Tuesday, December 24, 2024

Latest Posts

ನಮ್ಮ ಕ್ಷೇತ್ರದಲ್ಲಿ ಕಾಂಗ್ರೆಸ್ ಸರ್ವನಾಶ ಮಾಡಲು ಮೂವರು ಒಟ್ಟಾಗಿ ಕೆಲಸ ಮಾಡುತ್ತೇವೆ.

- Advertisement -

political news

byatarayana pura

ಬ್ಯಾಟರಾಯನಪುರ ವಿಧಾನಸಭೆ ಕ್ಷೇತ್ರದಲ್ಲಿ ಬಿಜೆಪಿಯಲ್ಲಿ ಮೂರು ಟಿಕೆಟ್ ಆಕಾಂಕ್ಷಿಗಳು ಇಷ್ಟು ದಿನ ನಾ ಮುಂದು ತಾ ಮುಂದು ಅಂತ ಜನರ ಮನವೊಲಿಸಲು ಸಾಮಾಜಿಕ ಕೆಲಸ ಮಾಡುವ ಮೂಲಕ ಜನರ ಮತವನ್ನು ತಮ್ಮತ್ತ ಸೆಳೆದುಕೊಳ್ಳುವ ತಯಾರಿಯಲ್ಲಿದ್ದರು. ಆದರೆ ಭಾರತೀಯ ಜನತಾ ಪಾರ್ಟಿ  ಪಕ್ಷದಿಂದ ಮೂರು ಅಭ್ಯರ್ಥಿಗಳು ಚುನಾವಣೆಯಲ್ಲಿ  ಕಣಕ್ಕಿಳಿಯಲು ಸಜ್ಜಾಗಿದ್ದರು. ಆದರೆ ಒಂದೇ ಕ್ಷೆತ್ರದಲ್ಲಿ ಒಂದೆ ಪಕ್ಷದಿಂದ ಮೂವರಿಗೆ ಟಿಕೆಟ್ ಕೊಡಲು ಸಾಧ್ಯವಿಲ್ಲದ ಕಾರಣ ಬ್ಯಾಟರಾಯನಪುರ ಕ್ಷೇತ್ರದ ಮೂರು ಬಿಜೆಪಿ ಟಿಕೆಟ್ ಆಕಾಂಕ್ಷಿಗಳು ಒಂದು ನಿರ್ದಾರಕ್ಕೆ ಬಂದರು . ಅದೇನೆಂದರೆ ಮೂರು ಜನ ಪಕ್ಷಕ್ಕಾಗಿ ಕೆಲಸ ಮಾಡೋಣ, ಪಕ್ಷವನ್ನು ಗೆಲ್ಲಿಸಲು ಪ್ರಚಾರ ಮಾಡೋಣ ನಮ್ಮ ಮೂವರಲ್ಲಿ ಯಾರಿಗೆ ಟಿಕೆಟ್ಟ ನೀಡಿದರೂ ಎಲ್ಲರೂ ಒಟ್ಟಿಗೆ ಸೇರಿ ಅಭ್ಯರ್ಥಿಯ ಪರ ಪ್ರಚಾರ ಮಾಡೋಣ ಎಂದು ದೇವರ ಮುಂದೆ ಪ್ರಮಾಣ ಮಾಡಿದರು.

ಇನ್ನು ಈ ಪ್ರಮಾಣ ಮಾಡುವ ಕಾರ್ಯಕ್ರಮದಲ್ಲಿ ಸಂಸದ ಡಿ ವಿ ಸದಾನಂದ ಗೌಡ, ಯಲಹಂಕದ ಜನಪ್ರಿಯ ಶಾಸಕ ಎಸ್ ಆರ್ ವಿಶ್ವನಾಥ, ಮತ್ತು ಬೆಂಗಳೂರು ಉತ್ತರದ ಬಿಜೆಪಿ ಜಿಲ್ಲಾಧ್ಯಕ್ಷರಾದ ನಾರಾಯಣಗೌಡರು   ಉಪಸ್ಥಿತರಿದ್ದರು.

