ನಂಜನಗೂಡು: ಕೆಲ ದಿನಗಳ ಹಿಂದಷ್ಟೇ ನಿಧನರಾಗಿದ್ದ ಕಾಂಗ್ರೆಸ್‌ನ ಧ್ರುವನಾರಾಯಣ್ ಪತ್ನಿ ವೀಣಾ ಧ್ರುವನಾರಾಯಣ್(50) ಅನಾರೋಗ್ಯದಿಂದ ನಿಧನರಾಗಿದ್ದಾರೆ. ಮೈಸೂರಿನಲ್ಲಿಂದು ಬೆಳಿಗ್ಗೆ ಕೊನೆಯುಸಿರೆಳೆದಿದ್ದು, ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.
ವೀಣಾ ಹಲವು ತಿಂಗಳಿನಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೇ, ವೀಣಾ ಸಾವನ್ನಪ್ಪಿದ್ದಾರೆ. ಕೆಲ ದಿನಗಳ ಹಿಂದಷ್ಟೇ ತಂದೆಯನ್ನು ಕಳೆದುಕೊಂಡಿದ್ದ ದರ್ಶನ್, ಈಗ ಅಮ್ಮನನ್ನೂ ಕಳೆದುಕೊಂಡಿದ್ದಾರೆ.
ಧ್ರುವ ನಾರಾಯಣ್ ನಿಧನದ ಬಳಿಕ, ಅವರ ಮಗ ದರ್ಶನ್‌ಗೆ ಟಿಕೇಟ್ ಸಿಗುತ್ತದೆ ಎಂದು ಹೇಳಲಾಗಿತ್ತು. ಅದಕ್ಕಾಗಿ ದರ್ಶನ್ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದರು. ಆದರೆ ತಾಯಿಯ ನಿಧನದ ಸುದ್ದಿ ಕೇಳಿ ದರ್ಶನ್, ತಮ್ಮೆಲ್ಲಾ ಪ್ರಚಾರ ಕಾರ್ಯವನ್ನು ಮೊಟಕುಗೊಳಿಸಿ, ಮನೆಗೆ ಬಂದಿದ್ದಾರೆ.
ಕೆಪಿಸಿಸಿ ಕಾರ್ಯಾಧ್ಯಕ್ಷರೂ ಆಗಿದ್ದ ಧ್ರುವ ನಾರಾಯಣ್, ಎಂದಿಗೂ ಯಾರ ವಿರುದ್ದವೂ ವಾಗ್ದಾಳಿ ನಡೆಸಿದ್ದಿರಲಿಲ್ಲ. ಅಜಾತ ಶತ್ರುವಾಗಿದ್ದ ಧ್ರುವ ನಾರಾಯಣ್, ಪಕ್ಷ ಸಂಘಟನೆ ಕಾರ್ಯದಲ್ಲಿ ಮಾತ್ರ ನಿರತರಾಗಿದ್ದರು. ಕಳೆದ ಮಾರ್ಚ್ 11ಕ್ಕೆ ಇದ್ದಕ್ಕಿದ್ದಂತೆ ಅನಾರೋಗ್ಯಕ್ಕೀಡಾಗಿದ್ದ ಧ್ರುವ ನಾರಾಯಣ್, ಕೆಲ ಸಮಯದಲ್ಲೇ ನಿಧನರಾಗಿದ್ದರು.
ಹಿರಿಯ ಕಾಂಗ್ರೆಸ್ ನಾಯಕ ಎ.ಕೆ.ಆ್ಯಂಟನಿ ಪುತ್ರ ಅನಿಲ್ ಆ್ಯಂಟನಿ ಬಿಜೆಪಿಗೆ ಸೇರ್ಪಡೆ.
‘ಹಳೇ ರೈಲಿಗೆ ಹೊಸ ಇಂಜಿನ್ ಅಳವಡಿಸಿ ಬಾವುಟ ಹಾರಿಸಲು ಮೋದಿಯೇ ಬೇಕೆ..?’
‘ಕರುನಾಡಿನಲ್ಲಿ ಕಾಂಗ್ರೆಸ್ ಸೂರ್ಯೋದಯಕ್ಕೆ ಇನ್ನೊಂದು ತಿಂಗಳಷ್ಟೇ ಬಾಕಿ’