ಮಂಡ್ಯ: ಎದುರಾಳಿ ಬಗ್ಗೆ ಚಿಂತನೆ ಇಲ್ಲ, ಬಿಜೆಪಿ ಗೆದ್ದೆಗೆಲ್ಲುತ್ತೆ ಎಂದು ಕಾಂಗ್ರೇಸ್ –ಜೆಡಿಎಸ್‌ಗೆ ಅಶೋಕ್ ಜಯರಾಂ ಟಕ್ಕರ್ ಕೊಟ್ಟಿದ್ದಾರೆ. ಮಂಡ್ಯ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ಅಶೋಕ್ ಜಯರಾಂಗೆ ನಿನ್ನೆ ಟಿಕೇಟ್ ಸಿಕ್ಕಿದೆ.
ಈ ಕಾರಣಕ್ಕೆ ಅಶೋಕ್ ಫುಲ್ ಆಕ್ಟೀವ್ ಆಗಿದ್ದು,ಕ್ಷೇತ್ರದ ಮುಖಂಡರನ್ನು ವಿಶ್ವಾಸಕ್ಕೆ ಪಡೆದು ಜಯಗಳಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅಶೋಕ್ ಜಯರಾಂ ಹೆಸರು ಘೋಷಣೆಯಾಗುತ್ತಿದ್ದಂತೆ, ಮುಖಂಡರು ಮತ್ತು ಕಾರ್ಯಕರ್ತರು ಅವರ ನಿವಾಸಕ್ಕೆ ಭೇಟಿ ನೀಡಿದ್ದು, ಶುಭಕೋರಿ, ಕಾರ್ಯಕರ್ತರು ಸನ್ಮಾನ ಮಾಡಿದ್ದಾರೆ. ಬಿಜೆಪಿ ಮುಖಂಡ ಬೇಕರಿ ಅರವಿಂದ್ ಕೂಡ ಅಭಿನಂದನೆ ಸಲ್ಲಿಸಿದ್ದಾರೆ.
ಇನ್ನು ಇದೇ ವೇಳೆ ಹಲವು ಯುವಕರು, ಅಶೋಕ್ ಜಯರಾಂ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದು, ಬಿಜೆಪಿ ಪಕ್ಷದಿಂದ ಅಭ್ಯರ್ಥಿಯಾಗಿ ಘೋಷಣೆ ಮಾಡಲಾಗಿದೆ. ಚುನಾವಣೆಗೆ ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ. ಸದ್ಯದಲ್ಲೇ ಚುನಾವಣೆ ಪ್ರಚಾರ ಆರಂಭಿಸುತ್ತೇವೆ. ಎಸ್.ಡಿ.ಜಯರಾಂ ಅವರ ಕನಸಿನಂತೆ ಮಂಡ್ಯ ನಗರವನ್ನು ಅಭಿವೃದ್ಧಿ ಮಾಡ್ತೇನೆ ಎಂದಿದ್ದಾರೆ.
ಅಲ್ಲದೇ, ಜನರ ಕೃಪೆ ಬಿಜೆಪಿ ಮೇಲೆ ಇರಬೇಕು. ಬಿಜೆಪಿಯಲ್ಲಿ ಯಾವುದೇ ಭಿನ್ನಮತ ಇಲ್ಲ. ಎಲ್ಲರಿಗೂ ಎಲ್ಲಾ ಜವಾಬ್ದಾರಿ ಕೊಟ್ಟಿದೆ. ಮಂಡ್ಯ ನಗರದಲ್ಲಿ ಬಿಜೆಪಿ ಗೆಲ್ಲುವ ವಿಶ್ವಾಸ ಇದೆ. ಜೆಡಿಎಸ್ ಭದ್ರಕೋಟೆ ಅನ್ನೋದು ಬರಿ ಕಾಲ್ಪನಿಕ ಅಷ್ಟೆ. ಎರಡೂ ಪಕ್ಷದಲ್ಲಿ ಬಹಳಷ್ಟು ಗೊಂದಲ ಇದೆ. ಬಿಜೆಪಿಯ ಅಭಿವೃದ್ಧಿ ಕೆಲಸ ಮುಂದಿಟ್ಟು ಮತಯಾಚನೆ ಮಾಡಲಾಗತ್ತೆ. ಕಾಂಗ್ರೆಸ್ ಜೆಡಿಎಸ್ ಗೊಂದಲವೇ ಬಿಜೆಪಿಗೆ ಅಡ್ವಾಂಟೇಜ್. ನಾವು ಮಾಡಿರುವ ಕೆಲಸ ನೋಡಿ ಜನರೇ ಆಶೀರ್ವಾದ ಮಾಡ್ತಾರೆ ಎದುರಾಳಿ ಬಗ್ಗೆ ನಮಗೆ ಚಿಂತನೆ ಇಲ್ಲ ಎಂದು ಅಶೋಕ್ ಜಯರಾಂ ಹೇಳಿದ್ದಾರೆ.