Tuesday, October 22, 2024

Latest Posts

‘ನನಗಷ್ಟೇ ಬಿಜೆಪಿ ಟಿಕೇಟ್ ಸಿಕ್ಕಿದ್ದಕ್ಕೆ ಕಾರಣವೇನಂದ್ರೆ..’

- Advertisement -

ಬೆಂಗಳೂರು: ಬಿಜೆಪಿ ಮೊದಲನೇಯ ಮತ್ತು ಎರಡನೇಯ ಪಟ್ಟಿ ರಿಲೀಸ್ ಆಗಿದ್ದು, ಟಿಕೇಟ್ ಸಿಗುತ್ತದೆ ಎಂಬ ಆಸೆಯಲ್ಲಿದ್ದ ಕೆಲವರಿಗೆ ನಿರಾಸೆಯಾಗಿದೆ. ಅಂಥವರಲ್ಲಿ ಕೆಲವರು ರಿಸೈನ್ ಮಾಡುತ್ತಿದ್ದರೆ, ಇನ್ನು ಕೆಲವರು ಬೇರೆ ಪಕ್ಷಕ್ಕೆ ಹೋಗುತ್ತಿದ್ದಾರೆ. ಮತ್ತೆ ಕೆಲವರು ತಮ್ಮದೇ ಪಕ್ಷ ಕಟ್ಟಿ, ಚುನಾವಣೆಗೆ ನಿಲ್ಲುತ್ತೇನೆ ಎನ್ನುತ್ತಿದ್ದಾರೆ. ಈ ಬದಲಾವಣೆ ಬಿಜೆಪಿಗೆ ತಲೆಬಿಸಿಯಾಗಿ ಪರಿಣಮಿಸಿದೆ.

ಈ ಬಗ್ಗೆ ಬಿ.ವೈ.ವಿಜಯೇಂದ್ರ ಮಾತನಾಡಿದ್ದು, ಈಗಲೂ ಕಾಲ ಮಿಂಚಿಲ್ಲ. ನಮ್ಮ ರಾಜ್ಯ ನಾಯಕರು, ರಾಷ್ಟ್ರ ನಾಯಕರು ಎಲ್ಲರ ಜೊತೆ ಕುಳಿತು ಮಾತನಾಡಿ, ಸಮಸ್ಯೆಯನ್ನ ಬಗೆಹರಿಸುತ್ತಾರೆ. ಕಾರ್ಯಕರ್ತರ ಅಭಿಪ್ರಾಯಗಳು, ಸರ್ವೆ, ಇವೆಲ್ಲದ ಆಧಾರದ ಮೇಲೆ ಪಕ್ಷ ಈ ತೀರ್ಮಾನಕ್ಕೆ ಬಂದಿದೆ. ನಮ್ಮ ನಾಯಕರು ಎಲ್ಲಿ ಪ್ರಚಾರಕ್ಕೆ ಕಳುಹಿಸುತ್ತಾರೋ, ಅಲ್ಲಿ ಹೋಗುತ್ತೇನೆ ಎಂದು ವಿಜಯೇಂದ್ರ ಹೇಳಿದ್ದಾರೆ.

ಇನ್ನು ಸೋಮಣ್ಣ ಅವರ ಮಗನಿಗೆ ಸೇರಿ, ಇನ್ನು ಕೆಲವು ಶಾಸಕರ ಮಕ್ಕಳಿಗೆ ಟಿಕೇಟ್ ಸಿಕ್ಕಿಲ್ಲ. ಆದ್ರೆ ನಿಮಗಷ್ಟೇ ಟಿಕೇಟ್ ಸಿಕ್ಕಿದೆ. ಯಾಕೆ ಹೀಗೆ ಎಂಬ ಮಾಧ್ಯಮದ ಪ್ರಶ್ನೆಗೆ ಉತ್ತರಿಸಿದ ವಿಜಯೇಂದ್ರ, ನಾನು 2000ದ ಇಸವಿಯಿಂದಲೂ ಬೆಂಗಳೂರಿನಲ್ಲಿ ಬಿಜೆಪಿ ಕಾರ್ಯದರ್ಶಿಯಾಗಿ ದುಡಿದಿದ್ದೇನೆ. ನಂತರ ಬಿಜೆಪಿ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿಯಾಗಿ ಪ್ರವಾಸ ಕೈಗೊಂಡಿದ್ದೇನೆ. ಪ್ರಸ್ತುತ ಉಪಾಧ್ಯಕ್ಷನಾಗಿ ಕೆಲಸ ಮಾಡುತ್ತಿದ್ದೇನೆ.

ಯಡಿಯೂರಪ್ಪನವರ ಮಗ ಅನ್ನೋ ಕಾರಣಕ್ಕೆ ಟಿಕೇಟ್ ಕೊಡುವುದೇ ಆಗಿದ್ದರೆ, ಕಳೆದ ವಿಧಾನಸಭಾ ಚುನಾವಣೆಯಿಂದಲೇ, ನನಗೆ ವರುಣಾದಿಂದ ಟಿಕೇಟ್ ಸಿಗುತ್ತಿತ್ತು. ಹಾಗಾಗಿ ಬಿಜೆಪಿಯಲ್ಲಿ ಯಡಿಯೂಪ್ಪನ ಮಗ ಅಂತಾನೋ, ಇನ್ಯಾರದ್ದೋ ಮಗ ಅಂತಾನೋ ಟಿಕೇಟ್ ಕೊಡುವುದಿಲ್ಲ. ಬದಲಾಗಿ, ಎಲ್ಲವನ್ನೂ ಗಮನಿಸಿ, ಚರ್ಚಿಸಿಯೇ ಟಿಕೇಟ್ ಕೊಡುತ್ತಾರೆ ಎಂದು ವಿಜಯೇಂದ್ರ ಹೇಳಿದ್ದಾರೆ.

ಇನ್ನು ನಾಮಪತ್ರ ಸಲ್ಲಿಕೆ ಬಗ್ಗೆ ಮಾತನಾಡಿದ ವಿಜಯೇಂದ್ರ, ಏಪ್ರಿಲ್ 19ರಂದು ಶಿಕಾರಿಪುರದ ಬಿಜೆಪಿಯ ಹಿರಿಯ ನಾಯಕರ ಮಾತಿನಂತೆ, ನಾನು ನಾಮಪತ್ರ ಸಲ್ಲಿಸಲಿದ್ದೇನೆ ಎಂದಿದ್ದಾರೆ.

‘ಹೊಳೆನರಸೀಪುರಕ್ಕೆ ಬಂದು ಟೀ ಕುಡಿದು ದೋಸೆ ತಿನ್ನೋದು ಬಿಡಿ. ನಿಮ್ಮ ಕ್ಷೇತ್ರದಲ್ಲಿ ಕೆಲಸ ಮಾಡಿ’

‘ಕೈ ಅಭ್ಯರ್ಥಿ ಇನ್ನೂ 8 ತಿಂಗಳಲ್ಲಿ ಜೈಲಿಗೆ ಹೋಗ್ತಾರೆ.’

‘ಹುಣಸೆಹಣ್ಣು ಬೀಜ ಆಯುತ್ತಿದ್ದವರನ್ನು ಕರೆತಂದು ನಗರಸಭೆ ಸದಸ್ಯನಾಗಿ ಮಾಡಿದೆ’

- Advertisement -

Latest Posts

Don't Miss