Tuesday, October 22, 2024

Latest Posts

ಬಿಜೆಪಿ ಗೆದ್ದರೆ ಯಾರು ಸಿಎಂ ಆಗ್ತಾರೆ ಅನ್ನೋ ಪ್ರಶ್ನೆಗೆ ವಿಜಯೇಂದ್ರ ಹೇಳಿದ್ದು ಹೀಗೆ..

- Advertisement -

ಬೆಂಗಳೂರು: ಬೆಂಗಳೂರಿನಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಬಿಜೆಪಿ ಅಭ್ಯರ್ಥಿ ಬಿ.ವೈ.ವಿಜಯೇಂದ್ರ, ‘ಖಂಡಿತವಾಗಿಯೂ ನಾವು ಈ ಬಾರಿ ಪೂರ್ಣ ಬಹುಮತದಿಂದ ಗೆಲ್ಲಲಿದ್ದೇವೆ. ಅಧಿಕಾರಕ್ಕೆ ಬರಲಿದ್ದೇವೆ’ ಎಂದು ಹೇಳಿದ್ದಾರೆ.

‘ಯಾಕಂದ್ರೆ ರಾಜ್ಯದಲ್ಲಿ ಹಲವಾರು ಬಾರಿ, ಕೇಂದ್ರ ನಾಯಕರು ಪ್ರವಾಸ ಮಾಡಿದ್ದಾರೆ. ನಡ್ಡಾಜಿ, ಮಿತ್ ಶಾ ಜಿ, ಪ್ರಧಾನಿಗಳು ಬಂದು ಪ್ರವಾಸ ಮಾಡಿದ್ದಾರೆ. ಅಲ್ಲದೇ ಸಿಎಂ ಬೊಮ್ಮಾಯಿಯವರು, ಯಡಿಯೂರಪ್ಪನವರು, ರಾಜ್ಯಾಧ್ಯಕ್ಷ, ಎಲ್ಲ ರಾಜ್ಯ ನಾಯಕರು, ವಿಜಯ ಸಂಕಲ್ಪ ಯಾತ್ರೆ, ವಿವಿಧ ಮೋರ್ಚಾಗಳ ಸಮಾವೇಶ, ಎಲ್ಲಾ ಕಾರ್ಯಕ್ರಮಗಳನ್ನ ಯಶಸ್ವಿಯಾಗಿ ನಡೆಸಿಕೊಟ್ಟಿದ್ದಾರೆ’.

‘ನಮ್ಮ ಕಾರ್ಯಕರ್ತರು ರಣೋತ್ಸಾಹದಲ್ಲಿದ್ದಾರೆ. ಸಂಘಟನೆಯ ಶಕ್ತಿ, ಕಾರ್ಯಕರ್ತರ ಬಲಗಳ ಆಧಾರದ ಮೇಲೆ, ಕೇಂದ್ರ, ರಾಜ್ಯ ಸರ್ಕಾರಗಳು ಕೊಟ್ಟಂತಹ ಯೋಜನೆಗಳ ಆಧಾರದ ಮೇಲೆ, ಮತ್ತೊಮ್ಮೆ ರಾಜ್ಯದಲ್ಲಿ ಭಾರತೀಯ ಜನತಾ ಪಕ್ಷ ಸ್ಪಷ್ಟ ಬಹುಮತದೊಂದಿಗೆ, ಅಧಿಕಾರಕ್ಕೆ ಬರುತ್ತೆ ಎನ್ನುವುದರಲ್ಲಿ ನಿಮಗೆ ಯಾವುದೇ ಸಂದೇಹ ಬೇಡ’ ಎಂದು ವಿಜಯೇಂದ್ರ ಹೇಳಿದ್ದಾರೆ.

