೇನೋ ಮಾಡಿದ್ದೀರಾ.. ಹೀಗಾಗಿ ಇಡಿ ಬಂಧಿಸಿದೆ.. ಅಮಿತ್ ಶಾ ರಾಜಕೀಯವನ್ನೇ ಮಾಡ್ತಿರಬಹುದು. ಆದ್ರೆ ಅಮಿತ್ ಶಾರನ್ನಇದೇ ಚಿದಂಬರಂ ಜೈಲಿಗೆ ಹಾಕಿಲ್ವಾ..? ಡಿಕೆಶಿನೂ ಜೈಲಿಗೆ ಹೋಗ್ಲಿ ಬಿಡಿ ಅಂತರವಿಬೆಳಗೆರೆ ಹೇಳಿದ್ದಾರೆ..

ಇಂಥಹವರಿಗೆ ಕಠಿಣ ಶಿಕ್ಷೆಯಾಗ್ಬೇಕು..!

ಸೇಮ್ ಜನಾರ್ದನ ರೆಡ್ಡಿ ಹೇಳ್ತಾರೆ ಅಣ್ಣಾ ಹೀಗಾಗಲೇ ಮೂರುವರೆ ವರ್ಷ ಜೈಲು ಶಿಕ್ಷೆ ಅನುಭವಿಸಿದ್ದೇನೆ. ಇನ್ನೂ ಮೂರುವರೆವರ್ಷ ಜೈಲು ಶಿಕ್ಷೆಯಾಗಿ ಹೊರಬಂದ್ರೆ ಮತ್ತೆ ಹೆಲಿಕಾಪ್ಟರ್ ನಂದೇ ಎಲ್ಲಾ ಆಸ್ತಿ ನಂದೇ ಅಂತಾರೆ.. ಭಾರತದಲ್ಲಿ ಆರ್ಥಿಕ ಅಪರಾಧಗಳಿಗೆ ಏಳೇ ವರ್ಷ ಶಿಕ್ಷೆ. ಹೀಗಾಗಿ ಇವರಿಗೆ ತಪ್ಪಿಸಿಕೊಳ್ಳಲು ಬಿಟ್ರೆ ದೇಶ ಮುಂಡಾಯ್ಸಿಬಿಡ್ತಾರೆ ಅನ್ನೋದು ಬೆಳಗೆರೆ ಮಾತು.

ಇಡಿ ಡಿಕೆಶಿಯನ್ನಸುಮ್ಮನೆ ಬಿಡಲ್ಲ..! ಇಡೀ ಭಾರತಕ್ಕೆ ಡಿಕೆಶಿ ಅನ್ಯಾಯ.!

ಡಿಕೆಶಿ ಬಳಿ ಇಡಿ ಅಧಿಕಾರಿಗಳು ಇಂಚಿಂಚು ವಿಚಾರಣೆ ಮಾಡ್ತಾರೆ.. ಡಿಕೆಶಿ ಸಂಪಾದನೆ ನಿಯತ್ತಾಗಿ ಮಾಡಿಲ್ಲ. ಡಿಕೆ ಶಿವಕುಮಾರ್ ನಾನು ಒಂದು ರೂಪಾಯಿ ಮೋಸ ಮಾಡಿಲ್ಲಅಂತಾರೆ.  ಡಿಕೆ ಶಿವಕುಮಾರ್ ನಾವ್ಯಾರು ಕಿವಿಯಲ್ಲಿ ಲಾಲ್ ಬಾಗ್ ಇಟ್ಟುಕೊಂಡು ಬಂದಿಲ್ಲ. ನೀವು ಸಾಚಾ ಅಂತ ಪ್ರೂವ್ ಮಾಡಿ ಅಂತ ಡಿಕೆಶಿಗೆ ರವಿ ಬೆಳಗೆರೆ ಸವಾಲು ಹಾಕಿದ್ದಾರೆ. ಬಿಜೆಪಿ ಸ್ನೇಹಿತರಿಗೆ ಸಂತೋಷವಾಗಿದೆ ಅಂತ ಡಿಕೆಶಿ ಹೇಳ್ತಾರೆ. ಬರೀ ಬಿಜೆಪಿ ಸ್ನೇಹಿತರಿಗೆ ಮಾತ್ರ ಅಲ್ಲ ಇಡಿ ಕರ್ನಾಟಕಕ್ಕೆ ಸಂತೋಷವಾಗಿದೆ ನಿಮ್ಮ ಅರೆಸ್ಟ್ ಮಾಡಿರೋದ್ರಿಂದ ಅಂತ ರವಿಬೆಳಗೆರೆ ವ್ಯಂಗ್ಯವಾಡಿದ್ದಾರೆ..

ತಪ್ಪು ಮಾಡ್ದೋರು ಶಿಕ್ಷೆ ಅನುಭವಿಸಲೇ ಬೇಕು..!

ತಪ್ಪು ಮಾಡ್ದೋರು ಯಾರೇ ಆದ್ರೂ ಶಿಕ್ಷೆ ಅನುಭವಿಸಬೇಕು.. ಸಾಮಾನ್ಯ ಜನ ಒಂದು ಮನೆ ಕಟ್ಬೇಕು ಅಂದ್ರೆ ಕಣ್ಣಲ್ಲಿ ನೀರು ಬರುತ್ತೆ.. ಡಿಕೆ ಶಿವಕುಮಾರ್ ಗೆ ಹೇಗೆ ಇಷ್ಟೊಂದು ಸಾಧ್ಯವಾಯ್ತು.. ಟ್ಯಾಕ್ಸ್ ಕಟ್ಬೇಕು ಅಂದ್ರೆ ಕಷ್ಟ ಆಗುತ್ತೆ. ಆದ್ರೆ ನಾವು ಟ್ಯಾಕ್ಸ್ ಕಟ್ಟಲೇ ಬೇಕು.. ನಾನು ಕರ್ನಾಟಕದಲ್ಲಿ ಅತೀ ಹೆಚ್ಚು ಟ್ಯಾಕ್ಸ್ ಪೇ ಮಾಡ್ತಿರುವ ಪತ್ರಕರ್ತಅಂತ ಡಿಕೆಶಿವಕುಮಾರ್ ಅವರನ್ನ ಲೇವಡಿ ಮಾಡಿದ್ರು..

ನಿಮ್ಮ ಪ್ರಕಾರ ಡಿಕೆಶಿ ಆಸ್ತಿ ನಿಯತ್ತಿನ ಸಂಪಾದನೆಯಾ..? ಅಥವಾ ಮೋದಿ- ಅಮಿತ್ ಶಾ ಸೇಡಿನಿಂದ ಜೈಲಿಗೆ ಹೋಗಿದ್ರಾ..? ಈ ಬಗ್ಗೆ ಕಾಮೆಂಟ್ ಮಾಡಿ.

ರವಿಬೆಳಗೆರೆ ಈ ಬಗ್ಗೆ ಮಾತನಾಡಿರುವ ವಿಡಿಯೋ ರವಿಬೆಳಗೆರೆ ಯೂಟ್ಯೂಬ್ ಚಾನಲ್ ನಲ್ಲಿ ಇದೆ.. ವೀಕ್ಷಿಸಿ.

https://www.youtube.com/watch?v=oiLrL48oa1k
- Advertisement -

Latest Posts

Don't Miss