ಹಾಸನ: ಹಾಸನ ಟಿಕೆಟ್ ಗೊಂದಲ ವಿಚಾರಕ್ಕೆ ಸಂಬಂಧಿಸಿದಂತೆ ಆನೆಕೆರೆ ಗ್ರಾಮದಲ್ಲಿ ಮಾತನಾಡಿದ ಹೆಚ್.ಡಿ.ರೇವಣ್ಣ, ದೇವೇಗೌಡರ ನಿರ್ಧಾರವೇ ಅಂತಿಮ ಎಂದಿದ್ದಾರೆ.
ದೇವೇಗೌಡರಿಗೆ ಅರವತ್ತು ವರ್ಷದ ರಾಜಕೀಯ ಅನುಭವ ಇದೆ. ಅವರು ನಿರ್ಧಾರವೇ ಅಂತಿಮ. ನಾನು ಹಿಂದಿನಿಂದಲೂ ಯಾವುದೇ ಕ್ಷೇತ್ರದ ಟಿಕೆಟ್ ಕೇಳಿಲ್ಲ. ದೇವೇಗೌಡರೇ ಎಲ್ಲಾ ಕ್ಷೇತ್ರಗಳ ಟಿಕೆಟ್ ನಿರ್ಧಾರ ಮಾಡುತ್ತಿದ್ದಾರೆ. ಹಿಂದೆಯೂ ಅವರ ಮಾತು ಕೇಳಿದ್ದೇನೆ, ಈಗಲೂ ಕೇಳುತ್ತೇನೆ, ಮುಂದೆಯೂ ಕೇಳುತ್ತೇನೆ. ದೇವೇಗೌಡರೇ ನಮ್ಮ ಸ್ವರ್ವೋಚ್ಛ ನಾಯಕರು. ಅವರು ತೀರ್ಮಾನ ಮಾಡುತ್ತಾರೆ ಎಂದು ರೇವಣ್ಣ ಹೇಳಿದ್ದಾರೆ.
ಸಾಮಾನ್ಯ ಕಾರ್ಯಕರ್ತನಿಗೆ ಟಿಕೆಟ್ ಎಂಬ ಮಾಜಿಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ಸಹೋದರ ಎಚ್.ಡಿ.ರೇವಣ್ಣ ಟಾಂಗ್ ನೀಡಿದ್ದಾರೆ. ಸಾಮಾನ್ಯ ಕಾರ್ಯಕರ್ತ ಅಂದರೆ ಯಾರು..? ಪಕ್ಷದಿಂದ ಏನು ಫಲಾನುಭವ ಪಡೆಯವದನು . ಪಕ್ಷದಿಂದ ಯಾವ ಫಲ ಪಡೆಯವದನು ಸಾಮಾನ್ಯ ಕಾರ್ಯಕರ್ತ. ಪರೋಕ್ಷವಾಗಿ ಸ್ವರೂಪ್ ಸಾಮಾನ್ಯ ಕಾರ್ಯಕರ್ತ ಅಲ್ಲಾ ಎಂದು ರೇವಣ್ಣ ಅಸಮಾಧಾನ ಹೊರಹಾಕಿದ್ದಾರೆ.
ಶಕುನಿಗಳು ನಮ್ಮ ಕುಟುಂಬದ ಮುಗಿಸಲು ಹೊರಟಿದ್ದಾರೆ ಎಂದು ಕುಮಾರಸ್ವಾಮಿ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ರೇವಣ್ಣ, ನಾನು ಅದಕ್ಕೆ ರಿಯಾಕ್ಟ್ ಮಾಡಲ್ಲ. ಅದೇನು ನನಗೆ ಗೊತ್ತಿಲ್ಲಪ್ಪಾ. ದೇವೇಗೌಡರಿಗೆ ಈ ಜಿಲ್ಲೆಯದ್ದು ಎಲ್ಲಾ ಗೊತ್ತಿದೆ. ದೇವೇಗೌಡರ ಏನು ಹೇಳುತ್ತಾರೆ ನಾವು ಅದನ್ನು ಕೇಳುತ್ತೇವೆ. ಹಾಸನ ಜಿಲ್ಲೆಯಲ್ಲಿ ಏಳು ಕ್ಷೇತ್ರಗಳನ್ನು ಗೆಲ್ಲಬೇಕು. ನಮ್ಮ ಜನ ಉಳಿಯಬೇಕು. ಕುಮಾರಸ್ವಾಮಿ ಅವರು ಸಿಎಂ ಆಗಬೇಕು ಎನ್ನೊದೇ ನಮ್ಮ ಉದ್ದೇಶ ಎಂದು ರೇವಣ್ಣ ಹೇಳಿದ್ದಾರೆ.
ಅಲ್ಲದೇ, ಸಾಮಾನ್ಯ ಕಾರ್ಯಕರ್ತ ಯಾರು ಅಂತ ದೇವೇಗೌಡರು ತೀರ್ಮಾನ ಮಾಡ್ತಾರೆ. ಕಳೆದ ಜನವರಿಯಲ್ಲಿ ದೇವೇಗೌಡರು ತೀರ್ಮಾನ ಮಾಡಿದ್ದಾರೆ. ಸಾಮಾನ್ಯ ಕಾರ್ಯಕರ್ತ ಯಾರು ಅಂತ ನೀವು ಹೇಳಬೇಕು. ರೇವಣ್ಣ, ಇನ್ನೊಬ್ಬ ಇರಬಹುದು ಫಲಾನುಭವಿ. ದೇವೇಗೌಡರ ಮಾತು ಮೀರಿ ನಾನು ಹೋಗಲ್ಲ, ಹಿಂದೆನು ಹೋಗಲ್ಲ, ಮುಂದೆನು ಹೋಗಲ್ಲ ಎಂದು ರೇವಣ್ಣ ಹೇಳಿದ್ದಾರೆ.
ಹಾಸನ ಟಿಕೇಟ್ ಗೊಂದಲದ ಬಗ್ಗೆ ಮೊದಲ ಪ್ರತಿಕ್ರಿಯೆ ಕೊಟ್ಟ ಸೂರಜ್ ರೇವಣ್ಣ..
‘ಕಾದು ನೋಡುತ್ತೇನೆ, ಟಿಕೆಟ್ ಸಿಗದಿದ್ದರೆ ನಮ್ಮ ಕಾರ್ಯಕರ್ತರ ತೀರ್ಮಾನಕ್ಕೆ ನಾನು ಬದ್ಧ’