Friday, January 3, 2025

Latest Posts

ಬೇಡ ಬೇಡ ಬೆಂಕಿ ಬೇಡ – ಬಸ್ಸಿನ ಕಣ್ಣೀರ ಕತೆ..!

- Advertisement -

ಕರ್ನಾಟಕ ಟಿವಿ : ಬಹಳ ಹಿಂದಿನಿಂದ ಹೋರಾಟದ ಹೆಸರಲ್ಲಿ ಕಿಡಿಗೇಡಿಗಳು ಮಾಡುವ ಪುಂಡಾಟಕ್ಕೆ ಬಲಿಯಾಗೋದು ನಮ್ಮ ಕೆಎಸ್ ಆರ್ ಟಿಸಿ ಬಸ್ಸುಗಳು. ಕಾವೇರಿ ಗಲಾಟೆ, ಮತೀಯಗಲಾಟೆ ಸೇರಿದಂತೆ ಯಾವುದೇ ಹೋರಾಟ ಹಿಂಸಾಚಾರಕ್ಕೆ ತಿರುಗಿದಾಗ ಮೊದಲು ಬಲಿಯಾಗೋದು ಕೆ.ಎಸ್.ಆರ್.ಟಿ.ಸಿ ಬಸ್ಸುಗಳು. ರಾಜ್ಯದಲ್ಲಿ ಇದು ವರೆಗೆ ನೂರಾರು ಬಸ್ಸುಗಳು ಹಿಂಸಾಚಾರದ ಸಂದರ್ಭದಲ್ಲಿ ಬೆಂಕಿಗಾಹುತಿಯಾಗಿವೆ. ಮೊನ್ನೆಯಷ್ಟೆ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಇಡಿ ವಶಕ್ಕೆ ಪಡೆದ ಘಟನೆ ಖಂಡಿಸಿ ಡಿಕೆ ಶಿವಕುಮಾರ್ ಬೆಂಬಲಿಗರು ಕೆಎಸ್ ಆರ್ ಟಿಸಿ ಬಸ್ ಗಳಿಗೆ ಬೆಂಕಿ ಹಚ್ಚಿದ್ರು. ಕಲ್ಲು ತೂರಾಟ ಮಾಡಿ ಬಸ್ ಜಖಂ ಮಾಡಿದ್ರು. ಇದೀಗ ಬೆಂಕಿಯಿಂದ ಹರೆಬರೆ ಬೆಂದ ಬಸ್ಸಿನ ಮುಂದೆ “ಬೇಡ ಬೇಡ ಬೆಂಕಿ ಬೇಡ ಅವೇಶಕ್ಕೆ ನನ್ನ ಬಲಿ ಕೊಡದಿರಿ ನಾನು ನಿಮ್ಮ ಸೇವಕ” ಅಂತ ಬಸ್ಸಿನ ನೋವನ್ನ ತಾನೇ ಹೇಳಿದಂತೆ ಬ್ಯಾನರ್ ಮೂಲಕ ಹಾಕಲಾಗಿದೆ. ಇದುವರೆಗೂ ಬಸ್ ಗೆ ಬೆಂಕಿ ಹಾಕಿ, ಕಲ್ಲು ತೂರಾಟ ಮಾಡಿ ಗಂಟೆಗಟ್ಟಲೇ ರಸ್ತೆ ತಡೆ ನಡೆಸಿದವರ ಪೈಕಿ ಕೆಲವರ ಮೇಲೆ ಮಾತ್ರ ಹೆಸರಿಗಷ್ಟೆ ಪ್ರಕರಣ ದಾಖಲಾಗಿದೆ. ಎಷ್ಟೋ ಜನ ಸಾರ್ವಜನಿಕ ಆಸ್ತಿ ನಾಶ ಮಾಡಿದವರು ಹೀರೋಗಳ ರೀತಿ ಓಡಾಡ್ತಿದ್ದಾರೆ. ಹೀಗಾಗಿ ಸರ್ಕಾರ ಈ ಕೂಡಲೇ ಪುಂಡ, ಪೋಕರಿಗಳ ವಿರುದ್ಧ ಪ್ರಕರಣ ದಾಖಲಿಸಬೇಕಿದರ. ಈ ಸಂಬಂಧ ಈಗಾಗಲೇ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಕೆಯಾಗಿದೆ.

ನಿಜವಾದ ಹೋರಾಟಗಾರರು, ಕಾರ್ಮಿಕರಿಂದ ಶಾಂತ ಹೋರಾಟ

ಇನ್ನು ಸಾವಿರಾರು ಸಂಖ್ಯೆಯಲ್ಲಿ ಬೆಂಗಳೂರಿಗೆ ಬರುವ ಅಂಗನವಾಡಿ ಕಾರ್ಯಕರ್ತೆಯರು, ಇತರೆ ನೌಕರರು ಸರ್ಕಾರದ ವಿರುದ್ಧ ಪ್ರತಿಭಟಿಸುವಾಗ ಶಾಂತವಾಗಿ ವಾರಗಟ್ಟಲೆ ಪ್ರತಿಭಟನೆ ಮಾಡಿದ ಇತಿಹಾಸವಿದೆ. ಆದ್ರೆ ಹೋರಾಟವನ್ನ ಪುಂಡಾಟ ಮಾಡಿಕೊಂಡವರಿಂದ ಇಂಥಹ ಸನ್ನಿವೇಶ ನಿರ್ಮಾಣವಾಗಿದೆ.

ಪ್ರತಿಭಟನೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಿಕ್ಕಿರುವ ಹಕ್ಕು. ಆದ್ರೆ ಕೆಲ ಕಿಡಿಗೇಡಿಗಳು ತಮ್ಮ ನಾಯಕರನ್ನ ಮೆಚ್ಚಿಸಲು ಬಸ್ಸಿಗಳಿಗೆ ಬೆಂಕಿ, ಸಾರ್ವಜನಿಕ ಆಸ್ತಿ ಪಾಸ್ತಿ ನಾಶ ಮಾಡಿ ಪುಂಟಾಡ ಮಾಡ್ತಾರೆ. ಇಂಥಹ ಪುಂಡ ಪೋಕರಿಗಳಿಗೆ, ಕಠಿಣ ಶಿಕ್ಷೆ ವಿಧಿಸಬೇಕು, ಅಲ್ಲದೇ ನಾಶ ಪಡಿಸಿದ ಮೊತ್ತದ ಹತ್ತರಷ್ಟು ದಂಡ ಕಟ್ಟಿಸುವ ಕಾನೂನನ್ನು ಜಾರಿ ಮಾಡಬೇಕು.

ನಿನ್ನ ಪ್ರಕಾರ ಬಂದ್ ಹೆಸರಿನಲ್ಲಿ ಪುಂಡಾಟ ಮಾಡುವವರಿಗೆ ಯಾವ ಶಿಕ್ಷೆ ವಿಧಿಸಬೇಕು..? ನಿಮ್ಮ ಅಭಿಪ್ರಾಯ ಕಾಮೆಂಟ್ ಮಾಡಿ

- Advertisement -

Latest Posts

Don't Miss