Tuesday, December 24, 2024

Latest Posts

ಡಿಕೆಶಿಯನ್ನು ಭೇಟಿ ಮಾಡಿದ ಯೋಗೇಶ್ ಬಾಬು: ಕಾಂಗ್ರೆಸ್ ಸೇರ್ತಾರಾ ರೆಬೆಲ್ ನಾಯಕ..?

- Advertisement -

ಬೆಂಗಳೂರು: ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ಚುನಾವಣಾ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುತ್ತಿದ್ದಂತೆ, ಟಿಕೇಟ್ ಸಿಗದವರೆಲ್ಲ ಬಂಡೇಳುತ್ತಿದ್ದಾರೆ. ಬಿಜೆಪಿಯಿಂದ ಜೆಡಿಎಸ್, ಜೆಡಿಎಸ್‌ನಿಂದ ಕಾಂಗ್ರೆಸ್, ಕಾಂಗ್ರೆಸ್‌ನಿಂದ ಬಿಜೆಪಿ, ಹೀಗೆ ಪಕ್ಷದಿಂದ ಪಕ್ಷಕ್ಕೆ ಜಂಪ್ ಮಾಡುತ್ತಿದ್ದಾರೆ. ಕೆಲವರು ಪಕ್ಷೇತರ ಅಭ್ಯರ್ಥಿಯಾಗಿ ನಿಂತು, ಟಕ್ಕರ್ ಕೊಡಲು ಮುಂದಾಗಿದ್ದಾರೆ. ಅದೇ ರೀತಿ ಬಿಜೆಪಿಯಲ್ಲಿದ್ದು ಹಲವು ವರ್ಷಗಳಿಂದ ಪಕ್ಷ ಸಂಘಟನೆ ಮಾಡಿದ್ದರೂ ಕೂಡ, ತನಗೆ ಟಿಕೇಟ್ ಸಿಗಲಿಲ್ಲವೆಂಬ ಕಾರಣಕ್ಕೆ, ಮೊಳಕಾಲ್ಮೂರು ಟಿಕೇಟ್ ಆಕಾಂಕ್ಷಿ ಯೋಗೇಶ್ ಬಾಬು ರೆಬೆಲ್ ಆಗಿದ್ದರು.

ತನ್ನ ಬೆಂಬಲಿಗರು ಈ ಬಗ್ಗೆ ಏನು ಹೇಳುತ್ತಾರೆಂದು ಕೇಳಿ ನಂತರ ಈ ಬಗ್ಗೆ ನಿರ್ಧರಿಸುತ್ತೇನೆ. ಆದರೆ ನಾನು ಯಾವ ಪಕ್ಷದಿಂದ ನಿಂತರೂ ಅಥವಾ ಪಕ್ಷೇತರವಾಗಿ ನಿಂತರೂ, ಜನ ನನಗೆ ಮತ ಹಾಕುತ್ತಾರೆಂಬ ನಂಬಿಕೆ ಇದೆ. ಯಾಕಂದ್ರೆ ನಾನು ಅವರೊಂದಿಗೆ ಇದ್ದವನು. ನಾನೆಂದು ಅವರಿಗೆ ಗೊತ್ತಿದೆ ಎಂದು ಯೋಗೇಶ್ ಬಾಬು ಮೊನ್ನೆ ತಾನೇ ಮಾಧ್ಯಮದವರೊಂದಿಗೆ ಮಾತನಾಡಿದ್ದರು.

ಸದ್ಯ ಬಿಜೆಪಿ ತೊರೆಯಲು ನಿರ್ಧರಿಸಿರುವ ಯೋಗೇಶ್, ಕಾಂಗ್ರೆಸ್ ಸೇರುತ್ತಾರಾ ಎಂಬ ಪ್ರಶ್ನೆ ಉದ್ಭವಿಸಿದೆ. ಯಾಕಂದ್ರೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನಿವಾಸಕ್ಕೆ ಹೋಗಿ, ಅವರೊಂದಿಗೆ ಈ ಬಗ್ಗೆ ಚರ್ಚಿಸಲಾಗಿದೆ. ಇದರ ಬಗ್ಗೆ ಟ್ವೀಟ್ ಮಾಡಿರುವ ಡಿಕೆಶಿ, ಟಿಕೆಟ್ ಸಿಗದೆ ನೊಂದಿದ್ದ ಮೊಳಕಾಲ್ಮುರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಶ್ರೀ ಯೋಗೇಶ್ ಬಾಬು ಅವರೊಂದಿಗೆ ಇಂದು ಯಶಸ್ವಿ ಸಂಧಾನ ಮಾತುಕತೆ ನಡೆಸಲಾಯಿತು. ಅವರ‌ ರಾಜಕೀಯ ಬೆಳವಣಿಗೆಗೆ ಪಕ್ಷವು ಬೆನ್ನಾಗಿ ನಿಲ್ಲುವುದಾಗಿ ಭರವಸೆ ನೀಡಿ ಅವರನ್ನು ಸಂತೈಸಲಾಯಿತು, ಎಂದು ಬರೆದುಕೊಂಡಿದ್ದಾರೆ.

ಇಷ್ಟೇ ಅಲ್ಲದೇ, ಇಂದು ನೆಲಮಂಗಲದಲ್ಲಿ ನಡೆದ ಕಾಂಗ್ರೆಸ್‌ನ ಬೃಹತ್ ಸಮಾವೇಶದಲ್ಲಿ ಹಲವರು ಕಾಂಗ್ರೆಸ್ ಸೇರಿದ್ದಾರೆ. ಈ ಬಗ್ಗೆಯೂ ಡಿಕೆಶಿ ಟ್ವೀಟ್ ಮಾಡಿದ್ದು, ಕಾಂಗ್ರೆಸ್ ಪಕ್ಷವು ನಾಡಿನ ಜನರ ಬದುಕು ಹಸನುಗೊಳಿಸಲು ಗ್ಯಾರಂಟಿಗಳನ್ನು ನೀಡಿದೆ. ಕಾಂಗ್ರೆಸ್ ಸಿದ್ಧಾಂತಗಳಿಂದ ಪ್ರೇರೇಪಿತರಾಗಿ ಬೇರೆ ಪಕ್ಷಗಳಿಂದ ನಾಯಕರು ಸೇರ್ಪಡೆಗೊಳ್ಳುತ್ತಿದ್ದಾರೆ. ಕಾಂಗ್ರೆಸ್ ಆಡಳಿತ ಜನಸಾಮಾನ್ಯರ ಬದುಕನ್ನು ಹಸನಾಗಿಸಲಿದೆ. ಇದು ಕಾಂಗ್ರೆಸ್‌ನ ಶಕ್ತಿ ಎಂದು ವಿವರಿಸಿದೆ ಎಂದು ಬರೆದುಕೊಂಡಿದ್ದಾರೆ.

ದಿನ ಕಳೆದಂತೆ ಹೆಚ್ಚಾಗುತ್ತಿದೆ ಬಿಜೆಪಿ ಸೇರ್ಪಡೆ ಪರ್ವ

ಮಂಡ್ಯ ಮತದಾರರ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ನಟ ಸತೀಶ್ ನಿನಾಸಂ

‘ನಾನು ಈ ಜಾತಿಯಲ್ಲೇ ಹುಟ್ಟಿದ್ದು ತಪ್ಪಾಯ್ತಾ?’ : ಟಿಕೇಟ್ ಸಿಗದ ಕಾರಣ ಭಾವುಕರಾದ ಮೋಹನ್ ಕೃಷ್ಣ

- Advertisement -

Latest Posts

Don't Miss