ಕೋಲಾರ: ಕೋಲಾರದಲ್ಲಿ ಬಿಜೆಪಿ ಟಿಕೆಟ್ ವಾರ್ ಮುಂದುವರೆದಿದ್ದು, ಮೋಹನ್ ಕೃಷ್ಣ ಬೆಂಬಲಿಗರು ವೇಲು ನಾಯ್ಕರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೋಹನ್ ಕೃಷ್ಣ ಇಲ್ಲಿ 4 ವರ್ಷಗಳಿಂದ ಪಕ್ಷ ಸಂಘಟನೆ ಮಾಡುತ್ತಿದ್ದಾರೆ. ಆದ್ರೆ ವೇಲು ನಾಯ್ಕರ್ ಈಗ ಇಲ್ಲಿ ಬಂದಿದ್ದಾರೆ ಎಂದು ಹರಿಹಾಯ್ದಿದ್ದಾರೆ. ಅಲ್ಲದೇ, ಗೋ ಬ್ಯಾಕ್ ವೇಲು ನಾಯ್ಕರ್ ಅಭಿಯಾನವನ್ನೂ ಶುರು ಮಾಡಿದ್ದಾರೆ.
ಇದಕ್ಕೆ ಮುನಿರತ್ನ ಕಟ್ಟಾ ಶಿಷ್ಯ ವೇಲು ನಾಯ್ಕರ್ ಪ್ರತಿಕ್ರಿಯಿಸಿದ್ದಾರೆ. ”ನನ್ನ ಕುಟುಂಬವೆಲ್ಲಾ ಕೆಜಿಎಫ್ ನಲ್ಲೇ ವಾಸವಿರುವುದು. ನನಗೆ ಕೆಜಿಎಫ್ ಹೊಸದೇನಲ್ಲ, ನಮ್ಮ ತಾತ ಇಲ್ಲಿನವರೇ. ಟಿಕೆಟ್ ಆಕಾಂಕ್ಷಿ ಅಂತ ಘೋಷಣೆ ಆದ್ಮೇಲೆ ಬೇರೆ ಕಡೆಯವನು ಅಂತ ಅಪಪ್ರಚಾರ ಮಾಡ್ತಿದ್ದಾರೆ. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ನಾವೆಲ್ಲಾ ಭಾರತೀಯರು. ರಾಜ್ಯ ಅಂತ ಬಂದಾಗ ನಾವೆಲ್ಲಾ ಕನ್ನಡಿಗರು. ರಿಸರ್ವೇಷನ್ ಇರುವುದರಿಂದ ಯಾರು ಎಲ್ಲಿ ಬೇಕಾದ್ರೂ ಸ್ಪರ್ಧೆ ಮಾಡಬಹುದು. ಜನರ ಟೀಕೆಗಳಿಗೆ ಹೈಕಮಾಂಡ್ ಉತ್ತರ ಕೊಡುತ್ತೆ. ಆಕಾಂಕ್ಷಿ ಗಳು ಎಷ್ಟೇ ಜನ ಇರಲಿ, ಹೈಕಮಾಂಡ್ ನಿರ್ಧಾರವೇ ಅಂತಿಮ” ಎಂದು ಹೇಳಿದ್ದಾರೆ.
ಅಲ್ಲದೇ, ”ನಾನು ಅಭ್ಯರ್ಥಿ ಅಂತ ಬಂದಿದ್ರೆ ಮುಖಂಡರು, ಆಕಾಂಕ್ಷಿಗಳ ಜೊತೆ ಮಾತಾಡಬಹುದಿತ್ತು. ಆದ್ರೆ ನಾನೀಗ ಬಂದಿರುವುದು ಆಕಾಂಕ್ಷಿ ಅಂತ ಮಾತ್ರ . ಕೆಜಿಎಫ್ ರಿಸರ್ವೇಷನ್ ಇರೋದ್ರಿಂದ ನನಗೂ ಸ್ಪರ್ಧಿಸುವ ಹಕ್ಕಿದೆ. ನಮ್ಮ ಬಿಜೆಪಿಯಲ್ಲಿ ಯಾವುದೇ ಬಣ ಇಲ್ಲ . ಟಿಕೆಟ್ ಯಾರಿಗೇ ಕೊಡಲಿ ಅವರ ಪರ ಕಾರ್ಯಕರ್ತನಾಗಿ ಕೆಲಸ ಮಾಡುವೆ” ಎಂದು ನಾಯ್ಕರ್ ಹೇಳಿದ್ದಾರೆ..
