ಹಾಸನ: ಹಾಸನದಲ್ಲಿ ಜೆಡಿಎಸ್‌ನಿಂದ ಯಾರಿಗೆ ಟಿಕೇಟ್ ಸಿಗತ್ತೆ ಅನ್ನೋ ಕುತೂಹಲಕ್ಕೆ ಕೊನೆಗೂ ಬ್ರೇಕ್ ಬಿದ್ದಿದೆ. ಸ್ವರೂಪ್ ಗೌಡ ಅವರಿಗೆ ಟಿಕೇಟ್ ಕೊಡುವ ಮೂಲಕ, ನಿಮ್ಮದು ಕುಟುಂಬ ರಾಜಕಾರಣ ಅನ್ನೋ ಆರೋಪವನ್ನ ಮಾಜಿ ಸಿಎಂ ಕುಮಾರಸ್ವಾಮಿ ತಳ್ಳಿಹಾಕಿದ್ದಾರೆ.
ಇನ್ನು ಭವಾನಿ ರೇವಣ್ಣಗೆ ಟಿಕೇಟ್ ಸಿಕ್ಕದಿದ್ದಲ್ಲಿ, ತನಗೂ ಟಿಕೇಟ್ ಬೇಡವೆಂದು ರೇವಣ್ಣ ಹೇಳಿದ್ದರು. ಆದರೆ ನಿನ್ನೆಯಷ್ಟೇ ದೇವೇಗೌಡರು ಏನು ಹೇಳುತ್ತಾರೆ ಅದನ್ನೇ ಕೇಳುತ್ತೇವೆ. ಅವರ ನಿರ್ಧಾರವೇ ಅಂತಿಮ. ಅವರು ಯಾರಿಗೆ ಟಿಕೇಟ್ ನೀಡುತ್ತಾರೋ, ಅವರಿಗೆ ನಾನು ಬೆಂಬಲಿಸುತ್ತೇನೆ ಎಂದು ಹೇಳಿದ್ದರು. ಅದರಂತೆ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರೇವಣ್ಣ, ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಬೇಕು ಅನ್ನೋದಷ್ಟೇ ನಮ್ಮ ಆಶಯ. ಹಾಗಾಗಿ ನಾನು ಸ್ವರೂಪ್‌ಗೆ ಪೂರ್ಣಪ್ರಮಾಣದಲ್ಲಿ ಬೆಂಬಲಿಸುತ್ತೇನೆ. ಹಾಸನದಲ್ಲಿ ಜೆಡಿಎಸ್ ಗೆಲ್ಲಿಸಲು ಸಂಪೂರ್ಣವಾಗಿ ಪ್ರಯತ್ನಿಸುತ್ತೇನೆ ಎಂದಿದ್ದಾರೆ.
ಮಂಗಳೂರು, ಉತ್ತರ ಕನ್ನಡ, ತುಮಕೂರು, ಚಿತ್ರದುರ್ಗ ಸೇರಿ ವಿವಿಧ ಭಾಗಗಳ ಅಸಂಖ್ಯಾತ ನಾಯಕರು ಜೆಡಿಎಸ್‌ಗೆ ಸೇರ್ಪಡೆ
ಟಿಕೇಟ್ ಕೈತಪ್ಪಿದ್ದರೆ ರೆಬೆಲ್ ಆದ ಎಂ.ಪಿ.ಕುಮಾರಸ್ವಾಮಿ, ಜೆಡಿಎಸ್‌ಗೆ ಸೇರ್ಪಡೆ..
‘ನಾನು ಹಳೇ ಕುರುಬ, ವರ್ತೂರು ಪ್ರಕಾಶ್ ಹೊಸ ಕುರುಬರು. ಹಾರ, ತುರಾಯಿ ಬೇಡ, ಗೌರವ ಕೊಡಿ’