ರಾಜರಾಜೇಶ್ವರಿ ನಗರ :
ಆರ್ಆರ್ ನಗರ ಶಾಸಕ ಹಾಗೆ ಸಚಿವ ಮುನಿರತ್ನ ಹಿಂಸೆಗೆ ಬಹಿರಂಗ ಕರೆ ನೀಡಿದ್ದಾರೆ ಎನ್ನಲಾದ ವಿಡಿಯೋ ಸಾಮಾಜಿಕ ಮಾಧ್ಯಗಳಲ್ಲಿ ವೈರಲ್ ಆಗಿದೆ. ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಮುನಿರತ್ನ, ತಮಿಳಿನಲ್ಲಿ ಭಾಷಣ ಮಾಡಿದ್ದಾರೆ. ಯಾರಾದರು ಬಂದರೆ ಅಟ್ಟಾಡಿಸಿ ಹೊಡೀರಿ ಎಂದು ಹೇಳಿರುವ ವಿಡಿಯೋ ವಿರುದ್ಧ ಇದೀಗ ಆಕ್ರೋಶ ವ್ಯಕ್ತವಾಗುತ್ತಿದೆ.
ಆರ್ಆರ್ ನಗರದ ಜಾಲಹಳ್ಳಿ ವಾರ್ಡಿನ ಖಾತಾನಗರದಲ್ಲಿ ತಮಿಳು ಭಾಷಿಕರನ್ನ ಉದ್ದೇಶಿಸಿ ಮಾತನಾಡುವಾಗ ಯಾರಾದ್ರು ಮತ ಕೇಳಲು ಬಂದ್ರೆ ಅಟ್ಟಾಡಿಸಿಕೊಂಡು ಹೊಡೀರಿ ಎಂದು ಕರೆ ನೀಡಿದ್ದಾರೆ. ಅಲ್ಲದೇ ಹೊಡೆಯೋಕೆ ಯಾರೆಲ್ಲಾ ರೆಡಿ ಇದ್ದೀರಿ ಕೈ ಎತ್ತಿ ನೋಡೋಣ ಅಂತ ಶಪಥ ತೆಗೆದುಕೊಳ್ಳುವ ವಿಡಿಯೋ ವೈರಲ್ ಆಗಿದೆ.
ಹೀಗಾಗಿ ಮುನಿರತ್ನ ಕನ್ನಡಿಗರ ವಿರುದ್ಧ ತಮಿಳರನ್ನ ಎತ್ತಿಕಟ್ಟೋ ಪ್ರಯತ್ನ ಮಾಡಿದ್ದಾರೆ ಅವರನ್ನ ಬಂಧಿಸಬೇಕು ಎಂದು ಸಂಸದ ಡಿ.ಕೆ ಸುರೇಶ್ ಆಗ್ರಹಿಸಿದ್ದಾರೆ. ಆರ್ಆರ್ ನಗರದ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಕೂಡ ಮುನಿರತ್ನ ವಿರುದ್ಧ ಬೆಂಗಳೂರು ಆಯುಕ್ತರಿಗೆ ದೂರು ಸಲ್ಲಿಸಿದ್ದಾರೆ.
ಶಿವಣ್ಣ ಜೊತೆ ಸಿನಿಮಾದಲ್ಲಿ ನಟಿಸಲು ಮುಂದಾದ ಬಾಲಿವುಡ್ ನಟ ಅನುಪಮ್ ಖೇರ್
ಐಪಿಎಲ್ ಉದ್ಘಾಟನಾ ಸಮಾರಂಭಲ್ಲಿ ನೃತ್ಯ ಪ್ರದರ್ಶನ ಮಾಡಲಿರುವ ತೆಲುಗು ನಟಿ ತಮನ್ನಾ ಭಾಟಿಯಾ