Monday, December 23, 2024

Latest Posts

‘ಹಾಸನಕ್ಕೆ ಪ್ರೀತಂಗೌಡ ಯೋಗ್ಯ ಅನ್ನೋ ಅಭಿಪ್ರಾಯ ಇದೆ’

- Advertisement -

ಹಾಸನ: ಹಾಸನದಲ್ಲಿಂದು ಮಾತನಾಡಿದ ಶಾಸಕ ಪ್ರೀತಂಗೌಡ, ತಾವು ಹಾಸನದಲ್ಲಿ ಯಾವ ರೀತಿ ಕಾರ್ಯನಿರ್ವಹಿಸಿದ್ದೇವೆ ಎಂಬ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

25 ರಿಂದ 30 ವರ್ಷ ಒಡನಾಟ ಇದ್ದಂತಹವರಿಗೆಲ್ಲಾ ಯಾವ ರೀತಿ ಕೆಲಸ‌ ಮಾಡಿಕೊಟ್ಟಿದ್ದಾರೆ ಅನ್ನೋದನ್ನೂ ನೋಡಿದ್ದಾರೆ. ಪ್ರೀತಂಗೌಡ ಯಾವ ರೀತಿ ಅಭಿವೃದ್ಧಿ ಮಾಡಿ ಕಾರ್ಯಕರ್ತರಿಗೆ ಸ್ಪಂದಿಸಿದ್ದಾರೆ ಅನ್ನೋದನ್ನೂ‌ ನೋಡಿದ್ದಾರೆ. ಎಲ್ಲವನ್ನೂ ತುಲನ ಮಾಡಿದಂತಹ ಸಂದರ್ಭದಲ್ಲಿ ಪ್ರೀತಂಗೌಡ ಯೋಗ್ಯ ಅನ್ನೋ ಅಭಿಪ್ರಾಯ ಇದೆ ಎಂದು ಪ್ರೀತಂಗೌಡ ಹೇಳಿದ್ದಾರೆ.

ಅಲ್ಲದೇ, ಹೇಮಾವತಿ ನಗರದ ನಮ್ಮ ಎಲ್ಲಾ ನಿವಾಸಿಗಳೂ ಕೂಡಾ 2018 ರ ಚುನಾವಣೆಯಲ್ಲಿ ಲೀಡ್ . ಮುನ್ಸಿಪಾಲಿಟಿ ಎಲೆಕ್ಷನ್ ನಲ್ಲಿ ನಾವು ಗೆದ್ದಿದ್ದೇವೆ, ಎಂಪಿ ಎಲೆಕ್ಷನ್ ನಲ್ಲಿ ಲೀಡ್ ಕೊಟ್ಟಿದ್ದಾರೆ. ಆ ಭಾಗದ ಜನರು ನನ್ನ ಜೊತೆ ಇದ್ದಾರೆ. ಆ ಭಾಗದಿಂದ ನಾನೊಬ್ಬ ಅಭ್ಯರ್ಥಿ ಆಗ್ತೇನೆ ಅನ್ನೋವವರು ಫಸ್ಟ್ ಅವರ ಮನೆ ಬೂತ್ ಆದ್ರೂ ಲೀಡ್ ಮಾಡ್ಕೋಬೇಕಲ್ವಾ.

ಈಗ ನಾನು ವಿದ್ಯಾನಗರದಿಂದ ಅಭ್ಯರ್ಥಿ, ನನ್ನ ಮನೆ ವಿದ್ಯಾನಗರ ಅಭ್ಯರ್ಥಿಯಾಗಿ ಬಿಜೆಪಿಯಿಂದ ಇದ್ದೇನೆ. ಕಳೆದ ಭಾರಿ ವಿದ್ಯಾನಗರದ ಬೂತ್ ಲೀಡ್ ಕೊಟ್ಟಿದೆ. ಫಸ್ಟ್ ನಮ್ಮ ಮನೆ ಬೂತ್ ಲೀಡ್ ಮಾಡಬೇಕು. ನಮ್‌ ಊರು ನಾವ್ ಲೀಡ್ ಮಾಡಬೇಕು.  ಆ ಕೆಲ್ಸವನ್ನ ನಾನು‌ ಮಾಡ್ತಾ ಇದ್ದೇನೆ. ನಮ್ಮ ಇರೋ ಬೂತ್ ಲೀಡ್ ಆಗುತ್ತಾ ಅಂತಾ ಆತ್ಮಾವಲೋಕನ ಮಾಡಿಕೊಳ್ಳಲಿ. ಆದಾದ ನಂತರ 275 ಬೂತ್ ಗಳಲ್ಲಿ ಯಾವ ಬೂತ್ ನಲ್ಲಿ ಲೀಡ್ ಬರುತ್ತೆ ಅಂತಾ ಯೋಚನೆ ಮಾಡಲಿ ಎಂದು ಪ್ರೀತಂಗೌಡ ಟಾಂಗ್‌ ಕೊಟ್ಟಿದ್ದಾರೆ.