ಇನ್ನು ಇವರ ಉಪಸ್ತಿತಿಯಲ್ಲೇ ಬ್ಯಾಟರಾಯನಪುರ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಗಳಾದ(ಎ.ರವಿ, ಕೆ. ಮುನಿಂದ್ರ ಕುಮಾರ್ ಮತ್ತು ತಮ್ಮೇಶ್ ಗೌಡ) ಮೂವರು ಸಾವಿರಾರು ಕಾರ್ಯಕರ್ತರ ಸಮ್ಮುಖದಲ್ಲಿ ಕೊಡಿಗೇಹಳ್ಳಿ ಗೇಟ್ ಬಳಿ ಇರುವ ಶ್ರೀ ಗುಂಡಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಪ್ರಮಾಣ ಮಾಡಿದರು. ಹೈ ಕಮಾಂಡ್ ನಾಯಕರು ನಮ್ಮ ಕ್ಷೇತ್ರದಲ್ಲಿ ಯಾರಿಗೆ ಟಿಕೆಟ್ ನೀಡಿದರೂ ನಾವು ಪಕ್ಷವನ್ನು ಗೆಲ್ಲಿಸುವ ದೃಷ್ಟಿಯಿಂದ ಬಿಜೆಪಿ ಪರ ಪ್ರಚಾರ ಮಾಡುತ್ತೇವೆ ಯಾರಿಗೆ ಟಿಕೆಟ್ ನೀಡಲಿ ನಾವು ನೊಂದುಕೊಳ್ಳುವುದಿಲ್ಲ. ನಮ್ಮ ಗುರಿ ಏನಿದ್ದರೂ ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ  ಬ್ಯಾಟರಾಯನಪುರ ಕ್ಷೆತ್ರದಲ್ಲಿ ಕಾಂಗ್ರೆಸ್ ಪಕ್ಷವನ್ನು ಸಂಪೂರ್ಣವಾಗಿ ಸರ್ವನಾಶ ಮಾಡಿ ಕಮಲ ಅರಳಿಸುತ್ತೇವೆ ಎಂದು ಸಾವಿರಾರು ಕಾರ್ಯಕರ್ತರ ಸಮ್ಮುಖದಲ್ಲಿ ಪ್ರತಿಜ್ಞೆ ಮಾಡಿದರು. ಇನ್ನು ಸಭೆಯನ್ನುದ್ದೇಶಿಸಿ ಮಾತನಾಡಿದ  ಸಂಸದ ಡಿ ವಿ ಸದಾನಂದ ಗೌಡರು ಯಾರು ಹೆಚ್ಚು ಜನರನ್ನು ಸೇರಿಸಲು ಪ್ರಯತ್ನ ಮಾಡಿದ್ದಾರೆ ಮತ್ತು ಯಾರು ಹೆಚ್ಚು ಜನರಿಗೆ ಸಹಾಯ ಮಾಡಿದ್ದಾರೆ ಎಂಬುದರಿಂದ ಆಯ್ಕೆ ಮಾಡುವುದಿಲ್ಲ. ಬದಲಿಗೆ ಈ ಕ್ಷೇತ್ರದಲ್ಲಿ ನಾವು ಸರ್ವೆ ಮಾಡಿದ ನಂತರ ಅಭ್ಯರ್ಥಿ ಎಂದು ಘೋಷಣೆ ಮಾಡುತ್ತೇವೆಂದು ಹೇಳಿದರು.

ಗೋಧಿ ಹಿಟ್ಟಿನ ಹಲ್ವಾ ರೆಸಿಪಿ..

Women’s Day Special- 20 ಪ್ರಸಿದ್ಧ ಭಾರತೀಯ ಮಹಿಳೆಯರು ತಮ್ಮ ಕ್ಷೇತ್ರಗಳಲ್ಲಿ ಮೊದಲಿಗರು- ಭಾಗ 4

Women’s Day Special- 20 ಪ್ರಸಿದ್ಧ ಭಾರತೀಯ ಮಹಿಳೆಯರು ತಮ್ಮ ಕ್ಷೇತ್ರಗಳಲ್ಲಿ ಮೊದಲಿಗರು- ಭಾಗ 3

- Advertisement -

Latest Posts

Don't Miss