ಕೋಲಾರ: ಕೋಲಾರದಿಂದ ಸಿದ್ದರಾಮಯ್ಯ ಸ್ಪರ್ಧೆ ವಿಚಾರವಾಗಿ ಸಂಸದ ಮುನಿಸ್ವಾಮಿ ವ್ಯಂಗ್ಯ ಮಾಡಿದ್ದಾರೆ , ಸಿದ್ದರಾಮಯ್ಯ ಜೋಳಿಗೆ ಕಟ್ಟಿಕೊಂಡು ಊರೂರು ಓಡಾಡುತ್ತಿದ್ದಾರೆ. ಬಾದಾಮಿ, ವರುಣ ಆಯ್ತು , ಈಗ ಕೋಲಾರಕ್ಕೆ ಬಂದಿದ್ರು, ಅಲ್ಲಿ ಸಲ್ಲದವರು ಎಲ್ಲಿಯೂ ಸಲ್ಲುವುದಿಲ್ಲ ಎಂಬಂತೆ ಸಿದ್ದರಾಮಯ್ಯ ಪರಿಸ್ಥಿತಿ ಆಗಿದೆ. ಕೋಲಾರದ ಕಾಂಗ್ರೇಸ್ ನಲ್ಲಿ ನಾಲ್ಕೈದು ಟೀಮ್ ಆಗಿವೆ.
ಹೀಗಾಗಿ ಸಿದ್ದರಾಮಯ್ಯ ಗೆಲ್ಲುವುದಿಲ್ಲ ಎಂದು ಕನ್ಫರ್ಮ್ ಆಗುತ್ತಲೆ ವರುಣಗೆ ರಿಟರ್ನ್ ಆಗಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ. ಕೋಲಾರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸಂಸದ ಎಸ್ ಮುನಿಸ್ವಾಮಿ ಸಿದ್ದರಾಮಯ್ಯ ಅಹಿಂದಾ ನಾಯಕರಲ್ಲ, ಅಹಿಂದಾ ವಿರೋಧಿ, ಅವರು ಸುಳ್ಳುಗಳನ್ನ ಹೇಳಿಕೊಂಡು ಬಂದಿದ್ದಾರೆ.
ಅಷ್ಟೆ ಅಲ್ಲ, ಮುಖ್ಯಮಂತ್ರಿ ಅಭ್ಯರ್ಥಿ ಎಂದು ಸಿದ್ದರಾಮಯ್ಯ ಹೇಳ್ತಾರೆ. ಡಿಕೆಶಿ ಸಹ ನಾನೇ ಮುಖ್ಯಮಂತ್ರಿ ಅಭ್ಯರ್ಥಿ ಎನ್ನುತ್ತಾರೆ. ಅವರಲ್ಲಿಯೇ ಸಿದ್ದರಾಮಯ್ಯ ಅವರನ್ನ ಸೋಲುಸುವುದಕ್ಕೆ ಪಣ ತೊಟ್ಟಿದ್ದಾರೆ. ಮತ್ತೊಂದು ಕಡೆ ಇಬ್ರಾಹಿಂ ಸಿದ್ದರಾಮಯ್ಯ ಕೋಲಾರಕ್ಕೆ ಬಂದರೆ ಹಲಾಲ್ ಮಾಡ್ತಿವಿ ಎಂದು ಹೇಳಿದ್ರು. ಇದೆಲ್ಲಾ ನೋಡಿ ಭಯ ಬಿದ್ದು ವರುಣಾಗೆ ಹೋಗುತ್ತಿದ್ದಾರೆ ಎಂದು ಸಿದ್ದರಾಮಯ್ಯ ಕುರಿತು ಮುನಿಸ್ವಾಮಿ ಟಾಂಗ್ ನೀಡಿದ್ದಾರೆ.




