ಬಿಜೆಪಿ ಸೇರಿದ ಬಳಿಕ ಮೊದಲ ಸುದ್ದಿಗೋಷ್ಠಿ-ಎ.ಟಿ ರಾಮಸ್ವಾಮಿ

ಹಾಸನ:

ಕಳೆದ ಕೆಲವು ದಿನಗಳ ಹಿಂದೆ ಜೆಡಿಎಸ್ ಪಕ್ಷಕ್ಕೆ ರಾಜಿನಾಮೆ ನೀಡಿ ಬಿಜೆಪಿ ಸೇರ್ಪಡೆಯಾಗಿರುವ ಎ ಟಿ ರಾಮಸ್ವಾಮಿ ಬಿಜೆಪಿ ಸೇರಿದ ಬಳಿಕ ಮೊದಲ ಬಾರಿಗೆ ಹಾಸನದ ಬಿಜೆಪಿ ಕಛೇರಿಯಲ್ಲಿ ಸುದ್ದಿಗೋಷ್ಟಿ ಮಾಡಿದರು ಇದೇ ಸಮಯದಲ್ಲಿ ಅವರಿಗೆ ಬಿಜೆಪಿ ಜಿಲ್ಲಾ ಕಮಿಟಿಯ  ಸದಸ್ಯರು ಹೂಗುಚ್ಚ ನೀಡಿ ರಾಮಸ್ವಾಮಿಯವರನ್ನು  ಸ್ವಾಗತ ಮಾಡಿಕೊಂಡರು

ಬಳಿಕ ಮಾತನಾಡಿದ ರಾಮಸ್ವಾಮಿಯವರು ನಾನು ಬಹಳ ಸಂತೋಷದಿಂದ ಪಕ್ಷಕ್ಕೆ ಸೇರಿಕೊಂಡಿದ್ದೇನೆ. ಪಕ್ಷದ ನಾಯಕರು ದೆಹಲಿಗೆ ಬಂದು ಪಕ್ಷಕ್ಕೆ ಸೇರ್ಪಡೆಯಾಗಿ ಅಂದಿದಕ್ಕೆ ದೆಹಲಿಗೆ ಹೋಗಿದ್ದೆ. ಯಾವುದೇ ರೀತಿಯ ಷರತ್ತು ,ಆಸೆ ಆಕಾಂಕ್ಷೆ ಇಲ್ಲ. ಪಕ್ಷದ ಕೆಲಸಕ್ಕೆ ಆಕರ್ಷಿತನಾಗಿ ಬಿಜೆಪಿಗೆ ಸೇರಿಕೊಂಡಿದ್ದೇನೆ ನಾನು ಇದನ್ನು ವರಿಷ್ಟರಿಗೂ ತಿಳಿಸಿದ್ದೇನೆ. ನಾನು ಟಿಕೆಟ್ ಆಕಾಂಕ್ಷಿ ಕೂಡಾ ಅಲ್ಲ. ರಾಜ್ಯ ಮಟ್ಟದ ನಾಯಕರು ನನ್ನನ್ನು ಅತ್ಯಂತ ಆತ್ಮಿಯವಾಗಿ ಸ್ವಾಗತ ಮಾಡಿಕೊಂಡಿದ್ದಾರೆ.

ನಾನು ಮೊದಲಿನಿಂದಲೂ ಜನರ ಪರವಾಗಿ ಬಡವರ ಪರವಾಗಿ ದ್ವನಿ ಎತ್ತುತ್ತಾ ಬಂದಿದ್ದೇನೆ. ಲೂಟಿಕೋರರು ಮತ್ತು ದರೋಡೆಕೋರರ ವಿರುದ್ದ ಹೋರಾಟ ಮಾಡುತ್ತಾ ಬಂದಿದ್ದೇನೆ. ನಾನು ವಿಧಾನಸೌಧದ ಹೊರಗಿರಲಿ ಒಳಗಿರಲಿ ತಪ್ಪನ್ನು ತಪ್ಪ ಅಂತಾನೇ ಹೇಳುತ್ತೇನೆ ಅದಕ್ಕಾಗಿ ನನ್ನನ್ನು ಜನ ಇಷ್ಟ ಪಡುತ್ತಾರೆಎಂದು ಹೇಳಿದರು ಮುಖಂಡರಿಗೆ ನಾನು ಅಭಾರಿಯಾಗಿರುತ್ತೆನೆ ಎಂದು ಹೇಳಿದರು.

ಆನೆ ಹಾವಳಿ ತಡೆಯಲು ತಡೆಗೋಡೆ ನಿರ್ಮಾಣ

ತಮ್ಮನ ಅಕ್ರಮ ಸಂಬಂಧಕ್ಕೆ ಅಣ್ಣನ ಸಜೀವದಹನ

ಒಳ ಮೀಸಲಾತಿ ವಿಚಾರವಾಗಿ ಪ್ರತಿಭಟನೆ

 

About The Author