Monday, July 22, 2024

Latest Posts

ಟ್ರಾಫಿಕ್ ರೂಲ್ಸ್ ಬ್ರೇಕ್ ; 24 ಗಂಟೆಯಲ್ಲಿ 60 ಲಕ್ಷ, ಹಾಗಾದ್ರೆ ಒಂದು ವಾರದಲ್ಲಿ…?

- Advertisement -

ಕಳೆದ ಒಂದು ವಾರದಲ್ಲಿ ದೇಶದಾದ್ಯಂತ ಅತಿ ಹೆಚ್ಚು ಚರ್ಚೆಗೆ ಕಾರಣವಾದ ವಿಷಯ ಅಂದ್ರೆ ಅದು ಹೊಸ ಟ್ರಾಫಿಕ್ ರೂಲ್ಸ್.. ಹೊಸ ಕಾನೂನಿನ ಪ್ರಕಾರ ಜಾರಿಯಾಗಿದ್ದ ದುಬಾರಿ ದಂಡ ವಾಹನ ಸವಾರರನ್ನ ಕನಸಿನಲ್ಲೂ ಬೆಚ್ಚಿ ಬೀಳಿಸುತ್ತಿತ್ತು. ಸದ್ಯ ದಂಡದ ಪ್ರಮಾಣವನ್ನ ಕಡಿಮೆ ಮಾಡುವ ಪ್ರಕಟಣೆ ಹೊರಡಿಸಿರುವ ಸರ್ಕಾರ ವಾಹನ ಸವಾರರು ಕೊಂಚ ನಿಟ್ಟುಸಿರು ಬಿಡುವಂತೆ ಮಾಡಿದೆ. ಈ ನಡುವೆ ಹೊಸ ಟ್ರಾಫಿಕ್ ರೂಲ್ಸ್ ಜಾರಿಯಾದ ನಂತರ ಪೋಲಿಸ್ ರು ಸಂಗ್ರಹಿಸಿರುವ ದಂಡದ ಪ್ರಮಾಣ ಕೇಳಿದ್ರೆ ನೀವು ಕಂಗಾಲಾಗ್ತಿರಾ.

ಹೌದು ಕಳೆದ ಒಂದು ವಾರದಲ್ಲಿ ಕೇವಲ ಬೆಂಗಳೂರು ನಗರ ಒಂದರಲ್ಲೇ ವಾಹನ ಸವಾರರಿಂದ ಕೋಟಿ ಗಟ್ಟಲೆ ದಂಡ ವಸೂಲಿ ಮಾಡಲಾಗಿದೆ. ಯಸ್… ಕೇವಲ ಒಂದು ವಾರದಲ್ಲಿ ಬೆಂಗಳೂರು ಟ್ರಾಫಿಕ್ ಪೊಲೀಸರು ಸಂಗ್ರಹಿಸಿರುವ ದಂಡ ಬರೋಬ್ಬರು 2 ಕೋಟಿ, 40 ಲಕ್ಷ. ಅಷ್ಟಕ್ಕೂ ಇದೇನು ಖುಷಿ ಪಡುವಂತ ವಿಚಾರ ಅಲ್ಲವೇ ಅಲ್ಲ. ಯಾಕಂದ್ರೆ ನಮ್ಮಲ್ಲಿ ಎಷ್ಟು ಜನ ಸಂಚಾರಿ ನಿಯಮಗಳನ್ನು ಪಾಲಿಸುತ್ತಿದ್ದಾರೆ ಎನ್ನುವುದಕ್ಕೆ ಇದೊಂದು ಕೈಗನ್ನಡಿ ಅಷ್ಟೇ.

ಇನ್ನೂ ರಾಜ್ಯದಲ್ಲಿ ಯಾವಾಗ ಟ್ರಾಫಿಕ್ ದಂಡವನ್ನು ಇಳಿಸುತ್ತೆ ಎಂಬುವುದು ಮಾತ್ರ ಇರುವರೆಗೂ ಸ್ಪಷ್ಟವಾಗಿಲ್ಲ. ಆದರೆ ಕಳೆದ 8 ದಿನಗಳಲ್ಲಿ ಬೆಂಗಳೂರು ನಗರವೊಂದರಲ್ಲೇ ಬರೋಬ್ಬರಿ 2.40 ಕೋಟಿ ಹಣ ದಂಡದ ರೂಪದಲ್ಲಿ ವಸೂಲಾಗಿದೆ. ಈ ಅವಧಿಯಲ್ಲಿ 84,589 ಪ್ರಕರಣಗಳು ದಾಖಲಾಗಿದ್ದು, ಇದರಲ್ಲಿ ಹೆಲ್ಮೆಟ್ ಇಲ್ಲದೆ ಬೈಕ್ ಚಾಲನೆ ಮಾಡಿದ್ದ ಪ್ರಕರಣಗಳೇ ಹೆಚ್ಚು. ನಗರದಲ್ಲಿ ದಾಖಲಾಗಿರುವ ಪ್ರಕರಣಗಳಲ್ಲಿ 16,710 ಪ್ರಕರಣಗಳು ಹೆಲ್ಮೆಟ್ ರಹಿತ ಚಾಲನೆ ಕಾರಣಕ್ಕೆ ದಾಖಲಾಗಿವೆ.