”ಎಷ್ಟೇ ಬಣಗಳಿದ್ದರೂ ಬಿಜೆಪಿಯಲ್ಲಿ ಶಿಸ್ತು ಇದೆ . ಶಾಸಕಿ ರೂಪಕಲಾ ಅವರು ಬೆಂಗಳೂರಿನಲ್ಲಿ ವಾಸವಿದ್ದಾರೆ . ಮಾಜಿ ಶಾಸಕ ಸಂಪಂಗಿ ಅವರದ್ದು ಆನೇಕಲ್, ಅವರಿಗೆ ಜನ ಆಶೀರ್ವಾದ ಮಾಡಲಿಲ್ವಾ..? ಆದ್ರೆ ನನ್ನನ್ನು ಮಾತ್ರ ಬೇರೆ ಕಡೆಯಿಂದ ಬಂದವನು ಅನ್ನುತ್ತಾರೆ. ಕೆಲವು ಆಕಾಂಕ್ಷಿಗಳು ಇದನ್ನೇ ಬಂಡವಾಳವನ್ನಾಗಿ ಕ್ರಿಯೇಟ್ ಮಾಡಿಕೊಂಡಿದ್ದಾರೆ. ಇನ್ನು ಮೋಹನ್ ಕೃಷ್ಣ ಅವರದ್ದು ಮೂಲ ಬೆಂಗಳೂರು, ಕೆಜಿಎಫ್ ಕ್ಷೇತ್ರ ಅಲ್ಲ. ಆದ್ರೆ ಸಂವಿಧಾನದಲ್ಲಿ ಅವರಿಗೂ ಸ್ಪರ್ಧೆ ಮಾಡುವ ಅವಕಾಶ ಇದೆ, ಹಾಗೇ ನನಗೂ ಅವಕಾಶ ಇದೆ” ಎಂದಿದ್ದಾರೆ.
ಅಲ್ಲದೇ, ”ನಾನೂ ಸಹ ರಾಜ್ಯ ಮಟ್ಟದಲ್ಲಿ ಹಲವು ಸಮಾಜ ಸೇವೆ ಮಾಡಿದ್ದೇನೆ. ಬೆಂಗಳೂರಿನಲ್ಲಿ ಕಾರ್ಪೋರೆಟ್ ಆಗಿ ಕೆಲಸ ಮಾಡಿದ್ದೇನೆ. ಹಲವು ಕಡೆ ಚುನಾವಣೆಗಳಲ್ಲಿ ಬಿಜೆಪಿ ಅಭ್ಯರ್ಥಿ ಗೆಲ್ಲಿಸುವಲ್ಲಿ ಪಾತ್ರ ನಿರ್ವಹಿಸಿದ್ದೇನೆ. ನಾನು ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ಕೆಲಸ ಮಾಡಿದ್ದೇನೆ. ಕೆಜಿಎಫ್ ನಲ್ಲಿ ನಾನು ಆಕಾಂಕ್ಷಿ ಅಂತ ಹೇಳಿದ್ದೇನೆಯೇ ಹೊರತು, ಅಭ್ಯರ್ಥಿ ಅಂತ ಹೇಳಿಲ್ಲ. ನಮ್ಮ ತಾತ ಕೆಜಿಎಫ್ ನ ಬಿಜಿಎಂ ನಲ್ಲಿ ವಾಸ ಮಾಡುತ್ತಿದ್ದವರು. ನಾನು ಭಾರತೀಯನೇ, ಪಾಕಿಸ್ತಾನದಿಂದ ಬಂದವನಲ್ಲ ಎಂದು ಕೋಲಾರ ಬಿಜೆಪಿ ಟಿಕೇಟ್ ಆಕಾಂಕ್ಷಿ” ವೇಲು ನಾಯ್ಕರ್ ಹೇಳಿದ್ದಾರೆ.
ಕೋಲಾರ ಬಿಜೆಪಿಯಲ್ಲಿ ಭುಗಿಲೆದ್ದ ಅಸಮಾಧಾನ, ಗೋ ಬ್ಯಾಕ್ ವೇಲು ನಾಯ್ಕರ್ ಅಭಿಯಾನ
ರಾಧಾಕೃಷ್ಣ ಮನೆಗೆ ರವಿಕುಮಾರ್ ಭೇಟಿ: ಬೆಂಬಲಿಗರಿಂದ ಹೈಡ್ರಾಮಾ, ಪೊಲೀಸರಿಂದ ಪರಿಸ್ಥಿತಿ ನಿಯಂತ್ರಣ
ಮಂಡ್ಯ ಕಾಂಗ್ರೆಸ್‌ನಲ್ಲಿ ಭುಗಿಲೆದ್ದ ಭಿನ್ನಮತ, ರಾಧಾಕೃಷ್ಣಗೆ ಟಿಕೇಟ್ ಕೊಡುವಂತೆ ಒತ್ತಾಯ..