ಹಾಸನ: ಮಾಜಿ ಶಾಸಕ ಶಿವಲಿಂಗೇಗೌಡ ರ ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮ ದಲ್ಲಿ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ಅರಸೀಕೆರೆ ಕ್ಷೇತ್ರ ಕ್ಕೆ ಕುಡಿಯೋ ನೀರು ಸಿಕ್ಕಿದ್ದರೆ ಶಿವಲಿಂಗೇಗೌಡ ಕಾರಣ ಬೇರೆ ಯಾರು ಅಲ್ಲ. ಅವರು ಒತ್ತಾಯ ಮಾಡಿದ್ರು ಕಾಂಗ್ರೆಸ್ ಸರ್ಕಾರ ಅನುದಾನ ಕೊಟ್ಟು ಮಂಜೂರಾಯ್ತು. ಎತ್ರಿನಹೊಳೆ ಯೋಜನೆ ಉದ್ಘಾಟನೆ ಗೆ ಕುಮಾರಸ್ವಾಮಿ ರೇವಣ್ಣರನ್ನ ಕರೆದಿದ್ದೊ ಅವರು ವಿರೋಧ ಮಾಡಿ ಬರಲಿಲ್ಲ.. ಶಿವಲಿಂಗೇಗೌಡ ಅವರು ಅರಸೀಕೆರೆ ಸೇರಿಸಿ ಎಂದು ಹೇಳಿದ್ರು, ಮೊದಲು ಅರಸೀಕೆರೆ ಮೂಲ ಯೋಜನೆಯಲ್ಲಿ ಇರಲಿಲ್ಲ. ಕುಮಾರಸ್ವಾಮಿ ಅವರು ಯೋಜನೆ ವಿರೋಧಿಸಿದ್ರು ಎಂದು ಸಿದ್ದರಾಮಯ್ಯ ಹೇಳಿದರು.
ಅಲ್ಲದೇ, ಹಣ ಹೊಡೆಯೋಕೆ ಮಾಡ್ತಾ ಇದಾರೆ ಎಂದಿದ್ದರು. ಅವರ ಮಾತಿಗೆ ನಾನು ಸೊಪ್ಪು ಹಾಕಲಿಲ್ಲ. ಯೋಜನೆ ಜಾರಿ ಆಗಿ ನಡಿತಾ ಇದೆ, ನಾವು ಅಧಿಕಾರ ಬಿಟ್ಟಮೇಲೆ ಯೋಜನೆ ಕುಂಟುತ್ತಾ ಸಾಗುತ್ತಿದೆ. ಕುಮಾರಸ್ವಾಮಿ ಅವರಿಗೆ ಈಗಲೂ ಆ ಯೋಜನೆ ಬಗ್ಗೆ ನಂಬಿಕೆ ಇಲ್ಲ.ಇಲ್ಲಾ ಗೊತ್ತಿದ್ದು ಕಾಂಗ್ರೆಸ್ ಗೆ ಒಳ್ಳೆ ಹೆಸರು ಬರುತ್ತೆ ಎಂದು ವಿರೋಧ ಮಾಡಿರಬಹುದು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ನೀವು ಗೆಲ್ಲಿಸಿದರೆ ನಿಮ್ಮ ಸ್ಚಾಭಿಮಾನ ರಕ್ಷಣೆ ಮಾಡಿದಂತೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ನೂರಕ್ಮೆ ನೂರು ಅಧಿಕಾರಕ್ಕೆ ಬರುತ್ತೆ. ಈ ರಾಜ್ಯದ ಜನರು ಈ ಸರ್ಕಾರದ ಆಡಳಿತ ದಿಂದ ಬೇಸತ್ತು ಹೋಗಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಅವರು ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೆ ಎಂದು ನಾವು ಕೊಟ್ಟ ಭರವಸೆ ಈಡೇರಿಸಲು ಆಗಲ್ಲ ಎಂದು ಹೇಳುತ್ತಿದ್ದಾರೆ. ನಾವು ಕೊಟ್ಟ ಭರವಸೆ ಈಡೇರಿಸಲು ಆಗದಿದ್ದರೆ ಒಂದು ಸೆಕೆಂಡ್ ಕೂಡ ಅಧಿಕಾರದಲ್ಲಿ ಇರಲ್ಲ. ನಾವು ನುಡಿದಂತೆ ನಡೆಯುತ್ತೇವೆ, ನಾವು ನೂರಕ್ಕೆ ನೂರು ಕೊಟ್ಟ ಮಾತು ಈಡೇರಿಸುತ್ತೇನೆ. ಒಂದು ವೇಳೆ ನಾವು ಕೊಟ್ಟ ಮಾತು ಈಡೇರಿಸಲು ಆಗದಿದ್ದರೆ ನಿಮಗೆ ನಮಸ್ಕಾರ ಮಾಡಿ ನಿವೃತ್ತಿ ಆಗುತ್ತೇವೆ . ಶಿವಲಿಂಗೇಗೌಡ ಅವರನ್ನು ಅಭ್ಯರ್ಥಿ ಮಾಡಿಸುತ್ತೇವೆ ಗೆಲ್ಲಿಸಿ ಕಳಿಸಿ ಎಂದು ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.
‘ಹಾಸನ ನೋಡಿದ್ರೆ ಸಿನಿಮಾ ನೋಡಿದ ಹಾಗಾಗುತ್ತೆ’: JDS ಟಿಕೇಟ್ ಗೊಂದಲದ ಬಗ್ಗೆ ಸುರೇಶ್ ವ್ಯಂಗ್ಯ..
‘ಜೆಡಿಎಸ್‌ನಲ್ಲಿ ದೇವೇಗೌಡರು, ಕುಟುಂಬದವರು ಹೇಳಿದ್ದನ್ನ ಕೇಳಿಕೊಂಡು ಬಿದ್ದಿರಬೇಕು’
ನೂರಕ್ಕೆ ನೂರು ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರತ್ತೆ: ಭವಿಷ್ಯ ನುಡಿದ ಸಿದ್ದರಾಮಯ್ಯ..