ಇನ್ನೂ ಉಳಿದಂತೆ, ಹಿಂಬದಿ ಸವಾರ ಹೆಲ್ಮೆಟ್ ಇಲ್ಲದೇ ಪ್ರಯಾಣ ಮಾಡಿದ್ದ ಸಂಬಂಧ 10,977 ಪ್ರಕರಣಗಳು, ಸಿಗ್ನಲ್ ಜಂಪ್ 10,128 ಪ್ರಕರಣ, ನೋ ಪಾರ್ಕಿಂಗ್ 10,867 ಪ್ರಕರಣ, ಡ್ರಿಂಕ್ ಅಂಡ್ ಡ್ರೈವ್ ಅಡಿ 150 ಪ್ರಕರಣಗಳು ದಾಖಲಾಗಿದೆ.
ಒಟ್ಟು 60 ವಿವಿಧ ಬಗೆಯ ಸಂಚಾರ ನಿಯಮಗಳ ಉಲ್ಲಂಘನೆ ಅಡಿ ದಂಡವನ್ನು ವಿಧಿಸಲಾಗುತ್ತಿದೆ. ದಿನವೊಂದಕ್ಕೆ ಸರಾಸರಿ 29 ಲಕ್ಷ ರೂ. ದಂಡದ ಹಣ ಸಂಗ್ರಹವಾಗುತ್ತಿದೆ. ಒಂದು ವೇಳೆ ಇದು ಹೀಗೆ ಮುಂದುವರೆದಲ್ಲಿ ಟ್ರಾಫಿಕ್ ಪೊಲೀಸರ ಕಡೆಯಿಂದ ಸರ್ಕಾರದ ಬೊಕ್ಕಸಕ್ಕೆ ತಿಂಗಳಿಗೆ 8 ಕೋಟಿ ಆದಾಯ ಲಭಿಸಲಿದೆ.

ಇದರಲ್ಲಿ ಖುಷಿಪಡಬೇಕಾದ ವಿಷಯ ಯಾವುದಪ್ಪ ಅಂದ್ರೆ ಡ್ರಿಂಕ್ ಡ್ರೈವ್ ಪ್ರಕರಣಗಳು ಗಣನೀಯವಾಗಿ ಇಳಿಕೆಯಾಗಿವೆ. ಯಾಕಂದರೆ ಕುಡಿದು ವಾಹನ ಚಾಲನೆ ಮಾಡುವವರಿಗೆ ಬರೋಬ್ಬರಿ ಹತ್ತು ಸಾವಿರ ದಂಡವಿದ್ದು ಕಳೆದ ಒಂದು ವಾರದಲ್ಲಿ ಕೇವಲ 150 ಪ್ರಕರಣಗಳು ಮಾತ್ರ ದಾಖಲಾಗಿವೆ. ಇನ್ನೂ ಈ ಅವದಿಯಲ್ಲಿ ದಿನ ಒಂದರಲ್ಲಿ ಸಂಗ್ರಹವಾಗಿರುವ ಅತಿ ಹೆಚ್ಚು ದಂಡ ಅಂದ್ರೆ, 60 ಲಕ್ಷ ರೂ. ಹೌದು.. ಸೆಪ್ಟೆಂಬರ್ 12 ಬೆಳಗ್ಗೆ 10 ಗಂಟೆಯಿಂದ ಸೆಪ್ಟಂಬರ್ 13ರ ಬೆಳಗ್ಗೆ 10 ಗಂಟೆ ಅಂದ್ರೆ 24 ಗಂಟೆ ಅವಧಿಯಲ್ಲಿ ನಗರದಲ್ಲಿ 18,503 ಪ್ರಕರಣಗಳು ದಾಖಲಾಗಿದ್ದು, ಒಟ್ಟು 60,80,500 ರೂ. ದಂಡ ಸಂಗ್ರಹವಾಗಿದೆ.

https://www.youtube.com/watch?v=XAZxEzdUAOg
- Advertisement -

Latest Posts

Don't Miss