ಕೋಲಾರ: 2023ರ ವಿಧಾನಸಭಾ ಚುನಾವಣೆ ಹಿನ್ನೆಲೆ, ಬಿಜೆಪಿ ಪಕ್ಷದ ಅಭ್ಯರ್ಥಿಗಳ ಆಯ್ಕೆಗೆ ಅಭಿಪ್ರಾಯ ಸಂಗ್ರಹ ಮಾಡಲಾಗಿದೆ. ಪ್ರತೀ ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆಗಾಗಿ ಗುಪ್ತ ಮತದಾನ ಪ್ರಕ್ರಿಯೆ ನಡೆಸಲಾಗಿದ್ದು, ಕೋಲಾರ ನಗರದ ಹೊರವಲಯದ ರತ್ನ ಕನ್ವೆನ್ಷನ್ ಹಾಲ್ ನಲ್ಲಿ ಗುಪ್ತ ಮತದಾನ ನಡೆದಿದೆ.
ಆಯಾ ಕ್ಷೇತ್ರಗಳ ಬಿಜೆಪಿ ಮುಖಂಡರು, ಪದಾಧಿಕಾರಿಗಳಿಂದ ವೋಟಿಂಗ್ ನಡೆದಿದ್ದು, ಆಕಾಂಕ್ಷಿಗಳ ಪರವಾಗಿ ಬಿಜೆಪಿ ಮೋರ್ಚಾದ ಪದಾಧಿಕಾರಿಗಳಿಂದ ಗುಪ್ತ ಮತದಾನ ನಡೆಸಲಾಗಿದೆ. ಇಂದು ಬೆಳಗ್ಗೆ 11 ರಿಂದ ಸಂಜೆ 6 ಗಂಟೆಯವರೆಗೂ ಗುಪ್ತ ಮತದಾನ ನಡೆದಿದ್ದು, ಜಿಲ್ಲೆಯ ಆಯಾ ಕ್ಷೇತ್ರದಲ್ಲಿ ಟಿಕೆಟ್ ಆಕಾಂಕ್ಷಿಗಳು ಹೆಚ್ಚಿರುವ ಕಾರಣ ಇದೇ ಮೊದಲ ಬಾರಿಗೆ ಗುಪ್ತ ಮತದಾನ ನಡೆಸಲಾಗಿದೆ.
ನಾಳೆ ಬೆಂಗಳೂರಿನ ಬಿಜೆಪಿ ಪಕ್ಷದ ಕಛೇರಿಯಲ್ಲಿ ಕೋರ್ ಕಮಿಟಿ ಮೀಟಿಂಗ್ ನಲ್ಲಿ ಅಭ್ಯರ್ಥಿಗಳ ಲಿಸ್ಟ್ ಪೈನಲ್ ಸಾಧ್ಯತೆ ಇದ್ದು, ಮತದಾನದಲ್ಲಿ ಹೆಚ್ಚಾಗಿ ಪಡೆದಿರುವ ಅಭ್ಯರ್ಥಿಗಳನ್ನ ಹೈಕಮಾಂಡ್ ಫೈನಲ್ ಮಾಡಲಿದೆ. ಸಭೆಯಲ್ಲಿ ಬಿ.ವೈ ರಾಘವೇಂದ್ರ, ನಯನಾ ಗಣೇಶ್, ಕೇಶವ ಪ್ರಸಾದ್, ಬಿಜೆಪಿ ಜಿಲ್ಲಾಧ್ಯಕ್ಷ ವೇಣುಗೋಪಾಲ್, ಜಿತೇಂದ್ರ ರೆಡ್ಡಿ ಸೇರಿದಂತೆ ಹಲವರು ಭಾಗಿಯಾಗಿದ್ದರು.
ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ ಅನಧಿಕೃತ ಹಣ ವಹಿವಾಟು / ಖರ್ಚಿನ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ .
ರೀಲ್ಸ ಕ್ವೀನ್ ಎಂದು ಖ್ಯಾತಿಯಾಗಿದ್ದ ನಾಲ್ಕನೆ ತರಗತಿ ಬಾಲಕಿ ಆತ್ಮಹತ್ಯೆಗೆ ಶರಣು