ಇನ್ನು ನಿಮ್ಮದೇ ಆದಂಥ ಒಂದಿಷ್ಟು ಕ್ಷೇತ್ರಗಳಿದೆ. ಯಡಿಯೂರಪ್ಪನವರ ಕೈಯಲ್ಲಿ ಆಗದ ಕೆಲಸ ವನ್ನ ನೀವು ಮಾಡಿದ್ದೀರಿ. ಕೆ.ಆರ್.ಪೇಟೆ ಗೆಲ್ಲಿಸಿದ್ದೀರಿ, ಶಿರಾ ಗೆಲ್ಲಿಸಿದ್ದೀರಿ. ಅದೇ ರೀತಿ ನಿಮ್ಮ ಮೇಲೆ ಅವಲಂಬಿತವಾಗಿರುವ ಕ್ಷೇತ್ರಗಳು ಬಹಳಷ್ಟಿದೆ. ಅಲ್ಲೆಲ್ಲಾ ಪ್ರಚಾರಕ್ಕೆ ಹೋಗುತ್ತೀರಾ ಎಂಬ ಕರ್ನಾಟಕ ಟಿವಿ ಪ್ರಶ್ನೆಗೆ ಉತ್ತರಿಸಿದ ವಿಜಯೇಂದ್ರ, ಯಾರೋ ಒಬ್ಬರ ಮೇಲೆ ಅವಂಬಿತರಾಗಿ ಪಕ್ಷ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ. ಹಿಂದೆ ನಮ್ಮ ಪಕ್ಷ ಕೆ.ಆರ್. ಪೇಟೆ, ಶಿರಾ ಉಪಚುನಾವಣೆ ಪ್ರಚಾರಕ್ಕೆ ಅವಕಾಶ ಕೊಟ್ಟಿತ್ತು. ಹಾಗಂತ ಅಲ್ಲಿ ಗೆದ್ದಿರುವುದು ವಿಜಯೇಂದ್ರನ ವಿಕ್ಟರಿ ಅಲ್ಲ. ನಮ್ಮ ಅಭಿವೃದ್ಧಿ ಕಾರ್ಯಗಳು. ಕಾರ್ಯಕರ್ತರ ಉತ್ಸಾಹ, ಸಂಘಟನಾ ಶಕ್ತಿಯ ಆಧಾರದ ಮೇಲೆ ಅಲ್ಲಿ ಗೆಲುವು ಸಾಧಿಸಲು ಸಾಧ್ಯವಾಯಿತು ಎಂದು ವಿಜಯೇಂದ್ರ ಹೇಳಿದ್ದಾರೆ.

ಅಲ್ಲದೇ ಮೇ 13ನೇ ತಾರೀಖು, ನೂರಕ್ಕೆ ನೂರು, ರಾಜ್ಯದಲ್ಲಿ ಭಾರತೀಯ ಜನತಾಪಾರ್ಟಿ ಅಧಿಕಾರಕ್ಕೆ ಬರುತ್ತದೆ. ಅದನ್ನು ಯಾರೂ ಕೂಡ ತಪ್ಪಿಸುವುದಕ್ಕೆ ಸಾಧ್ಯವಿಲ್ಲ ಎಂದು ವಿಜಯೇಂದ್ರ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಯಾರು ಮುಖ್ಯಮಂತ್ರಿಯಾಗ್ತಾರೆ ಎಂಬ ಕರ್ನಾಟಕ ಟಿವಿ ಪ್ರಶ್ನೆಗೆ ಉತ್ತರಿಸಿದ ವಿಜಯೇಂದ್ರ, ಅದನ್ನೆಲ್ಲ ಕೇಂದ್ರ ತೀರ್ಮಾನ ಮಾಡುತ್ತೆ. ನಮ್ಮ ನಾಯಕರು ತೀರ್ಮಾನ ಮಾಡುತ್ತಾರೆ. ರಾಜ್ಯದಲ್ಲಿ ಪಕ್ಷ ಅಧಿಕಾರಕ್ಕೆ ಬರುವುದು ಮುಖ್ಯ, ಯಾರು ಮುಖ್ಯಮಂತ್ರಿಯಾಗ್ತಾರೆ ಅನ್ನೋದು ಮುಖ್ಯವಲ್ಲ ಎಂದು ಹೇಳಿದ್ದಾರೆ.

‘ನನಗಷ್ಟೇ ಬಿಜೆಪಿ ಟಿಕೇಟ್ ಸಿಕ್ಕಿದ್ದಕ್ಕೆ ಕಾರಣವೇನಂದ್ರೆ..’

‘ಕೈ ಅಭ್ಯರ್ಥಿ ಇನ್ನೂ 8 ತಿಂಗಳಲ್ಲಿ ಜೈಲಿಗೆ ಹೋಗ್ತಾರೆ.’

‘ಹುಣಸೆಹಣ್ಣು ಬೀಜ ಆಯುತ್ತಿದ್ದವರನ್ನು ಕರೆತಂದು ನಗರಸಭೆ ಸದಸ್ಯನಾಗಿ ಮಾಡಿದೆ’

- Advertisement -

Latest Posts

Don't Miss