ಝಾನ್ಸಿ(ಉತ್ತರಪ್ರದೇಶ): ಭಾರತೀಯರಿಗೆ ಭಾರತದ ಮೇಲೆ ಇರುವಷ್ಟೇ ಪ್ರೀತಿ ಗೌರವ ನ್ಮಮ ರಾಷ್ಟ್ರೀಯ ಧ್ವಜದ ಮೇಲಿದೆ. ತ್ರಿವರ್ಣ ಧ್ವಜಕ್ಕೆ ಅಗೌರವ ತೋರಿದರೆ, ಅಂಥವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗತ್ತೆ ಅನ್ನೋದು ಎಲ್ಲರಿಗೂ ಗೊತ್ತು. ಆದರೂ ಕೂಡ ಓರ್ವ ವ್ಯಕ್ತಿ ಹಣ್ಣು ಸ್ವಚ್ಛ ಮಾಡಲು, ತ್ರಿವರ್ಣ ಧ್ವಜದ ಬಳಕೆ ಮಾಡಿದ್ದಾನೆ.
ಉತ್ತರಪ್ರದೇಶದ ಝಾನ್ಸಿ ಎಂಬ ಸ್ಥಳದಲ್ಲಿ ಈ ಘಟನೆ ನಡೆದಿದ್ದು, ಮಾರಾಟಕ್ಕಿಟ್ಟಿದ್ದ ಕಲ್ಲಂಗಡಿ ಹಣ್ಣನ್ನು ಸ್ವಚ್ಛಗೊಳಿಸಲು, ವ್ಯಕ್ತಿ ಧ್ವಜದ ಬಳಕೆ ಮಾಡಿದ್ದಾನೆ. ಇದನ್ನು ನೋಡಿದ ಸ್ಥಳೀಯರೊಬ್ಬರು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಈ ದೃಶ್ಯವನ್ನ ಸೆರೆ ಹಿಡಿದಿದ್ದಾರೆ. ಅಲ್ಲದೇ ಸಾಮಾಜಿಕ ಜಾಲತಾಣದಲ್ಲಿ ಈ ವೀಡಿಯೋ ಅಪ್ಲೋಡ್ ಮಾಡಿದ್ದು, ವೀಡಿಯೋ ವೈರಲ್ ಆಗುತ್ತಿದ್ದಂತೆ, ಪೊಲೀಸರು ಈ ಬಗ್ಗೆ ತನಿಖೆಗೆ ಮುಂದಾಗಿದ್ದಾರೆ.
ಟ್ವಿಟರ್‌ನಲ್ಲೂ ಇದೇ ವೀಡಿಯೋ ಸಾಕಷ್ಟು ಸದ್ದು ಮಾಡಿದೆ. ನೆಟ್ಟಿಗರೆಲ್ಲ ಈ ವ್ಯಕ್ತಿಗೆ ಚೆನ್ನಾಗಿ ತರಾಟೆ ತೆಗೆದುಕೊಂಡಿದ್ದಾರೆ. ಸ್ಥಳೀಯ ಪೊಲೀಸರು ಕೂಡ ಟ್ವೀಟ್ ಮಾಡಿದ್ದು, ಈ ಬಗ್ಗೆ ಶೀಘ್ರವಾಗಿ ಕ್ರಮ ಕೈಗೊಳ್ಳಲಾಗತ್ತೆ ಎಂದು ಹೇಳಿದ್ದಾರೆ. ಇನ್ನು ಇವನನ್ನು ಕೆಲವರು ಪಾಕಿಸ್ತಾನಿ ಎಂದು ಕರೆದರೆ, ಮತ್ತೆ ಕೆಲವರು, ಈ ಶಾಂತಿದೂತರು ಮತ್ತು ಕಲ್ಲೆಸೆಯುವವರಿಂದ ಇನ್ನೇನನ್ನು ನಾವು ನಿರೀಕ್ಷಿಸಲು ಸಾಧ್ಯ ಎಂದು ಪ್ರಶ್ನಿಸಿದ್ದಾರೆ. ಅಲ್ಲದೇ ಇನ್ನು ಕೆಲವರು ಇಂಥವರಿಗೆಲ್ಲ ಕಠಿಣ ಶಿಕ್ಷೆ ಕೊಡಬೇಕು. ಇವರನ್ನ ಹೀಗೆ ಬಿಟ್ಟರೆ, ಇಂದು ಇವನು ನಾಳೆ ಮತ್ತೊಬ್ಬನು, ನಾಡಿದ್ದು ಇನ್ನೊಬ್ಬನು, ಈ ರೀತಿ ಮುಂದುವರಿಯುತ್ತಾರೆ ಎಂದು ಹೇಳಿದ್ದಾರೆ. ಇಂಥ ಕೆಲಸ ಮಾಡಿದವರಿಗೆ 1971ರ ಸೆಕ್ಷನ್ 2ರ ಅಡಿಯಲ್ಲಿ ಪ್ರಕರಣ ದಾಖಲಿಸಿ, ಶಿಕ್ಷೆ ನೀಡಲಾಗತ್ತೆ.
#झाँसी राष्ट्रीय ध्वज से तरबूज साफ करते वीडियो सोशल मीडिया पर हुआ वायरल,समथर थाना क्षेत्र का बताया जा रहा है @dmjhansi1 @jhansipolice @Uppolice @myogiadityanath @UPGovt pic.twitter.com/d8yxbdPRni
— ठाkur Ankit Singh (@liveankitknp) April 7, 2023
‘ಇಲ್ಲಿ 80 ಕೋಟಿ ಉಚಿತ ರೇಷನ್ ನೀಡುತ್ತಿದ್ದಾರೆ, ಪಾಕಿಸ್ತಾನದಲ್ಲಿ ಆಹಾರಕ್ಕಾಗಿ ಪರದಾಟ’
‘ರಾಹುಲ್ ಗಾಂಧಿ ಟ್ರೋಲರ್ ಗಳ ರೀತಿ ಮಾತನಾಡುತ್ತಿದ್ದಾರೆ ವಿನಃ ರಾಷ್ಟ್ರೀಯ ನಾಯಕರಂತಲ್ಲ’




