ಹರಕೆಯ ಕುರಿಯಾಗಲಿದ್ದಾರಾ ಬಿವೈ ವಿಜಯೇಂದ್ರ ..?

ವರುಣಾ:

ಇನ್ನೇನು ಮೇ 10 ರಂದು ವಿಧಾನಸಭಾ ಚುನಾವಣಾ ನೆಡೆಯಲಿದ್ದೂ ಜೆಡಿಎಸ್ ಮತ್ತು ಕಾಂಗ್ರೆಸ್ ಈಗಾಗಲೆ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿದ್ದಾರೆ. ಆದರೆ ಭಾರತೀಯ ಜನತಾ ಪಾರ್ಟಿ ಈವರೆಗೂ ಟಿಕೆಟ್ ನೀಡದೆ ಕಾದು ನೋಡುವ ತಂತ್ರಗಾರಿಕೆ ನಡೆಸಿದ್ದಾರೆ.

ಹಾಗೂ ಈ ಬಾರಿಯ ಚುನಾವಣೆಯಲ್ಲಿ ಮೈಸೂರು ಜಿಲ್ಲೆಯ ವರುಣಾ ಕ್ಷೇತ್ರವು ಚುನಾವಣಾ ಕಾರಣದಿಂದಾಗಿ ರಾಷ್ಟ್ರಾದ್ಯಂತ ಚರ್ಚೆಯಾಗುತ್ತಿದೆ. ಏಕೆಂದರೆ ವಿರೋಧ ಪಕ್ಷದ ನಾಯಕ ಮತ್ತು ಮಾಸ್ ಲೀಡರ್ ಎಂದೇ ಖ್ಯಾತಿ ಗಳಿಸಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ವರುಣಾ ಕ್ಷೇತ್ರದಿಂದ  ಸ್ಪರ್ಧಿಸುವುದು ಖಚಿತವಾಗಿದೆ. ಆದರೆ ಇಲ್ಲಿಯವರೆಗೂ ಬಿಜೆಪಿ ಟಿಕೆಟ್ ಘೋಷಣೆ ನೀಡದ ಸಲುವಾಗಿ ವರುಣಾ ಕ್ಷೇತ್ರದಿಂದ ಯಾರನ್ನು ಸ್ಪರ್ದಿಸಲಿದ್ದಾರೆ ಎಂಬ ಕುತೂಹಲ ಎಲ್ಲರಲ್ಲೂ ಇದೆ.

ಬಿಜೆಪಿಯವರು ವರುಣಾ ಕ್ಷೇತ್ರದಲ್ಲಿ ಯಡಿಯೂರಪ್ಪಾ ಪುತ್ರ ಸ್ಪರ್ದಿಸಲಿದ್ದಾರೆ ಎಂಬದಾಗಿ ಘೋಷಣೆ ಮಾಡಿತ್ತು ಆದರೆ ಯಡಿಯೂರಪ್ಪನವರೇ ಖುದ್ದಾಗಿ ಮಾಧ್ಯಮದವರ ಮುಂದೆ ಈ ಬಾರಿ ಚುನಾವಣೆಯಲ್ಲಿ ವಿಜಯೇಂದ್ರ ವರುಣಾ ಕ್ಷೇತ್ರದಲ್ಲಿ ಸ್ಪರ್ಧಿಸುತಿಲ್ಲ ಬದಲಿಗೆ ಶಿಕಾರಿಪುರದಿಂದ ಸ್ಪರ್ಧೇ ಮಾಡಲಿದ್ದಾರೆ ಎಂದು ಹೇಳಿದರು

ಈ ಮಾತಿಗೆ ಟಕ್ಕರ್ ನೀಡಿರುವ ಪ್ರತಿಪಕ್ಷಗಳು ಯಡಿಯೂರಪ್ಪ ಆಂಡ್ ಸನ್ಸ ಕಂಪನಿಯನ್ನು ಮುಗಿಸಲು ಹೀಗೆಲ್ಲ ತಂತ್ರ ಹೂಡುತ್ತಿದೆ ಆದರ ಮುಂದುವರೆದ ಭಾಗವಾಗಿ ವರುಣಾ ಕ್ಷೇತ್ರಕ್ಕೆ ವಿಜಯೆಂದ್ರ ಅವರನ್ನು ತಳ್ಳಿ ಹರಕೆಯ ಕುರಿ ಯಾಗಿಸಲು ಪ್ರಯತ್ನ ಪಡುತ್ತಿದೆ ಸಂತೋಷ ಕೂಟದ ತಂತ್ರಗಾರಿಕೆಯನ್ನು ಯಡಿಯೂರಪ್ಪನವರು ಅರ್ಥ ಮಾಡಿಕೊಂಡು ಎಚ್ಚೆತ್ತರೆ ಪುತ್ರರ ಭವಿಷ್ಯ ಉಳಿಸಬಹುದು  ಎಂದು ಟ್ವಿಟ್ ಮಾಡಿದ್ದಾರೆ.

ಕಾಂಗ್ರೆಸ್ ಪಕ್ಷ ಜನರಿಂದ ಮರೆಯಾಗುತ್ತಿದೆ: ಸಂಸದ ಬಿ.ವೈ.ವಿಜಯೇಂದ್ರ..

ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ ಅನಧಿಕೃತ ಹಣ ವಹಿವಾಟು / ಖರ್ಚಿನ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ .

ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರ್ಪಡೆಗೊಂಡ ಗುಬ್ಬಿ ಶಾಸಕ ಶ್ರೀನಿವಾಸ್

About The Author