ಯಾವುದೋ ಒಂದು ಧರ್ಮ, ಯಾವುದೋ ಒಂದು ಭಾಗ ಸಹಾಯ ಮಾಡ್ತಾರ ಅಂತಾ ಕಪೋಕಲ್ಪಿತವಾಗಿ ಯೋಚನೆ ಮಾಡಿಕೊಂಡ್ರೆ, ಆ ಭಾಗದಲ್ಲಿಯೂ ಕೂಡಾ ಅಂದರೆ ಮುಸಲ್ಮಾನ್ ಬಂದುಗಳೂ ಕೂಡಾ ಶೇಕಡಾ 51 ರಷ್ಟು ಬಿಜೆಪಿಗೆ ವೋಟ್ ಬರುತ್ತೆ . ಸ್ವರೂಪ್ ಅವರಿಗೆ ಹೇಮಾವತಿ ನಗರ ಅಲ್ಲ 276 ಬೂತ್ ನಲ್ಲಿಯೂ ಬಿಜೆಪಿಗೆ ಲೀಡ್ ಬರುತ್ತೆ. ಅವರಿಗೆ ಅವರ ಮನೆ ವಾರ್ಡ್ ನಲ್ಲಿಯೇ ಬೆಂಬಲ ಇಲ್ಲ ಎಂದ ಮೇಲೆ.  ಅವರು ಅಭ್ಯರ್ಥಿ ಆಗೋದಕ್ಕೆ ಯಾವ ಮಾನದಂಡದ ಮೇಲೆ ಕೇಳ್ತಾ ಇದ್ದಾರೆ ಅಂತಾ ಕಾರ್ಯಕರ್ತರು ಹೇಳ್ತಾ ಇದ್ದಾರೆ. ಪ್ರಕಾಶ ಅವರು ನಿಂತಂತಹ ಸಂದರ್ಭದಲ್ಲಿಯೂ ಹೇಮಾವತಿ ನಗರ ಬಿಜೆಪಿ ಜೊತೆ ಗಟ್ಟಿಯಾಗಿ ನಿಲ್ತು. ಕಾರಣ ಇಷ್ಟೇ ಐದು ಬಾರಿ ಶಾಸಕರಾದ್ರೂ ಅವರ ಮನೆ ಮುಂದೆ ರಸ್ತೆಯನ್ನು ರಿಪೇರಿ‌ ಮಾಡಿಸಿರಲಿಲ್ಲ. ಮೂಲಭೂತ ಸೌಕರ್ಯ ಇರಲಿಲ್ಲ ಎಂದು ಪ್ರೀತಂ ಗೌಡ ಹೇಳಿದ್ದಾರೆ.

‘ನನಗೆ ಬಿಜೆಪಿಯಲ್ಲಿ ನಿಜಕ್ಕೂ ಮೋಸವಾಗಿದೆ, ಈ ರೀತಿ ಅವಮಾನ ಮಾಡುತ್ತಾರೆ ಎಂದುಕೊಂಡಿರಲಿಲ್ಲ’

ಜೆಡಿಎಸ್ ಭರವಸೆಗಳ ಪತ್ರ ಬಿಡುಗಡೆ ಮಾಡಿದ ಮಾಜಿ ಪ್ರಧಾನಿ ಹೆಚ್.ಡಿ.ದೇವೆಗೌಡರು

ಮತ್ತೆ 6 ಅಭ್ಯರ್ಥಿಗಳನ್ನು ಘೋಷಣೆ ಮಾಡಿದ ಹೆಚ್.ಡಿ.ಕುಮಾರಸ್ವಾಮಿ

- Advertisement -

Latest Posts

Don't Miss